ತತ್ವಕ್ಕಿಂತ ನೀತಿಗೆ ಪ್ರಾಧಾನ್ಯತೆ: ಶ್ರೀ
ಚಿಕ್ಕಮಗಳೂರು: ವೀರಶೈವ ಧರ್ಮ ಜಾತಿಗಿಂತ ನೀತಿಗೆ ಮಹತ್ವ ಕೊಟ್ಟಿದೆ. ತತ್ವಕ್ಕಿಂತ ನೀತಿಗೆ ಪ್ರಾಧಾನ್ಯತೆ ಕೊಡುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದ್ದಾರೆ.
ತಾಲೂಕಿನ ಕುರುವಂಗಿ ಗ್ರಾಮದ ಶ್ರೀಉಕ್ಕಡಗಾತ್ರೆ ಕರಿಬಸವೇಶ್ವರಸ್ವಾಮಿ ಪ್ರತಿಷ್ಠಾಪನೆಯ 12ನೇ ವಾರ್ಷಿಕೋತ್ಸವ ಮತ್ತು ನೂತನ ನಾಗಪ್ಪಜ್ಜಯ್ಯಸ್ವಾಮಿ ನೂತನವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಶಿವಪೂಜಾ ಕಾರ್ಯಕ್ರಮದ ನಂತರ ಏರ್ಪಡಿಸಿದ್ದ ಧರ್ಮಜಾಗೃತಿ ಸಮಾರಂಭ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಶಂಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೈವಗಳ ಗ್ರಾಮ ಕುರುವಂಗಿ ಒಳಿತನ್ನು ಗೌರವಿಸುವ ಗುರುತಿಸುವ ಸಂಸ್ಕಾರ ಹೊಂದಿದೆ. ಗುರುಧ್ಯಾನ ಪುಷ್ಟಿದಾಯಕವೆಂಬ ಸತ್ಯ ಅರಿತಿದೆ. ಮಕ್ಕಳಲ್ಲಿ ಧಾರ್ಮಿಕ ಸಂಪ್ರದಾಯಗಳನ್ನು ಬಿತ್ತುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ ದೇವರಾಜರನ್ನು ಜಗದ್ಗುರುಗಳು ಗುರುರಕ್ಷೆನೀಡಿ ಆಶೀರ್ವಸಿದರು.
ಗ್ರಾಮದ ಮುಖಂಡರಾದ ಹುಲಿಯಪ್ಪಗೌಡ ಸ್ವಾಗತಿಸಿ, ಹಾಲಪ್ಪಗೌಡ ಪ್ರಾಸ್ತಾವಿಸಿದರು. ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ವಂದಿಸಿದರು, ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ನೀಲಕಂಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

