ಚಿಕ್ಕಮಗಳೂರು

ಆದರ್ಶ ಪಾಲನೆಯಿಂದ ಆತ್ಮಸ್ಥೈರ್ಯ

Published On :

ಕ.ಪ್ರ. ವಾರ್ತೆ, ತರೀಕೆರೆ, ಡಿ.4
ಸಾಧಕರ ಸಾಧನೆ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಆಗ ಮಾತ್ರ ಆತ್ಮಸ್ಥೈರ್ಯ ಹೆಚ್ಚಲು ಕಾರಣವಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಅನುರಾಧಾ ತಿಳಿಸಿದರು.
ಅವರು, ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ರೋಟರಿ ಸಂಸ್ಥೆ, ಸಹೃದಯ ಸೇವಾ ಸಮುದಾಯ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ   ವಿಶ್ವ ವಿಕಲಚೇತನರ ದಿನಾಚರಣೆ, ವಿಕಲಚೇತನರಿಗೆ ಕ್ರೀಡಾಕೂಟ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ಮನೋಬಲ ಹೆಚ್ಚಿಸಬೇಕು: ವಿಕಲಚೇತನರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಸಾಧನೆಗಳು ವಿಕಲಚೇತನರಿಗೆ ಆದರ್ಶವಾಗಬೇಕು. ಅಂಗವಿಕಲರಲ್ಲಿ ಮನೋಬಲ ಹೆಚ್ಚಿಸಬೇಕು, ಸಹಭಾಗಿತ್ವ, ಸಮಬಲ ಕೊಡಬೇಕು ಎಂದು ತಿಳಿಸಿದ ಅವರು ಸರ್ಕಾರ ಅನೇಕ ರೀತಿಯ ಅನುದಾನ ನೀಡುತ್ತಿದೆ. ಅವುಗಳ ಉಪಯೋಗ ಪಡೆಯಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ, ವಿಕಲಚೇತರನ್ನು ಪ್ರತ್ಯೇಕಿಸುವುದು ಬೇಡ. ಬದಲಿಗೆ  ಅವರನ್ನು ಮುಖ್ಯವಾಹಿನಿಗೆ ತರಬೇಕು. ಅನುಕಂಪ ಬೇಡ ಅವರಿಗೆ ಸವಲತ್ತು ಕೊಡಬೇಕು. ಆದಾಯ ಮಿತಿ ಬೇಡ, ಎಲ್ಲರಿಗೂ ಪಿಂಚಣಿ ಕೊಡಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಪಲ್ಲವಿ ಮಾತನಾಡಿ, ವಿಕಲಚೇತನರಲ್ಲಿ ಸುಪ್ತಶಕ್ತಿ ಅಡಗಿರುತ್ತದೆ, ಪುರಸಭೆ ವತಿಯಿಂದ ಪೋಷಣೆ ಭತ್ಯೆಯನ್ನು ನೀಡಲಾಗುವುದು ಎಂದರು.
ತಹಸೀಲ್ದಾರ್ ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರ ದಿನಾಚರಣೆಯನ್ನು ಸಂಘಟನೆಯ ದಿನವನ್ನಾಗಿ ಮಾಡೇಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎನ್.ವೀರಭದ್ರಪ್ಪ, ರೋಟರಿ ಸಂಸ್ಥೆ  ಅಧ್ಯಕ್ಷ ತಿಪ್ಪೇಶ್, ಶಶಿಧರ್ ಅವರು ಮಾತನಾಡಿದರು. ಸಹೃದಯ ಸೇವಾ ಸಮುದಾಯದ ಕಾರ್ಯದರ್ಶಿ ಕ್ರಿಸ್ತ ದಯಾ ಕುಮಾರ್, ಸಿಡಿಪಿಒ ಶ್ರೀಧರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಅನುರಾಧ ಅವರು ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.