ಚಿಕ್ಕಮಗಳೂರು

ಕಾನ್ವೆಂಟ್ ಬಳಿ ಆಟೋಗಳಿಗೆ ಕಾರು ಡಿಕ್ಕಿ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.12
ಪ್ರಯಾಣಿಕರನ್ನು ಬಾಡಿಗೆಗೆ ಕರೆದುಕೊಂಡು ಹೋಗಲು ಕಾನ್ವೆಂಟ್ ಶಾಲೆ ಬಳಿ ಆಟೋ ನಿಲ್ದಾಣದಲ್ಲಿ ನಿಂತಿದ್ದ ಆಟೋಗಳಿಗೆ ಮಾರುತಿ 800 ವಾಹನ ಗುದ್ದಿರುವ ಪ್ರಕರಣ ವರದಿಯಾಗಿದೆ.
ಎಂದಿನಂತೆ ಪ್ರಯಾಣಿಕರಿಗಾಗಿ ಕಾನ್ವೆಂಟ್ ಶಾಲೆಯ ಪಕ್ಕದ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ಆಟೋಗಳು ನಿಂತಿದ್ದವು.
ಈ ಸಮಯದಲ್ಲಿ ಬಾಪುನಗರದ ಗುಂಡೇಗೌಡ ಎಂಬುವವರು ತಮ್ಮ ಮಾರುತಿ 800 ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಯ ಕಡೆ ಹೋಗುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರು ಬದಿಯಲ್ಲಿ ನಿಂತಿದ್ದ 7 ಆಟೋಗಳಿಗೆ ಗುದ್ದಿದ ಪರಿಣಾಮ ಆಟೋಗಳು ಜಖಂಗೊಂಡವು.
ರಸ್ತೆ ಅಗಲೀಕರಣ ಆಗದೇ ಇರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಕರವೇ ಗೌರವಾಧ್ಯಕ್ಷ ಹೊರಟ್ಟಿ  ರಘು ತಿಳಿಸಿದ್ದಾರೆ. ಮೂಡಿಗೆರೆ ಪಟ್ಟಣ ತುಂಬ ಕಿರಿದಾಗಿದ್ದು. ವಾಹನಗಳ ದಟ್ಟಣೆ ಜಾಸ್ತಿಯಾಗಿದ್ದು. ರಸ್ತೆ ಅಗಲೀಕರಣವಾದರೇ ಮಾತ್ರ ಅಫಘಾತಗಳನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.