ಚಿಕ್ಕಮಗಳೂರು

ವಸತಿ ಶಾಲೆಗೆ ಶಾಸಕ ನಿಂಗಯ್ಯ ಭೇಟಿ

Published On :

ಮೂಡಿಗೆರೆ: ತಾಲೂಕಿನ ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಗೆ ಶಾಸಕ ಬಿ.ಬಿ. ನಿಂಗಯ್ಯ ಡಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಏಕಲವ್ಯ ವಸತಿ ಶಾಲೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಅಧಿಕಾರಿಗಳು, ಜನಪ್ರತಿನಿಧಿಗಳು ವ್ಯವಸ್ಥೆ ಸರಿಪಡಿಸುವಲ್ಲಿ ಸುಸ್ತಾಗಿ ಹೋಗಿದ್ದರು. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಪರಿಸ್ಥಿತಿ ಅರಿಯುವ ಸಲುವಾಗಿ ಶಾಸಕ ಬಿ.ಬಿ. ನಿಂಗಯ್ಯ, ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು, ಮುಕ್ತಿಯಾರ್ ಹೊರಟ್ಟಿ, ಜೆಡಿಎಸ್ ಮುಖಂಡ ಚಂದ್ರೇಗೌಡ ಭೇಟಿ ನೀಡಿ ಪರೀಶಿಲಿಸಿ, ವಿದ್ಯಾರ್ಥಿಗಳಲ್ಲಿ ಕುಂದು ಕೊರತೆ ಬಗ್ಗೆ ವಿಚಾರಿಸಿದರು.  ನಂತರ ಶಿಕ್ಷಕೊರಂದಿಗೆ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಓದಿಗೆ ಅನುಕೂಲವಾಗಲೆಂದು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡು ಬಂದಿದ್ದು, ಆ ಯೋಜನೆ ಸಮರ್ಪಕವಾಗಿ ವಿನಿಯೋಗಿಸುವಂತೆ ತಿಳಿಸಿದರು.
ಬತ್ತ ಬೆಳೆ ಕ್ಷೇತ್ರೋತ್ಸವ
ಕೊಪ್ಪ: ತಾಲೂಕಿನ ತುಳುವಿನ ಕೊಪ್ಪ ಗ್ರಾಪಂ ವ್ಯಾಪ್ತಿಯ ಮಾಚಿ ಕೊಪ್ಪ ಚಂದ್ರಶೇಖರ್ ಅವರ ಜಮೀನಿನಲ್ಲಿ ಸೋಮವಾರ ಕೃಷಿ ಇಲಾಖೆ ಬತ್ತದ ಕ್ಷೇತ್ರೋತ್ಸವ ಆಚರಿಸಲಾಯಿತು. ಬತ್ತದ ಕ್ಷೇತ್ರೋತ್ಸವ ಉದ್ಘಾಟಿಸಿದ ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್ ಮಾತನಾಡಿ, ರೈತರು ಕೃಷಿ ಇಲಾಖೆಯ ಸಲಹೆ, ಸರ್ಕಾರದ ಸವಲತ್ತು ಪಡೆದು ಕ್ರಮಬದ್ಧ ಬೇಸಾಯದಲ್ಲಿ ತೊಡಗುವ ಮೂಲಕ ಹೆಚ್ಚಿನ ಇಳುವರಿ ಹೊಂದುವುದರೊಂದಿಗೆ ಅರ್ಥಿಕ ಅಭಿವೃದ್ಧಿ ಕಾಣಬೇಕೆಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರಷೋತ್ತಮ್ ಮಾತನಾಡಿ, ಮಾಚಿಕೊಪ್ಪಗದ ಚಂದ್ರಶೇಖರ್ ಕೃಷಿ ಇಲಾಖೆ ಭೂಚೇತನ ಯೋಜನಯಡಿ ಸಲಹೆ ಸಹಕಾರ ಪಡೆದು ಕಾಲ- ಕಾಲಕ್ಕೆ ಮಣ್ಣಿನ ಪರೀಕ್ಷೆ ನಡೆಸಿ ಸಾಲು ನಾಟಿ ಮಾಡಿದ್ದಲ್ಲದೆ ಅಗತ್ಯ ಪ್ರಮಾಣದ ಲಘು ಪೋಷಕಾಂಶ ಒದಗಿಸಿದ್ದಾರೆ. ತುಂಗಾ ತಳಿ ನಾಟಿ ಮಾಡಿದ್ದು, ಉತ್ತಮ ಇಳುವರಿ ಪಡೆದಿದ್ದಾರೆಂದರು. ತಾಪಂ ಸದಸ್ಯ ಬೆಳಗೊಳ ರಮೇಶ್, ತುಳುವಿನಕೊಪ್ಪ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಕೃಷ್ಣಮೂರ್ತಿ, ಕೃಷಿ ಅಧಿಕಾರಿ ರೂಪ, ಅನುವುಗಾರರಾದ ಪ್ರಶಾಂತ್, ಶಿವ ಪ್ರಕಾಶ್, ಕಿರಣ್, ರಾಜಶಂಕರ್ ಇದ್ದರು.
ಅಡಕೆ: ಪ್ರಮಾಣಪತ್ರ ಸಲ್ಲಿಸಿಲ್ಲ
ಶಿವಮೊಗ್ಗ: ಅಡಕೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಅಡಕೆ ನಿಷೇಧ ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ತಿಳಿಸಿದ್ದಾರೆ.

ಪ್ರತಿಭಾ ಕಾರಂಜಿ: ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ
ನರಸಿಂಹರಾಜಪುರ: ಬಸ್ತಿಮಠದ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಮಾಲಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಮೃತ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಶಾಲೆಯ ಮುಖ್ಯಪಾಧ್ಯಾಯರಾದ ಪ್ರಮೀಳಾ ತಿಳಿಸಿದ್ದಾರೆ. ಕಮಾಲಾಪುರ ಶಾಲೆಯ ರಾಮಸ್ಕಂದ ಲಘು ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಶಾಲೆಯ ಸಹ ಶಿಕ್ಷಕಿಯರಾದ ಮಧು, ಸ್ಮಿತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಪ್ರೀತಮ್: ನಾಗರಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಪ್ರೀತಮ್ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಣ್ಣಿನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುಳಾ ತಿಳಿಸಿದ್ದಾರೆ. ಅಲ್ಲದೆ, ನಾಗರಮಕ್ಕಿ ಶಾಲೆಯ ಮಕ್ಕಳು ರಸಪ್ರಶ್ನೆ, ಕೋಲಾಟ, ಅಭಿನಯ ಗೀತೆ,ಧಾರ್ಮಿಕ ಪಠಣ, ಇಂಗ್ಲಿಷ್ ಕಂಠಪಾಠದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.