ರಾಜಿನಾಮೆಗೆ ಒತ್ತಾಯ
ಮೂಡಿಗೆರೆ: ಬಳ್ಳಾರಿಯಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ ತನ್ನ ಪುತ್ರನನ್ನು ಉಳಿಸಲು ಸತಾಯ ಗತಾಯ ಪ್ರಯತ್ನಿಸುತ್ತಿರುವ ಸಂಸದ ಫಕೀರಪ್ಪ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಕರವೇ ತಾ. ಗೌರವಾಧ್ಯಕ್ಷ ಹೊರಟ್ಟಿ ರಘು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಫಕೀರಪ್ಪನ ರಾಜಿನಾಮೆಗೆ ಒತ್ತಾಯಿಸಿ ಉಗ್ರ ಪತ್ರಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಕರವೇ ಅಧ್ಯಕ್ಷ ಪ್ರಸನ್ನ ದಾರದಹಳ್ಳಿ,ಬಾಲು, ಉಪಸ್ಥಿತರಿದ್ದರು.
ನೋಟ್ ಬುಕ್, ಬ್ಯಾಗ್ ವಿತರಣೆ
ಚಿಕ್ಕಮಗಳೂರು: ಕಷ್ಟದಲ್ಲಿರುವ ಬಡವರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವುದೇ ಸ್ವಸಹಾಯ ಸಂಘಗಳ ಮುಖ್ಯ ಉದ್ದೇಶವಾಗಬೇಕು ಎಂದು ಪಲ್ಲವಿ ಸಿ.ಟಿ. ರವಿ ಹೇಳಿದ್ದಾರೆ. ನಗರದ ಅಂಚೆ ನೌಕರರ ಭವನದಲ್ಲಿ ಸಮೃದ್ಧಿ ವಿವಿದೋದ್ದೇಶ ಅಭಿವೃದ್ಧಿ ಸಂಸ್ಥೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳಿಗೆ ಸಹಾಯಧನ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಿಸಿ ಮಾತನಾಡಿದರು. ಮಾಜಿ ಸಿ.ಡಿ.ಎ. ಅಧ್ಯಕ್ಷ ಬಿ. ರಾಜಪ್ಪ ಮಾತನಾಡಿದರು.ಕರ್ನಾಟಕ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ರಾಜ್ಯ ಯೋಜನಾಧಿಕಾರಿಯಾದ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಕುಸುಮಾ ಸುನಿಲ್, ಕಾರ್ಯದರ್ಶಿ ಎಸ್.ಎನ್. ಪಾರ್ವತಮ್ಮ ನಾರಾಯಣ್, ನಿರ್ದೇಶಕರಾದ ಮಹಾಲಕ್ಷ್ಮಿ ನರಸಿಂಹಮೂರ್ತಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.
ಚಿಕ್ಕಂಗಳ ಕೆರೆ ಸೇತುವೆ ದುರಸ್ತಿಗೆ ಶಾಸಕ ದತ್ತ ಸೂಚನೆ
ಕಡೂರು: ಎಲ್ಲ ಸಮುದಾಯ ಒಟ್ಟಾಗಿ ಕೊಂಡೊಯ್ದು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆಯ ರಾಜಕಾರಣ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ವೈಎಸ್ವಿ ದತ್ತ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ಚಿಕ್ಕಂಗಳ ಗ್ರಾಮದಲ್ಲಿ ಕೆರೆಯ ಸೇತುವೆ ಒಡೆದಿರುವುದನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅಪೂರ್ಣವಾಗಿರುವ ಗ್ರಾಮದ ಶ್ರೀಈಶ್ವರಸ್ವಾಮಿ ದೇವಾಲಯದ ಸಮುದಾಯಭವನ ಹಾಗೂ ವಿವಿಧ ಸಮುದಾಯಗಳ ದೇವಾಲಯಗಳಿಗೆ ಭೇಟಿ ನೀಡಿ ಜನರಿಂದ ಗೌರವ ಸ್ವೀಕರಿಸಿ ಮಾತನಾಡಿದರು. ಸೇತುವೆಯು ಕುಸಿದಿರುವುದರ ಬಗ್ಗೆ ಕೂಡಲೇ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಶ್ರೀಈಶ್ವರ ದೇವಾಲಯದ ಸಮುದಾಯ ಭವನದ ಕಾಮಗಾರಿ 13 ವರ್ಷದಿಂದ ಪೂರ್ಣವಾಗದೇ ನಿಂತಿದೆ. ತಾವು ಇದೀಗ 5 ಲಕ್ಷರೂ ಅನುದಾನ ನೀಡುವುದಾಗಿ ಹೇಳಿ ಕಾಮಗಾರಿ ಮುಂದುವರಿಸಿದ ಕೂಡಲೇ ಮತ್ತೆ 5 ಲಕ್ಷ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಬಿ.ಪಿ.ನಾಗರಾಜ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಶ್ರೀ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಚಿಕ್ಕಂಗಳ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಮುಕುಂದಪ್ಪ, ಜೆಡಿಎಸ್ ಮುಖಂಡರಾದ ಮಾಜಿ ಗ್ರಾ.ಪಂ. ಅಧ್ಯಕ್ಷ ಸಿ.ವಿ.ರಾಜಣ್ಣ, ಕಂಸಾಗರ ಶೇಖರ್, ತಿಮ್ಮೇಗೌಡ, ಮಂಜುನಾಥ್, ಎಂಜಿನಿಯರ್ ದಯಾಶಂಕರ್, ಮಂಜುನಾಥ್, ತಮ್ಮಯ್ಯ, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

