ಬಸ್ ಸಂಚಾರಕ್ಕೆ ಆಗ್ರಹಿಸಿ ಸಿಪಿಐ ಪಕ್ಷದ ಪ್ರತಿಭಟನೆ
ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.1 ಕಳಸದಿಂದ ಸಂಜೆ ಮೈಸೂರಿಗೆ ಹೊರಡುತ್ತಿದ್ದ ಕ.ರಾ.ರ. ಸಾರಿಗೆ ಬಸ್ಸಿನ ಒಡಾಟವನ್ನು ಪುನಾರಂಭಗೊಳಿಸುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಕಳಸ ಪಟ್ಟಣದಲ್ಲಿ ಕ.ರಾ.ರ. ಸಾರಿಗೆ ಬಸ್ಸನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಭಾನುವಾರ ಬೆಳಗ್ಗೆ ಸುಮಾರು ಒಂದು ಗಂಟೆಗಳ ಕಾಲ ಸಿಪಿಐ ಕಾರ್ಯಕರ್ತರು ಕಳಸದಿಂದ ವಿವಿಧೆಡೆಗೆ ತೆರ ಳುತ್ತಿದ್ದ ಸರ್ಕಾರಿ ಬಸ್ಸುಗಳನ್ನು ಕಳಸ ಮುಖ್ಯ ರಸ್ತೆಯಲ್ಲಿ ತಡೆಹಿಡಿದು ಪ್ರತಿಭಟನೆ ನಡೆಸಲಾಯಿತು. ಈ ಬಗ್ಗೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮುಖಂಡ ಗೋಪಾಲ ಶೆಟ್ಟಿ, ಕಳೆದ ಕೆಲ ವರ್ಷದಿಂದ ಮೈಸೂರು ವಿಭಾಗದ ಕೆ.ಆರ್.ನಗರ ಡಿಪೋದಿಂದ ಸಂಜೆ 7 ಗಂಟೆಗೆ ಬಿಟ್ಟು ಹಾಸನ ಚಿಕ್ಕಮಗ ಳೂರು ಮಾರ್ಗವಾಗಿ ಬೆಳಗ್ಗಿನ ಜಾವ 4ಗಂಟೆಗೆ ಕುದುರೆಮುಖ ತಲುಪುತ್ತಿತ್ತು ಎಂದರು.
ಸಾರ್ವಜನಿಕರಿಗೆ ತೊಂದರೆ: ಕುದುರೇಮುಖ ಗಣಿ ಮುಚ್ಚಿ ಹೋದ ನಂತರ ಇದೇ ಬಸ್ಸನ್ನು ಹೊರನಾಡಿಗೆ ಓಡಿಸಲು ಕೇಳಿಕೊಂಡಿದ್ದೆವು. ಅದರಂತೆ ನಾಲ್ಕು ತಿಂಗಳುಗಳ ಕಾಲ ಬಸ್ಸು ಒಡಾಡುತ್ತಿತ್ತು. ಆದರೆ ಈಗ ದಿಢೀರನೆ 2 ತಿಂಗಳಿನಿಂದ ಈ ಬಸ್ಸು ಸಂಚಾರ ನಿಲ್ಲಿಸಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದರು.
ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಹೊರನಾಡು -ಕಳಸ- ಮೈಸೂರು ಬಸ್ಸನ್ನು ಪುನಾರಂಭ ಮಾಡದೆ ಹೋದಲ್ಲಿ ತಾಲೂಕು ವ್ಯಾಪ್ತಿ ಸಿಪಿಐ ಕಾರ್ಯಕರ್ತರು ಎಲ್ಲಾ ಸರ್ಕಾರಿ ಬಸ್ಸುಗಳನ್ನು ತಡೆಹಿಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಇದಲ್ಲದೆ ಮೂಡಿಗೆರೆ ಡಿಪೋದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಗ್ಗೆ ಮತ್ತು ಸಂಜೆ ಬಾಳೆಹೊನ್ನೂರಿನಿಂದ ಕಳಸಕ್ಕೆ, ಕೊಟ್ಟಿಗೆಹಾರದಿಂದ ಕಳಸಕ್ಕೆ ಬಸ್ಸು ಸಂಚಾರ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಸಿಪಿಐ ಮುಖಂಡ ಅಣ್ಣಪ್ಪ, ವಜೀರ್ ಅಹಮ್ಮದ್, ಶ್ರೀಧರ ಆಚಾರ್ಯ, ಕೃಷ್ಣ, ಸತೀಶ್, ಬೇಬಿ, ಅನಿತಾ, ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

