'ಯುವ ಜನತೆಗೆ ಏಡ್ಸ್ ಬಗ್ಗೆ ಜಾಗೃತಿ ಅರಿವು ಅಗತ್ಯ'
ಕ.ಪ್ರ.ವಾರ್ತೆ, ಶೃಂಗೇರಿ, ಡಿ.1 ಮಹಾಮಾರಿ ಏಡ್ಸ್‌ಗೆ ಬಲಿಯಾಗುತ್ತಿರುವವಲ್ಲಿ ಯುವಕರೇ ಸಂಖ್ಯೆಯೇ ಹೆಚ್ಚಾಗಿದ್ದು, ಯುವಜನತೆಗೆ ಏಡ್ಸ್ ಬಗ್ಗೆ ಜಾಗೃತಿ ಅಗತ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ರೆಡ್ ರಿಬ್ಬನ್ ಕ್ಲಬ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ 24 ಲಕ್ಷ ಮೀರಿದ್ದು, ಾಜ್ಯದಲ್ಲಿ 2 ಲಕ್ಷ 40 ಸಾವಿರ ದಾಟಿದೆ. ಪ್ರತಿದಿನ 3 ಸಾವಿರ ಜನರು ಎಚ್ ಐ ವಿ ಸೋಂಕಿತರಾಗುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜನಜಾಗೃತಿಯಿಂದ ಏಡ್ಸ್ ತಡೆಗಟ್ಟಬಹುದಾಗಿದೆ ಎಂದರು.
ಸರ್ಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ್, ಎಚ್. ನಾ ಗರಾಜ್, ಬೇಗಾರು ಸಾರ್ವಜನಿಕ ಆಸ್ಪತ್ರೆಯ ಎಂ.ಎಸ್. ರಾವ್ ಮೊದಲಾದವರು ಉಪಸ್ಥಿತರಿದ್ದರು. ಮಂದಾರ ಸ್ವಾಗತಿಸಿದರು.
--
ಅಕ್ರಮ ಮದ್ಯ ವಶ: ಒಬ್ಬನ ಬಂಧನ
ಕ.ಪ್ರ.ವಾರ್ತೆ, ಕೊಪ್ಪ, ಡಿ.1 ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಮನೆಯಲ್ಲಿ ಮದ್ಯ ಮಾರಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಎಂ.ಕೆ. ವಿಶ್ವನಾಥ ನಾಯ್ಕ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿ ಅಕ್ರಮ ಮದ್ಯ ಹಾಗೂ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್‌ಪಿ ಎಂ.ಕೆ. ವಿಶ್ವನಾಥ ನಾಯ್ಕ, ಹಲವು ದಿನಗಳಿಂದ ಪಟ್ಟಣದ ಸಮೀಪದ ನೇತಾಜಿ ನಗರದ ಮನೆಯೊಂದರಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮದ್ಯ ಮಾರಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಇತ್ತು.
ಅದರ ಆಧಾರದ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಯಾವುದೇ ಪರವಾನಗಿ ಇಲ್ಲದೆ ವಿವಿಧ ಕಂಪನಿಯ 177 ಕ್ವಾಟರ್ ಬಾಟಲ್ ಹಾಗೂ 46, 90 ಪೆಡ್ ಬಾಟಲ್ ಮದ್ಯ ವಶಪಡಿಸಿಕೊಂಡು ಮಾರಾಟ ಮಾಡುತ್ತಿದ್ದ ಮನೆಯ ಮಾಲೀಕ ಪಾಪ್ಪಚ್ಚಿ ಎಂಬುವರನ್ನು ಬಂಧಿಸಲಾಗಿದೆ.
ಮದ್ಯವಶ: ಸುಮಾರು ರು. 10,000 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಇಷ್ಟು ಪ್ರಮಾಣದ ಮದ್ಯವನ್ನು ಎಲ್ಲಿಂದ ತಂದು ಮಾರುತ್ತಿದ್ದಾರೆ ಎಂಬುದನ್ನು ತನಿಖೆ ವೇಳೆಯಲ್ಲಿ ದೃಢಪಡಿಸಿಕೊಂಡು ಅಕ್ರಮ ಮದ್ಯ ಮಾರಟಕ್ಕೆ ಸಹಕಾರಿಸಿದವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಯಚರಣೆಯಲ್ಲಿ ವೃತ್ತ ನಿರೀಕ್ಷಕ ಎ.ಎಸ್. ಪಾಟೀಲ್, ಪಿಎಸ್‌ಐ ಜಯಕರ್, ಪೊಲೀಸ್ ಸಿಬ್ಬಂದಿ ಶಿವಾನಂದ್, ವಿಶ್ವನಾಥ, ಬಾಳೇಗಾರ್, ನವೀನ್, ಶಿವಶಂಕರ್ ಭಟ್, ತಮ್ಮಯ್ಯ, ಇದ್ದರು.
ತಾಲೂಕಿನಲ್ಲಿ ಅಬಕಾರಿ ಇಲಾಖೆ ನಿಷ್ಕ್ರಿಯವಾಗಿರುವ ಸಮಯದಲ್ಲಿ ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿರುವುಗದು ಸಂತಸ ತಂದಿದೆ. ಇನ್ನಾದರೂ ನಾವು ಸಂತಸದ ಜೀವನ ನಡೆಸಬಹುದು ಎಂದು ನವಜೀವನ ಸದಸ್ಯ ರಮೇಶ್ ಸೇರಿದಂತೆ ಹಲವು ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಪೊಲೀಸ್ ಇಲಾಖೆ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

