ಚಿಕ್ಕಮಗಳೂರು

ಎಚ್ಐವಿ ಬಗ್ಗೆ ಹದಿಹರೆಯದವರು ಜಾಗೃತರಾಗಲಿ

Published On :

ಚಿಕ್ಕಮಗಳೂರು: ವಿದ್ಯಾವಂತ ಯುವ ಜನತೆಯೇ ಹೆಚ್ಚಾಗಿ ಏಡ್ಸ್ ನಂತಹ ಮಾರಕ ರೋಗಕ್ಕೆ ಬಲಿಯಾಗುತ್ತಿರುವುದು ದುರಂತ ಎಂದು ಮೂಗ್ತಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್ ವಿಷಾದಿಸಿದರು.
ನಗರದ ಹೊರವಲಯದ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ಮೂಗ್ತಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಸಂಘ ಹಾಗೂ ಏಡ್ಸ್ ಪ್ರಿವೆನ್ಷನಲ್ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಹಕ್ಕೆ ಏಡ್ಸ್ ವೈರಸ್ ಪ್ರವೇಶವಾದರೆ ರೋಗ ನಿರೋಧಕ ಶಕ್ತಿಯನ್ನೆ ನಾಶ ಮಾಡುತ್ತದೆ. ಹದಿಹರೆಯ ವಯಸ್ಸಿನಲ್ಲಿ ಜಾಗೃತರಾಗಿರಬೇಕೆಂದು ಎಚ್ಚರಿಸಿದ ಅವರು, ಏಡ್ಸ್ ಬಗ್ಗೆ ಕೀಳರಿಮೆ, ತಪ್ಪು ತಿಳುವಳಿಕೆಯಿಂದ ಅಪಾಯ ಹೆಚ್ಚಿದ್ದು ಶಿಕ್ಷಣದಿಂದ ಯಶಸ್ಸಿನ ಮಾರ್ಗದತ್ತ ಸಾಗಬೇಕೆಂದರು.
ದುಶ್ಚಟಗಳಿಗೆ ಬಲಿಯಾಗಬೇಡಿ: ಕಾರ್ಯಕ್ರಮವನ್ನು ಉದ್ಘಾಟಿಸಿದ ಜೀವನ ಸಂಧ್ಯಾ ವೃದ್ಧಾಶ್ರಮದ ವೃದ್ಧ ಹರೀಶ್ ಸಿಂಗ್ ಮಾತನಾಡಿ, ವಿಜ್ಞಾನ- ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಬೇಕೇ ಹೊರತು ಸಮಾಜದ ಕೆಡಕಿಗೆ ಬಳಸಬಾರದು. ವಿದ್ಯಾರ್ಥಿದಿಸೆಯಲ್ಲಿ ದುಶ್ಚಟಗಳಿಗೆ ಬಲಿಯಾದರೆ ಜೀವಮಾನವಿಡೀ ಪರಿತಾಪ ಪಡಬೇಕಾಗುತ್ತದೆ ಎಂದರು.
ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಆಪ್ತ ಸಮಾಲೋಚಕಿ ರಾಜೇಶ್ವರಿ ಉಪನ್ಯಾಸ ನೀಡಿ, ಏಡ್ಸ್ ರೋಗದ ಲಕ್ಷಣ, ಹರಡುವಿಕೆ, ಪರಿಣಾಮ ಮತ್ತು ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು. ಅಸುರಕ್ಷಿತ ಲೈಂಗಿಕ ಕ್ರಿಯೆ, ರಕ್ತ ಪಡೆಯುವಿಕೆ, ಸೂಜಿ ಹಾಗೂ ಕತ್ತಿಯ ಬಳಕೆಯಲ್ಲಿ ಎಚ್ಚರವಹಿಸಬೇಕು ಎಂದರು.
ಕಾರ್ಯಕರ್ತರಾದ ರಾಜಶೇಖರ್ ಮಾತನಾಡಿ, ಸ್ವಚ್ಛತೆ, ಸಂಯಮ, ವೈದ್ಯರ ಸಲಹೆ ಹಾಗೂ ಸ್ಪಷ್ಟ ಮಾಹಿತಿಯಿಂದಾಗಿ ಮಹಾಸೋಂಕಿನಿಂದ ದೂರವಾಗಬಹುದು ಎಂದರು.
ಮೂಗ್ತಿಹಳ್ಳಿಯಿಂದ ಶಕ್ತಿನಗರದವರೆಗೆ ವಿದ್ಯಾರ್ಥಿ ಜಾಥಾ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.