ಚಿಕ್ಕಮಗಳೂರು

ರಾಜ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ

Published On :

ಕ.ಪ್ರ. ವಾರ್ತೆ, ಕಡೂರು, ಡಿ.2
ಪಟ್ಟಣದ ಕನ್ನಡ ಸಂಘ ಶಿವಮೊಗ್ಗದ ರೋಟರಿ ರಕ್ತ ನಿಧಿ ಸಹಯೋಗದಲ್ಲಿ ಇಲ್ಲಿನ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ರಕ್ತದಾನ ಶಿಬಿರ ನಡೆಯಿತು.
ಕನ್ನಡ ಸಂಘದ ಗೌರವಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವ ಆಚರಣೆ ಜೊತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜೀವ ಸಂರಕ್ಷಣೆಗೆ ಅಗತ್ಯವಾದ ರಕ್ತದಾನದ ಮಹತ್ವದಿಂದ ಜೀವ ಉಳಿಸುವ ಪ್ರಯತ್ನ ಪೂರ್ವಕವಾಗಿ ಸಂಘವು ಪ್ರಥಮ ಬಾರಿ ಈ ಶಿಬಿರ ಆಯೋಜಿಸಿದೆ. ಮುಂದಿನ ಭಾರಿಯಿಂದ ಪ್ರತಿ ವರ್ಷ ಇಂತಹ ಶಿಬಿರ ನಡೆಸುವ ಆಶಯ ವ್ಯಕ್ತಪಡಿಸಿದರು.
ಶಿವಮೊಗ್ಗ ರೋಟರಿ ರಕ್ತ ನಿಧಿ ವೈದ್ಯ ಡಾ. ಸುಭಾಷ್ ಚಂದ್ರ ರಕ್ತದಾನದ ಮಹತ್ವ ಜೀವಕೋಶಗಳು ಹಾಗೂ ರಕ್ತ ಕಣಗಳ ಏರುಪೇರಿನಿಂದ ಉಂಟಾಗುವ ಪರಿಣಾಮ, ರಕ್ತದ ವಿವಿಧ ಬಗೆಗಳ ಕಾರ್ಯವೈಖರಿ, ರಕ್ತದ ಎಂಟು ಬಗೆಯ ಮಾದರಿಗಳ ಬಗ್ಗೆ ಮಾಹಿತಿ ನೀಡಿದರು.
ಕನ್ನಡ ಸಂಘದ ಗೌರವಾಧ್ಯಕ್ಷ ಎಸ್. ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಂಘದ ಉಪಾಧ್ಯಕ್ಷ ಕೆ.ಎಚ್. ನಾರಾಯಣ್, ಪ್ರಧಾನ ಕಾರ್ಯದರ್ಶಿ ಜಿ.ಎಸ್. ನಾಗಭೂಷಣ್, ಖಜಾಂಚಿ ಬಿ. ಕುಮಾರಸ್ವಾಮಿ, ಕ್ರೀಡಾ ಕಾರ್ಯದರ್ಶಿ ದೇವರಾಜ್, ವೈದ್ಯ ಡಾ. ಸಜ್ಜನವರ್, ಡಾ. ಅಶ್ವತ್ ನಾರಾಯಣ್, ರೋಟರಿಯ ಡಾ. ಸತೀಶ್, ಸಂಘದ ಪದಾಧಿಕಾರಿಗಳು ಇದ್ದರು.
66ಕ್ಕೂ ಹೆಚ್ಚು ದಾನಿಗಳಿಂದ 23 ಲೀಟರ್ ರಕ್ತ ಸಂಗ್ರಹಣೆಗೊಂಡಿತು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಜಿ.ಎಸ್. ನಾಗಭೂಷಣ್ ಸ್ವಾಗತಿಸಿದರು. ಎಸ್.ಎಸ್. ದೇವರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.