ರೋಗ ನಿರ್ವಹಣೆ ಪದ್ಧತಿಯಿಂದ ಅಧಿಕ ಇಳುವರಿ: ಡಾ. ಗಿರೀಶ್
ಮೂಡಿಗೆರೆ: ಬತ್ತದ ಬೆಳೆಯಲ್ಲಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಪದ್ಧತಿ ಅಳವಡಿಕೆಯಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ತಜ್ಞ ಡಾ.ಗಿರೀಶ್ ತಿಳಿಸಿದರು.
ಎನ್.ಆರ್.ಪುರ ತಾಲೂಕಿನ ನಡುವಿನ ಮನೆ ಸುತ್ತ ಏರ್ಪಡಿಸಿದ ಭತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಭಾವಹಿಸಿ ಮಾತನಾಡಿದ ಅವರು, ಭತ್ತದ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳನ್ನು ಅನುಸರಿಸಿ ಸುಮಾರು ಹದಿನೈದು ಜನ ರೈತರು ಈಗಾಗಲೇ ಬೆಳೆ ಬೆಳೆಯಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ಸಾಂಪ್ರದಾಯಿಕ ಭತ್ತಕ್ಕಿಂತಲೂ ಹೆಚ್ಚಿನ ಇಳುವರಿ ಬಂದಿದೆ ಎಂದರು.
ರೈತರು ಬತ್ತದ ಬೆಳವಣಿಗೆಯ ಹಂತದಲ್ಲಿ ಬತ್ತಕ್ಕೆ ತಗಲುವ ರೋಗ ಮತ್ತು ಕೀಟಗಳ ಬಗ್ಗೆ ಮೊದಲೇ ಮಾಹಿತಿ ತಿಳಿದುಕೊಂಡಿದ್ದರೆ, ರೋಗದ ಅಥವಾ ಕೀಟಗಳ ಲಕ್ಷಣಗಳು ಕಾಣುತ್ತಿದ್ದಂತೆ ಸೂಕ್ತ ಕ್ರಮ ಅಥವಾ ಕೀಟ ಶಿಲೀಂದ್ರನಾಶಕಗಳನ್ನು ಉಪಯೋಗದಿಂದ ಹತೋಟಿ ಮಾಡಲು ಸಹಾಯಕವಾಗುತ್ತವೆ. ಯಾವುದೇ ಕೃಷಿಯಾದರೂ ತಜ್ಞರೊಂದಿಗೆ ವಿರಂತರವಾಗಿ ಸಂಪರ್ಕದಲ್ಲಿದ್ದರೆ ತಮ್ಮ ಕೃಷಿಯಲ್ಲಿ ಉಂಟಾಗುವ ತೊಡಕುಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು ಎಂದರು.
ಕೃಷಿ ವಿಜ್ಞಾನದ ಸಹಸಂಶೋಧಕರಾದ ನಾಗರಾಜ ಗೋಂಕಾವಿ, ಸುಭಾಷ್ ಕೃಷಿ ಅಧಿಕಾರಿಗಳು, ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

