ಕ್ಷೇತ್ರಾಭಿವೃದ್ಧಿಗೆ ರಾಜಕೀಯ ಬೇಡ
ಕ.ಪ್ರ.ವಾರ್ತೆ ಕಡೂರು ಡಿ.18
ಕ್ಷೇತ್ರ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಎಲ್ಲರೂ ಕೈ ಜೋಡಿಸಬೇಕಿದೆ. ಕಾಮಗಾರಿಗೆ ಚಾಲನೆ ನೀಡಲಾಗುತ್ತಿರುವ ನಗರೋತ್ಥಾನ ಯೋಜನೆ ಅನುದಾನವು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಆಗಿರುವುದರಿಂದ ಇದಕ್ಕೆ ಕಾರಣರಾದ ಮಾಜಿ ಶಾಸಕರಾದ ಡಾ. ವೈ.ಸಿ. ವಿಶ್ವನಾಥ್ ಅವರನ್ನು ಸ್ಮರಿಸಬೇಕು ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಪುರಸಭೆ ಎದುರು 2013-14ನೇ ಸಾಲಿನ ನಗರೋತ್ಥಾನ ಯೋಜನೆಯ 5 ಕೋಟಿ ಕಾಮಗಾರಿಗೆ ಚಾಲನೆ ನೀಡಿ, ಶುದ್ಧಗಂಗಾ ಘಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾವು ಪಟ್ಟಣದ ಅಭಿವೃದ್ಧಿಯಲ್ಲಿ ಉತ್ಸಾಹಿ ಸದಸ್ಯರೊಂದಿಗೆ ಸಾಧನೆಗೆ ಕೈ ಜೋಡಿಸುತ್ತೇನೆ. ನಗರೋತ್ಥಾನ ಯೋಜನೆ ಹಣ ಬಿಡುಗಡೆ ವಿಚಾರದಲ್ಲಿ ಕ್ಷೇತ್ರದ ಮಾಜಿ ಶಾಸಕರಾದ ಡಾ. ವೈ.ಸಿ. ವಿಶ್ವನಾಥ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಿಡುಗಡೆಯಾಗಿದೆ. ಇದೀಗ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ.
ಅಭಿವೃದ್ಧಿಗೆ ಪ್ರಯತ್ನಿಸಿದವರನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ. ಈ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತಲಿರುವ ರಸ್ತೆಗಳನ್ನು ಶೇ.80ರಷ್ಟು ಅಭಿವೃದ್ಧಿಪಡಿಸಿ ಶೇ.20 ರಷ್ಟನ್ನು ಬೇರೆ ಕಾಮಗಾರಿಗೆ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಇದನ್ನರಿತು ಸದಸ್ಯರು ಆದ್ಯತೆ ನೀಡಿ ಕಾಮಗಾರಿ ಮಾಡಿಸಬೇಕು ಎಂದರು.
ನನ್ನ ಆತ್ಮೀಯ ಸ್ನೇಹಿತ ಕೆ.ಎಂ.ಕೃಷ್ಣಮೂರ್ತಿ ಕನಸಾಗಿ 2006ರಲ್ಲಿ ಆರಂಭಗೊಂಡ ಕಡೂರು ಬೀರೂರು ಪಟ್ಟಣಗಳಿಗೆ ಕುಡಿಯುವ ನೀರಿನ ಭದ್ರಾ ಯೋಜನೆ 2 ವರ್ಷ ಆಮೆಗತಿಯಲ್ಲಿ ಸಾಗುತ್ತಿದ್ದುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಚುರುಕುಗೊಳಿಸುವ ಪ್ರಯತ್ನ ಮಾಡಿ ಇಂದು ಯೋಜನೆಗಿದ್ದ ಸಮಸ್ಯೆ ನಿವಾರಣೆಯಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ನೀರು ದೊರಕಿ ಅವಳಿ ಪಟ್ಟಣಗಳ ಜನರು ಮುಂದಿನ ಬೇಸಿಗೆಯಲ್ಲಿ ನೀರಿಗೆ ಪರದಾಡುವುದು ತಪ್ಪುತ್ತದೆ ಎಂದರು.
ಕಡೂರು ತಾಲೂಕನ್ನು ಇದುವರೆಗೂ ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಿಲ್ಲ. ಕೃಷಿ ಮಂತ್ರಿ ಕೃಷ್ಣ ಭೈರೇಗೌಡರು ಕಡೂರು ತಾಲೂಕು ಸೇರಿಸಲು ಆಗುವುದಿಲ್ಲವೆಂಬ ಹೇಳಿಕೆ ನೀಡಿದ್ದಾರೆ.
ಆದರೆ ಮುಖ್ಯಮಂತ್ರಿಗಳು ಸೇರಿಸುವುದಾಗಿ ಭರವಸೆ ನೀಡಿದ್ದಾರೆ. ಇದರಲ್ಲಿ ಯಾವ ರಾಜಕೀಯ ಬೇಡ. 100 ಬೆಡ್ಗಳ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ರೋಗಿಗಳು ಇಲ್ಲದಿರುವ ಬಗ್ಗೆ ಆರೋಗ್ಯ ಸಚಿವರಾದ ಖಾದರ್ ಅವರಿಗೆ ಭೇಟಿ ಮಾಡಿ ವೈದ್ಯರ ನೇಮಕಕ್ಕೆ ಆಗ್ರಹಿಸಿದಾಗ ಉತ್ತರಿಸಿದ ಸಚಿವರು ಹೆಚ್ಚಿನ ವೇತನ ನೀಡುತ್ತೇವೆ ಎಂದರೂ ಕೂಡ ವೈದ್ಯರು ಬರುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಸರ್ಕಾರ ಆಡಳಿತಕ್ಕೆ ಬಂದ ಕೇವಲ 6 ತಿಂಗಳಲ್ಲಿ 10000 ಕೋಟಿ ಕುಡಿಯವ ನೀರಿಗೆ ಬಿಡುಗಡೆ ಮಾಡಿದೆ. ಕಡೂರು ಕ್ಷೇತ್ರದ ಸಮಸ್ಯೆಯಿದ್ದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಬಳಿ ಶಾಸಕ ದತ್ತ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಅನುದಾನ ತರಲು ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.
ಪುರಸಭಾ ಸದಸ್ಯ ಎಂ.ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಕಾರ್ಯಾಧ್ಯಕ್ಷ, ಮಾಜಿ ಪುರಸಭಾಧ್ಯಕ್ಷ ಭಂಢಾರಿ ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ಕೆ.ವಿ.ವಾಸು, ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ,ಪುರಸಭಾ ಸದಸ್ಯರಾದ ಕೋಳಿ ಲೋಕೇಶ್, ಕೆ.ಜಿ.ರವಿ, ಜಿ.ಸೋಮಯ್ಯ, ಹಾಜಿರಾಬಿ, ಕೆ.ಎನ್. ಜಯಣ್ಣ, ರೇಣುಕಾರಾಧ್ಯ, ಕಾಂತರಾಜು, ಅಬ್ದುಲ್ ಖಾದರ್, ಪುರಸಭೆ ವ್ಯವಸ್ಥಾಪಕ ಯೋಗೀಶ್, ಸಿಬ್ಬಂದಿಗಳಾದ ಹರೀಶ್, ಜೆ.ಇ. ಮಂಜುನಾಥ್ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

