ಕಡಿಮೆ ಬಿದಿರು ಬಳಸಿ ಆದಾಯ ಹೆಚ್ಚಿಸಿಕೊಳ್ಳಿ
ಕ.ಪ್ರ.ವಾರ್ತೆ, ತರೀಕೆರೆ, ಡಿ. 25
ಅರಣ್ಯ ಕಡಿಮೆಯಾಗುತ್ತಿರುವುದರಿಂದ ಬಿದಿರೂ ಕೂಡಾ ಅಳಿವಿನಂಚಿನಲ್ಲಿದ್ದು, ಕಡಮೆ ಬಿದಿರು ಬಳಸಿ, ಆಧುನಿಕ ಶೈಲಿಯಲ್ಲಿ ಬಿದಿರು ವಸ್ತುಗಳನ್ನು ತಯಾರಿಸಿ ಮಾರುಕಟ್ಟೆ ಮಾಡಿದಲ್ಲಿ ಹೆಚ್ಚು ಆದಾಯ ತೆಗೆಯಬಹುದು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ. ದೇವರಾಜಪ್ಪ ತಿಳಿಸಿದರು.
ಅವರು, ವಿಕಸನ ಸಂಸ್ಥೆ, ಬಿದಿರು, ಕರಕುಶಲಕರ್ಮಿಗಳ ಇಲಾಖೆ ಮಂಗಳೂರು ವತಿಯಿಂದ ಸಮೀಪದ ಎ. ರಂಗಾಪುರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಸ್ತಶಿಲ್ಪ ವಿಕಾಸ ಯೋಜನೆಯಡಿಯಲ್ಲಿ ನಡೆದ ಬಿದಿರು ಕರಕುಶಲತೆಯ ಗುಂಪು ಚರ್ಚೆ, ಮೂಲ ಸಮೀಕ್ಷೆ ಮತ್ತು ಕ್ರೋಢೀಕರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸದುಪಯೋಗ ಪಡೆಯಿರಿ: ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ. ವರ್ಗೀಸ್ ಕ್ಲೀಟಸ್ ಮಾತನಾಡಿ, ಬಿದಿರು ಕರಕುಶಲ ಕರ್ಮಿಗಳಿಗೆ ಮುಂದಿನ ದಿನಗಳಲ್ಲಿ ಬಿದಿರಿನಲ್ಲಿ ಆಧುನಿಕ ಶೈಲಿಯಲ್ಲಿ ವಸ್ತುಗಳನ್ನು ತಯಾರು ಮಾಡುವ ವಿಧಾನದ ಬಗ್ಗೆ ತರಬೇತಿ ನೀಡಲಾಗುವುದು. ಇದರ ಸದುಪಯೋಗವನ್ನು ಬಿದಿರು ಕರಕುಶಲಕರ್ಮಿಗಳು ಪಡೆಯಬೇಕು ಎಂದು ತಿಳಿಸಿದರು.
ಕಾರ್ಪೋರೇಶನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ವ್ಯವಸ್ಥಾಪಕ ಸತ್ಯೇಶ್, ಉದ್ಯೋಗದ ಮಹತ್ವ ಕುರಿತು ಮತ್ತು ಕುಟುಂಬದ ಅದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಪಂ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ಗಣೇಶ್, ಬೇಲೇನಹಳ್ಳಿ ಹಾಗೂ ಸ್ಥಳೀಯ ಗ್ರಾಪಂ ಸದಸ್ಯ ರವಿಕುಮಾರ್, ರೇಣುಕಮ್ಮ, ಯೋಗೀಶ್, ದೊರೆರಾಜ್, ಪ್ರದೀಪ್, ಚಿಕ್ಕಮಠ, ಪಾರ್ವತಿ, ಶ್ರೀನಿವಾಸ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

