ಚಿಕ್ಕಮಗಳೂರು

ಮಕ್ಕಳ ಭವಿಷ್ಯಕ್ಕೆ 'ಕಾರಂಜಿ' ವೇದಿಕೆ: ಶಿವಶಂಕರಪ್ಪ

Published On :

ಕ.ಪ್ರ. ವಾರ್ತೆ, ತರೀಕೆರೆ, ಡಿ.2
ಪ್ರತಿಭಾ ಕಾರಂಜಿ ಮಕ್ಕಳ ಭವಿಷ್ಯಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ತಿಳಿಸಿದ್ದಾರೆ.
ಪಟ್ಟಣದ ನ್ಯಾಷನಲ್ ಇಂಗ್ಲಿಷ್ ಪ್ರೈಮರಿ ಶಾಲೆ ವತಿಯಿಂದ ಶಾಲೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಮಾಂತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲೂಕು ಯುವಜನ ಮತ್ತು ಕ್ರೀಡಾ ಅಧಿಕಾರಿ ಟಿ. ಚಂದ್ರಪ್ಪ ಮಾತನಾಡಿದರು. ಎನ್‌ಇಪಿಎಸ್ ಶಾಲೆಯ ರೇವಣ್ಣ, ಪುರಸಭೆ ಸದಸ್ಯೆ ಸುನೀತಾ ಗಂಗಾಧರ್, ಮಾಜಿ ಪುರಸಭಾಧ್ಯಕ್ಷೆ ಹೇಮಲತಾ ರೇವಣ್ಣ, ಲೇಖಕ ತ.ಮ. ದೇವಾನಂದ್, ರಾಘವೇಂದ್ರ, ಬಸವರಾಜ್, ಶಾಲೆ ಮುಖ್ಯಗುರು ವನಮಾಲಾ, ಲೀಲಾವತಿ, ಶಿಕ್ಷಕಿಯರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
--
ಜಿಲ್ಲಾಮಟ್ಟದ ಯುವಜನೋತ್ಸವ
ಚಿಕ್ಕಮಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಡಿ. 8 ರಂದು ತರೀಕೆರೆಯ ಬಿ.ಹೆಚ್. ರಸ್ತೆಯ ಎಂ.ಜಿ. ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಕ ನಾಟಕ, ಹಿಂದಿ ಅಥವಾ ಆಂಗ್ಲಭಾಷೆ ಮಾತ್ರ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಕರ್ನಾಟಕ್ ಶಾಸ್ತ್ರೀಯ ಗಾಯನ, ಸಿತಾರ್ ವಾದನ, ಮೃದಂಗ ವಾದನ, ತಬಲಾ ವಾದನ, ವೀಣೆ, ಕೊಳಲು, ಗಿಟಾರ್, ಹಾರ್ಮೋನಿಯಂ (ಲೈಟ್), ನೃತ್ಯ ಭರತನಾಟ್ಯ, ಕೂಚಿಪುಡಿ, ಕಥಕ್, ಒಡಿಸ್ಸಿ, ಮಣೀಪುರಿ, ಆಶುಭಾಷಣ- (ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ) ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.