ಮಾನಸಿಕ ಪ್ರಸನ್ನತೆಗೆ ಅಧ್ಯಾತ್ಮ ಸಹಕಾರಿ
ಶಿವಮೊಗ್ಗ: ಏಕಾಗ್ರತೆ, ಮಾನಸಿಕ ಪ್ರಸನ್ನತೆಗೆ ಮತ್ತು ಸುಜ್ಞಾನಿಗಳಾಗಲು ಆಧ್ಯಾತ್ಮ ಸಹಕಾರಿ ಎಂದು ವಿದ್ವಾಂಸ ಪ್ರೊ. ವಿ.ಎನ್. ಭಟ್ ಹೇಳಿದರು.
ಭಾನುವಾರ ನಗರದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಮೊದಲ ಬಾರಿ ಆಯೋಜಿಸಿದ್ದ ವಸತಿ ಶಾಲೆ ಮಕ್ಕಳಿಗೆ ಹಿಂದೂ ಸಂಸ್ಕೃತಿಯಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮಾಡುವ ವಿಧಿ-ವಿಧಾನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇವರನ್ನು ಪೂಜಿಸಿ: ಲಬಿಟ್ಟ ಬಾಳೆ ಬಾಗುತ್ತದೆ. ಕಾಳು ತುಂಬಿದ ಭತ್ತ ಬಾಗುತ್ತದೆ, ಫಲಭರಿತ ಮಾವಿನ ಗೊಂಚಲು ಬಾಗುತ್ತದೆ. ಅದೇ ರೀತಿ ಮಾನವರು ಒಳ್ಳೆಯ ಸಂಸ್ಕೃತಿ ಬೆಳೆಸಿಕೊಂಡು ವಿನಯಶೀಲರಾಗಬೇಕು. ಅದಕ್ಕೆ ದೇವರನ್ನು ಪೂಜೆ ಮಾಡುವ ವಿಧಾನ ಸಹಕಾರಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ಅದನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಟ್ಟಾಗ ಯಶಸ್ಸು ಸಿಗುತ್ತದೆ. ಆದರೆ ಇಂದು ಈ ರೀತಿಯ ವಿಧಾನವನ್ನು ಬಳಸದ ಕಾರಣ ಅನೇಕರು ತಾವು ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವುದು ಕಡಿಮೆ ಎಂದು ಹೇಳಿದರು.
ಉನ್ನತ ಶಿಕ್ಷಣ ಪಡೆದವರಿಗೂ ಸಹ ಹಿಂದೂ ಧರ್ಮದ ಎಷ್ಟೋ ಸಂಸ್ಕೃತಿಗಳು ತಿಳಿದಿಲ್ಲ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಮಕ್ಕಳಿಗೆ ಪೂಜೆ ವಿಧಾನ ಹೇಳಿಕೊಟ್ಟಿದ್ದು ಶ್ರೇಷ್ಠ ಕೆಲಸ ಎಂದು ಹೇಳಿದರು.
ಶ್ರದ್ದೆ ಇಲ್ಲ: ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಿ.ಎಂ.ವೆಂಕಟರಮಣ, ಮನೆಯಲ್ಲಿ ಪೂಜೆ ಮಾಡುತ್ತೇವೆ ಆದರೆ ಶ್ರದ್ಧೆ ಇರುವುದಿಲ್ಲ. ಹಾಗಾಗಿ ಮಕ್ಕಳಲ್ಲಿ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರೆ ಮಕ್ಕಳು ತಮ್ಮ ಮನೆಗಳಲ್ಲಿ ಶ್ರದ್ಧೆಯಿಂದ ಪೂಜೆ ಮಾಡಲು ಸಾಧ್ಯ ಎಂದು ಹೇಳಿದರು.
ಎ.ವಿ.ನರಸಿಂಹಮೂರ್ತಿ ಹಾಜರಿದ್ದರು. ಸುಬ್ರಾಯ್ಜೋಯಿಸ ಅವರು ಮಕ್ಕಳಿಗೆ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಶಾಲೆಯ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

