ಚಿಕ್ಕಮಗಳೂರು

ಕುರುಬ ಸಮಾಜ ಜೀರ್ಣೋದ್ಧಾರ ಟ್ರಸ್ಟ್ ರಚನೆ

Published On :

ಕಡೂರು: ಕುರುಬ ಸಮಾಜ ಸೇರಿದಂತೆ ಸಮಾಜದ ಇತರೆ ವರ್ಗದವರಿಗೂ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ನೆರವು ನೀಡುವ ಹಿನ್ನೆಲೆಯಲ್ಲಿ ಶ್ರೀ ಕನಕ ಜಯಂತಿ ಉತ್ಸವ ಹಾಗು ತಾಲೂಕು ಕುರುಬ ಸಮಾಜ ಜೀರ್ಣೋದ್ಧಾರ ಟ್ರಸ್ಟ ರಚಿಸಲಾಗಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಗು ಟ್ರಸ್ಚಿನ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆದ ಸಮಾಜದ ಸಭೆಯನ್ನು ಉದ್ದೇಶಿಸಿ ಮಾತನಾಡಿ,  ಕಳೆದ ನ. 20ರಂದು ಟ್ರಸ್ಟ್ ರಚಿಸಿ ಸಮಾಜದಲ್ಲಿರುವ ಅಶಕ್ತರು, ಹಿಂದುಳಿದವರಿಗೆ ನೆರವು ನೀಡುವುದೇ  ಟ್ರಸ್ಟಿನ ಪ್ರಮುಖ ಉದ್ದೇಶವಾಗಿದೆ ಎಂದರು.
ಶಿಕ್ಷಣಕ್ಕೆ ನೆರವು: ಗ್ರಾಮಾಂತರ ಪ್ರದೇಶದ ಬಡ ವರ್ಗದರಿಗೆ ಶಿಕ್ಷಣ ನೀಡಲು ಶಾಲಾ ಕಾಲೇಜುಗಳನ್ನು ಆರಂಭಿಸಿ ಕೇವಲ ಸೀಮಿತ ಶುಲ್ಕ ಪಡೆದು ಶಿಕ್ಷಣಕ್ಕೆ ಒತ್ತು ನೀಡಲಾಗುವುದು, ವಿದ್ಯಾರ್ಥಿನಿಲಯಗಳ ಸ್ಥಾಪನೆ, ಉಚಿತ ಗ್ರಂಥಾಲಯ,  ಉಚಿತ ವೈದ್ಯಕೀಯ ಸೇವೆ ಒಳಗೊಂಡಂತೆ ಎಲ್ಲ ರೀತಿಯ ಸಾಮಾಜಿಕ ಸೇವೆ ಒದಗಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.  ಟ್ರಸ್ಟಿನ ಗೌರವಾಧ್ಯಕ್ಷ ಟಿ.ಗೋವಿಂದಪ್ಪ, ಭಂಡಾರಿ ಶ್ರೀನಿವಾಸ್, ಎಂ.ರಾಜಪ್ಪ, ಶಂಕರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.