20ರಂದು ಕನ್ನಡ ಸಾಹಿತ್ಯ ಸಮ್ಮೇಳನ
ಮೂಡಿಗೆರೆ: ತಾಲೂಕಿನ ಬಾಳೂರು ಹೋಬಳಿ ಜಾವಳಿ ಲಕ್ಷ್ಮಣ್ ರಾವ್ ಗುಜ್ಜರ್ ಪ್ರೌಢಶಾಲೆ ಸಭಾಂಗಣದಲ್ಲಿ ಬಾಳೂರು ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ 20ರಂದು ನಡೆಯಲಿದ್ದು. ಸಮ್ಮೇಳನಾಧ್ಯಕ್ಷರಾಗಿ ಜಾವಳಿಯ ಎಂ.ಎಲ್. ಗುರ್ಜರ್ ಆಯ್ಕೆಯಾಗಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಅಶೋಕ್ ತಿಳಿಸಿದ್ದಾರೆ.
ಕೆನರಾ ಬ್ಯಾಂಕ್ ಎಟಿಎಂ ಉದ್ಘಾಟನೆ
ನರಸಿಂಹರಾಜಪುರ: ಇಲ್ಲಿನ ಮಸೀದಿ ಕಾಂಪ್ಲೆಕ್ಸ್ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ನೂತನ ಎಟಿಎಂ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಪಟ್ಟಣದಲ್ಲಿ ಎಸ್ಬಿಎಂ ಎಟಿಎಂ ಕೇಂದ್ರಗಳು ಮಾತ್ರ ಇದ್ದವು. ಹಾಗಾಗಿ ಕೆನರಾ ಬ್ಯಾಂಕಿನಲ್ಲೂ ಎಟಿಎಂ ಕೇಂದ್ರ ಪ್ರಾರಂಭಿಸಬೇಕೆಂದು ಬಹುದಿನಗಳ ಗ್ರಾಹಕರ ಬೇಡಿಕೆಗೆ ಬ್ಯಾಂಕ್ ಸ್ಪಂದಿಸಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಪಾರ್ವತಿಕರ್ ತಿಳಿಸಿದರು.
ಸ್ವಚ್ಛತಾ ಕಾರ್ಯಕ್ರಮ
ಇಂದಾವರ ಗ್ರಾಪಂ ವ್ಯಾಪ್ತಿಯ ಇಂದಾವರ ಮತ್ತು ಹುಕ್ಕುಂದಗಳಲ್ಲಿ ಇತ್ತೀಚೆಗೆ ಸ್ವಚ್ಚತಾ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಇಂದಾವರ ಮತ್ತು ಹುಕ್ಕುಂದ ಶಾಲೆಯ ಮುಖ್ಯೋಪಾಧ್ಯಾಯರು, ಸ್ತ್ರೀ ಶಕ್ತಿ ಸಂಘದವರು, ಸ್ವಸಹಾಯ ಸಂಘದ ಪದಾಧಿಕಾರಿಗಳು ಸಿಬ್ಬಂದಿ ಮತ್ತು ಶಾಲೆ ಮಕ್ಕಳೊಂದಿಗೆ ಸ್ವಚ್ಛತಾ ಉತ್ಸವ ಆಚರಿಸಲಾಯಿತು. ಮಕ್ಕಳಿಗೆ ಸ್ವಚ್ಛತೆ, ಶೌಚಾಲಯ ಬಳಕೆಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳಿಗೆ ಬಹುಮಾನವನ್ನು ಗ್ರಾಪಂನಿಂದ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಉಪಾಧ್ಯಕ್ಷೆ ಕಾಳಮ್ಮ, ಸದಸ್ಯರರಾದ ಜೆ.ಬಿ. ಶೋಭಾ, ಜಯಮ್ಮ, ಕೆಂಚಯ್ಯ, ಜಿ. ಶಂಕರ್ ಕುಮಾರ್ ಸ್ವಚ್ಛತೆ ಮತ್ತು ಶೌಚಾಲಯ ಬಳಕೆ ಮತ್ತು ಶಾಲೆಯ ಸ್ವಚ್ಛತೆ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಇಂದಾವರ ಮತ್ತು ಹುಕ್ಕುಂದ ಸ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯರು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಫರೀದಾಬಾನು ಉಪಸ್ಥಿತರಿದ್ದರು.
ಪರೀಕ್ಷಾ ಪೂರ್ವ ತರಬೇತಿ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಡಿ.18 ರಿಂದ 31 ರವರೆಗೆ ಮಧ್ಯಾಹ್ನ 3 ಗಂಟೆಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರೌಢಶಾಲಾ ಶಿಕ್ಷಕರ ತರಬೇತಿ ಪಡೆದಿರುವ (ಬಿ.ಇಡಿ) ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಚಿಕ್ಕಮಗಳೂರು ದೂರವಾಣಿ ಸಂಖ್ಯೆ 08262- 235513 ಇಲ್ಲಿಗೆ ಸಂಪರ್ಕಿಸಿ.
ನರ್ಸಿಂಗ್ ಕೋರ್ಸ್: ಅರ್ಜಿ ಆಹ್ವಾನ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬಿ.ಎಸ್ಸಿ. ನರ್ಸಿಂಗ್, ಜೆಎನ್ಎಂ ನರ್ಸಿಂಗ್ ಕೋರ್ಸ್ಗಳಿಗೆ ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಿ.ಎಸ್ಸಿ. ನರ್ಸಿಂಗ್ಗೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ (ಪಿಸಿಬಿ), ಇಂಗ್ಲಿಷ್ ಸೇರಿದಂತೆ ಕನಿಷ್ಠ ಶೇ.45 ಅಂಕ ಪಡೆದಿರುವವರು, ಜಿಎನ್ಎಂ ನರ್ಸಿಂಗ್ಗೆ ದ್ವಿತಿಯ ಪಿಯುಸಿ/12ನೇ ತರಗತಿಯಲ್ಲಿ ಶೇ.35ರಷ್ಟು ಅಂಕ ಪಡೆದಿರುವ (ವಿಜ್ಞಾನ, ಕಲಾ, ಮತ್ತು ವಾಣಿಜ್ಯ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಬಿ.ಎಸ್ಸಿ. ನರ್ಸಿಂಗ್ 4 ವರ್ಷ, ಜಿಎನ್ಎಂ ನರ್ಸಿಂಗ್ಗೆ 3 ವರ್ಷ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.31 ಕೊನೆ ದಿನ. ಅರ್ಜಿ ನಮೂನೆ, ಮಾಹಿತಿಗೆ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

