ದತ್ತಪೀಠದಲ್ಲಿ ನೂಕು ನುಗ್ಗಲು; ಲಘು ಲಾಠಿ ಪ್ರಹಾರ
ಚಿಕ್ಕಮಗಳೂರು: ದತ್ತಪೀಠದಲ್ಲಿ ನಡೆದ ದತ್ತ ಜಯಂತಿಯ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಂಪನ್ನಗೊಂಡಿದೆ. ಸೋಮವಾರ ಗುಹೆಯ ನಿಷೇಧಿತ ಪ್ರದೇಶದಲ್ಲಿ ಕೆಲವು ಮಾಲಾಧಾರಿಗಳು ನುಗ್ಗಲು ಯತ್ನಿಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ಡಿ.ಎನ್. ಜೀವರಾಜ್ ಸೇರಿದಂತೆ ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ದತ್ತ ಪಾದುಕೆಗಳ ದರ್ಶನ ಪಡೆದರು. ಮಂಗಳೂರಿನಿಂದ ಆಗಮಿಸಿದ್ದ ಕೆಲವು ದತ್ತಮಾಲಾಧಾರಿಗಳು ಗುಹೆಯ ಪ್ರವೇಶ ದ್ವಾರದಲ್ಲಿ ಇಂಗ್ಲಿಷ್, ಕನ್ನಡ ಮತ್ತು ಉರ್ದು ಭಾಷೆಯಲ್ಲಿ 'ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ' ಎಂಬ ನಾಮಫಲಕ ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಜಿಲ್ಲಾಡಳಿತ ನಾಮಫಲಕದಲ್ಲಿದ್ದ ಉರ್ದು ಅಕ್ಷರಗಳನ್ನು ಮುಚ್ಚಿಸಿತು. ದರ್ಶನದ ಬಳಿಕ ಭಕ್ತರು ಇರುಮುಡಿಯನ್ನು ಧಾರ್ಮಿಕ ಸಭೆ ನಡೆಯುವ ಸ್ಥಳದಲ್ಲಿ ಸಲ್ಲಿಸಿ ಸಭೆಯಲ್ಲಿ ಪಾಲ್ಗೊಂಡರು. ಆದರೆ, ಕೆಲವು ಯುವಕರು, ಗುಹೆಯ ನಿರ್ಗಮನ ದ್ವಾರದ ಸಮೀಪದಿಂದ ನಿಷೇಧಿತ ಪ್ರದೇಶದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು. ಅಲ್ಲದೇ ದತ್ತಾತ್ರೇಯ ಮೂರ್ತಿಯ ಅಡ್ಡೆಯನ್ನು ಹೊತ್ತಿದ್ದ ಯುವಕರು, ಧಾರ್ಮಿಕ ಸಭೆಯ ಸ್ಥಳಕ್ಕೆ ತೆರಳುವಾಗ ಪೊಲೀಸರು ಅವರನ್ನು ತಡೆದರು. ಆಗಲೂ ಭಕ್ತರು, ಪೊಲೀಸರ ನಡುವೆ ತಳ್ಳಾಟ- ನೂಕಾಟವಾಯಿತು. ಆಗ ಅಡ್ಡೆಯ ಒಂದು ಬದಿಯ ಕೋಲು ಮುರಿದು ಹೋಯಿತು. ಇದರಿಂದ ಭಕ್ತರು ಆಕ್ರೋಶಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

