ನಿದ್ದೆ ಬಿಟ್ಟು ಅಡಕೆ ಬಗ್ಗೆ ಸರಿ ಮಾಹಿತಿ ನೀಡಿ
ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.18
ಅಡಕೆ ಜೀವಕ್ಕೆ ಹಾನಿಕರ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಅಡಕೆ ಬೆಳೆಗಾರರ ತಲೆ ಮೇಲೆ ಚಪ್ಪಡಿ ಎಳೆಯಲು ಹೊರಟಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಲಕ್ಷ್ಮಮ್ಮ ಅವರ ಸನ್ಮಾನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಯಿಂದ ಆಯ್ಕೆಯಾದ ಸಂಸದರು ಪಾರ್ಲಿಮೆಂಟ್ನಲ್ಲಿ ನಿದ್ರಿಸುವುದನ್ನು ಬಿಟ್ಟು ಕೋರ್ಟ್ಗೆ ಸರಿಯಾದ ಮಾಹಿತಿ ನೀಡಿದಲ್ಲಿ ಅಡಕೆ ಬೆಳೆಗಾರರನ್ನು ಸಂಕಷ್ಟದಿಂದ ಹೊರತರಲು ಸಾಧ್ಯ ಎಂದರು.
ಈ ಹಿಂದೆಯೂ ಪಾರ್ಲಿಮೆಂಟ್ನಲ್ಲಿ ನಿದ್ರಿಸಿದ್ದರ ಪರಿಣಾಮ ಒತ್ತುವರಿ ತೆರವಿನ ಬಗ್ಗೆ ಕೋರ್ಟ್ಗೆ ಸರಿಯಾದ ಮಾಹಿತಿಯನ್ನು ನೀಡದ ಕಾರಣ ಅನೇಕರು ಬೀದಿ ಪಾಲಾಗುವಂತಾಯಿತು. ಇನ್ನಾದರೂ ಸಂಸದರು ಜನರ ಕಾಳಜಿ ಬಗ್ಗೆ ಎಚ್ಚರಿಕೆ ವಹಿಸಲಿ ಎಂದರು.
ತಮ್ಮ ಅವಧಿಯಲ್ಲಿ 210 ಹಳ್ಳಿ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಬಿಡುಗಡೆಯಾಗಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ನೀತಿ ಸಂಹಿತೆ ಜಾರಿಗೆ ಬರುವುದರೊಂದಿಗೆ ನಂತರ ಮಳೆಗಾಲ ಪ್ರಾರಂಭವಾಗಲಿದೆ. ತಕ್ಷಣವೇ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದರು.
ಮೂಡಿಗೆರೆ ಕಡೂರು-ಮಂಗಳೂರು ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಚುನಾವಣಾ ಪೂರ್ವದಲ್ಲೆ ಜಿಲ್ಲಾಧಿಕಾರಿ ಖಾತೆಗೆ ಸರ್ಕಾರದಿಂದ 4 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರು.
ಸುವರ್ಣ ಗ್ರಾಮ ಯೋಜನೆಗೆ 6 ಕೋಟಿ, ನಕ್ಸಲ್ ಪ್ಯಾಕೇಜ್ಗೆ 5 ಕೋಟಿ, ಪಾರಂಪರಿಕ ವಾಸಿಗಳ ಯೋಜನೆಗೆ 2 ಕೋಟಿ, ನಬಾರ್ಡ್ 4 ಕೋಟಿ ಹೊರತುಪಡಿಸಿ, ಕೊಟ್ಟಿಗೆಹಾರ-ಮಾಗುಂಡಿ-ಕುದುರೆಮುಖ 24 ಕೋಟಿ, ಆಲ್ದೂರ್ ಕಣತಿ 23 ಕೋಟಿ, ಹೊರನಾಡು- ಮರಸಣಿಗೆ 5 ಕೋಟಿ, ಕೆ. ಮಲ್ಲಂದೂರ್ ಗಡಬನಹಳ್ಳಿ 5 ಕೋಟಿ, ಮೂಡಿಗೆರೆ-ಚೀಕನಹಳ್ಳಿ 5.50 ಕೋಟಿ, ಕೆಂಜಿಗೆ ರಸ್ತೆ 1 ಕೋಟಿ, ಮಾಕೋನಹಳ್ಳಿ -ನಂದೀಪುರ 75 ಲಕ್ಷ, ಗೌಡಹಳ್ಳಿ-ಯು ಹೊಸಳ್ಳಿ 95 ಲಕ್ಷ, ನಮ್ಮಭೂಮಿ-ನಮ್ಮ ರಸ್ತೆಗೆ 12 ಕೋಟಿಗಳು ಚುನಾವಣಾ ಪೂರ್ವದಲ್ಲಿ ಬಿಡುಗಡೆಯಾಗಿವೆ. ಕಾಮಗಾರಿ ಬದಲಾವಣೆ ಮಾಡಿದಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ರೈತ ಮುಖಂಡ ಬಿ.ಸಿ.ದಯಾಕರ್, ಪುಣ್ಯ ಬೆಟ್ಟಗೆರೆ, ತಮ್ಮಣ್ಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

