ಚಿಕ್ಕಮಗಳೂರು

ಅಡಕೆ ನಿಷೇಧದ ವಿರುದ್ಧ ಹೋರಾಟಕ್ಕೆ ಮುಂದಾಗಿ

Published On :

ಕ.ಪ್ರ.ವಾರ್ತೆ, ತರೀಕೆರೆ, ಡಿ. 25
ಅಡಕೆ ಮಾದಕ ವಸ್ತು ಅಲ್ಲ. ಆದರೂ ಇದನ್ನು ನಿಷೇಧಿಸುವುದರ ವಿರುದ್ಧ  ನಡೆಯುವ ಹೋರಾಟಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಮನವಿ ಮಾಡಿದರು.
ಅವರು, ನವಚೇತನ ವಿಚಾರ ಸಂಘದ ವತಿಯಿಂದ ಪಟ್ಟಣದ ಸರ್ಜಾ ಹನುಮಪ್ಪ ನಾಯಕ ಖಾಸಗಿ ಬಸ್ಸು  ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಅಚರಣೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವವನ್ನು ವರ್ಷದ ಎಲ್ಲಾ ದಿನಗಳಲ್ಲೂ ಆಚರಿಸಬೇಕು. ಸಂಘ ಸಂಸ್ಥೆಗಳಿಂದ ಕನ್ನಡ ಭಾಷೆ ಉಳಿದಿದೆ, ನವಚೇತನ ವಿಚಾರ ಸಂಘ ಪಟ್ಟಣದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಬೇಕು ಎಂದು ತಿಳಿಸಿದರು.  
ರೈತರ ಜೀವನದೊಂದಿಗೆ ಆಟ: ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, 5 ಲಕ್ಷ ಕುಟುಂಬಗಳು ಅಡಕೆ ಬೆಳೆಯನ್ನು ಅವಲಂಬಿತವಾಗಿದೆ. ಸರ್ಕಾರ ರೈತರ ಜೀವನದ ಜೊತೆ ಆಟವಾಡಬಾರದು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿ, ಕನ್ನಡ ಪ್ರದೇಶಗಳು ಒಂದಾಗಬೇಕು, ತಾಲೂಕು ನೀರಾವರಿ ಆಗಬೇಕು, ನೀರಿನ ಬಗ್ಗೆ ಒಗ್ಗಟ್ಟಿನ ಹೋರಾಟ ಆಗತ್ಯ ಎಂದು ಅವರು ತಿಳಿಸಿದರು. ಬೆಜೆಪಿ ಮುಖಂಡ ಟಿ.ಎಂ. ಭೋಜರಾಜ್, ಟಿ. ಕುಮಾರ್ ಮಾತನಾಡಿದರು.
ನವಚೇತನ ವಿಚಾರ ಸಂಘದ ಅಧ್ಯಕ್ಷ ಟಿ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪುರಸಭಾಧ್ಯಕ್ಷ  ಟಿ.ಆರ್. ನಾಗರಾಜ್, ಜೇನುಗೂಡು ವೀಳ್ಳೆದಲೆ ಸಂಘದ ಅಧ್ಯಕ್ಷ  ಶಿವಣ್ಣ, ಪಿಎಲ್‌ಡಿಬಿ ಅಧ್ಯಕ್ಷ ಬಸವರಾಜ್, ವಾಲ್ಮೀಕಿ ಸಮಾಜದ ಮುಖಂಡ ವಸಂತಕುಮಾರ್ (ಕವಾಲಿ) ಅಕ್ಬರ್ ಪಾಷ, ಕನ್ನಡಶ್ರೀ ಬಿ.ಎಸ್. ಭಗವಾನ್ ಸಂಘದ ಪದಾಧಿಕಾರಿಗಳು, ಸದಸ್ಯರು, ಪುರಸಭಾ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.