ವಿಟ್ಲಮಕ್ಕಿಯಲ್ಲಿ ಉಗ್ರಗಾಮಿ ಯಾಸೀನ್ ಭಟ್ಕಳ್ ವಿಚಾರಣೆ
ಕೊಪ್ಪ: ಬಂಧಿತ ಉಗ್ರ ಯಾಸಿನ್ ಭಟ್ಕಳನನ್ನು ದೆಹಲಿಯ ಅಪರಾಧ ಪತ್ತೆ ದಳ ಪೊಲೀಸ್ ಅಧಿಕಾರಿಗಳು ಶನಿವಾರ ತಾಲೂಕಿನ ವಿಟ್ಲಮಕ್ಕಿ ಫಾರಂಹೌಸ್ವೊಂದಕ್ಕೆ ಕರೆತಂದು ವಿಚಾರಣೆ ನಡೆಸಿದರು.
ದೆಹಲಿ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಕೈಲಾಶ್ಸಿಂಗ್ ಬಿಸ್ಟ್ ನೇತೃತ್ವದ 15 ಜನರ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲಿನೊಂದಿಗೆ ಉಗ್ರ ಯಾಸಿನ್ ಭಟ್ಕಳ್ನನ್ನು ಕರೆತರಲಾಯಿತು. ಬಳಿಕ ಆತನಿಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಹಿನ್ನೆಲೆ: ತಾಲೂಕಿನ ವಿಟ್ಲಮಕ್ಕಿಯಲ್ಲಿ 2008ರಲ್ಲಿ ಫಕೀರ್ ಮಹಮ್ಮದ್ ಎಂಬವರಿಂದ ದುಬೈ ಮೂಲದ ಅಹಮದ್ ಬಾವ ಎಂಬವರು 5 ವರ್ಷದ ಗುತ್ತಿಗೆಗೆ ವಿಟ್ಲಮಕ್ಕಿಯ 2 ಎಕರೆ ಭೂಮಿ ಗುತ್ತಿಗೆ ಪಡೆದಿದ್ದರು. ಆ ಸ್ಥಳದಲ್ಲಿ ಬೀಗ, ಅಟಿಕೆ ಸಾಮಗ್ರಿ ಕಾರ್ಖಾನೆ ಸ್ಥಾಪನೆ ಮತ್ತು ಜಮೀನು ಅಭಿವೃದ್ಧಿಪಡಿಸುವ ಒಪ್ಪಂದ ಮಾಡಿಕೊಂಡಿದ್ದರು. ಕಾರ್ಖಾನೆಗಾಗಿ ಕಟ್ಟಡ ನಿರ್ಮಿಸಿದ್ದಲ್ಲದೆ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯಿಂದ ಬೀಗ ಹಾಗೂ ಆಟದ ಸಾಮಾನು ತಯಾರಿಕಾ ಘಟಕಕ್ಕೆ ಪರವಾನಗಿ ಪಡೆಯಲಾಗಿತ್ತು. ದುಬೈ ಮೂಲದ ಅಹಮದ್ ಬಾವನ ಗೆಳೆಯ ಯಾಸೀನ್ ಭಟ್ಕಳ್ ವಿಟ್ಲಮಕ್ಕಿಗೆ ಬಂದು ಸಹಚರರೊಂದಿಗೆ ಬಾಂಬ್ ತಯಾರಿಸುತ್ತಿದ್ದನೆಂದು ಗುಮಾನಿ ಇತ್ತು.
ಈ ಹಿನ್ನೆಲೆ ಮಂಗಳೂರಿನ ಅಪರಾಧ ಪತ್ತೆ ದಳದ ಅಧಿಕಾರಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ 2008ರಲ್ಲಿ ವಿಟ್ಲಮಕ್ಕಿ, ನರಸಿಂಹರಾಜಪುರ ತಾಲೂಕಿನ ಹಕ್ಲುಮನೆಯಲ್ಲಿ ತಂಗಿದ್ದ ಆತನ ಕಾರು ಚಾಲಕ ರಫೀಕ್ ಮನೆ ಮೇಲೆ ದಾಳಿ ನಡೆಸಿತ್ತು. ಆಗ ಹಲವು ಮಾಹಿತಿ ಕಲೆ ಹಾಕಿತ್ತು. ಅಲ್ಲದೆ ಫಾರಂಹೌಸ್ನಲ್ಲಿ ಕೃಷಿ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕುದುರೆಗುಂಡಿಯ ಕುಂಜಿಮೋಣು, ಅಬುಬುಕರ್, ಬದ್ರು ಎಂಬವರನ್ನು ವಿಚಾರಣೆಗೆ ಗುರಿಪಡಿಸಿದ್ದರು. ಯಾಸಿನ್ ಭಟ್ಕಳ್ನನ್ನು ದೆಹಲಿಯಿಂದ ಮಂಗಳೂರಿಗೆ ಕರೆತಂದು ಉಡುಪಿ ಮಾರ್ಗವಾಗಿ ತಾಲೂಕಿನ ವಿಟ್ಲಮಕ್ಕಿಗೆ ಸ್ಥಳ ಪರೀಶೀಲನೆಗೆ ಕರೆತರಲಾಗಿತ್ತು. ನಂತರ ಪುನಃ ಮಂಗಳೂರಿಗೆ ಕರೆದೊಯ್ಯಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

