ಮಕ್ಕಳಲ್ಲಿ ಸಂಸ್ಕೃತಿ ಅರಿವು ಬೆಳೆಸಿ
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಡಿ.29
ಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕೆಂದು ಹುಣಸಘಟ್ಟ ತಪೋಕ್ಷೇತ್ರದ ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಇಲ್ಲಿಗೆ ಸಮೀಪದ ಲಿಂಗದಹಳ್ಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಭಾನುವಾರ ಶ್ರೀರಾಮದೇವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನಸ್ಸನ್ನು ಹತೋಟಿಗೆ ತರಲು ಸಾಧನೆ ಅಗತ್ಯ. ಸಾಧನೆಯಿಂದ ಏಕಾಗ್ರತೆ ಸಾಧ್ಯ. ಗುರಿ ಇದ್ದರೆ ಸಾಧನೆ ಮಾಡಬಹುದು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರಲ್ಲೂ ಪರಮಾತ್ಮ ಇದ್ದಾನೆ. ಅದರ ಕಡೆಗೆ ಚಿಂತನೆ ಮಾಡಬೇಕು. ಮನುಷ್ಯ ಸಾಧಕನಾಗಬೇಕು ಎಂದರು.
ಚಿಕ್ಕಮಗಳೂರು ಬ್ರಹ್ಮಕುಮಾರೀಸ್ನ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಭಾಗ್ಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಲಿಂಗದಹಳ್ಳಿ ಶಾಖೆ ಪ್ರಥಮ ವಾರ್ಷಿಕೋತ್ಸವ ಆಚರಿಸುತ್ತಿರುವುದು ಶುಭ ದಿವಸವಾಗಿದೆ. ಈಶ್ವರೀಯ ವಿ.ವಿ. ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಎಲ್ಲರಿಗೂ ಪರಮಾತ್ಮನ ದಿವ್ಯ ಸಂದೇಶವನ್ನು ತಲುಪಿಸಬೇಕು. ರಾಜಯೋಗದಿಂದ ಮನಸ್ಸಿಗೂ ಯೋಗ ದೊರೆಯುತ್ತದೆ. ಕಾಲಚಕ್ರದಲ್ಲಿ ಜೀವನಚಕ್ರ ಕೂಡ ಇರುತ್ತದೆ. ಎಲ್ಲರೂ ಈಶ್ವರೀಯ ವಿದ್ಯೆಯನ್ನು ಅಭ್ಯಾಸ ಮಾಡಬೇಕು. ಕರ್ತವ್ಯವನ್ನು ಸಂಬಂಧನ್ನು ಪ್ರೀತಿಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.
ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್ ಮಾತನಾಡಿ, ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಿನನಿತ್ಯ ಒಳ್ಳೆಯ ಆಲೋಚನೆಗಳು ಅಗತ್ಯ. ಎಲ್ಲ ಕಡೆ ಶಾಂತಿಮಂತ್ರ ಬಿತ್ತರಿಸಲಿ, ಮಾನಸಿಕ ಸಮತೋಲನ ಅಗತ್ಯ ಎಂದು ತಿಳಿಸಿದರು.
ಲಿಂಗದಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಕೆಪಿಟಿಸಿಎಲ್ನ ನಿವೃತ್ತ ಉಪ ಲೆಕ್ಕ ನಿಯಂತ್ರಣಾಧಿಕಾರಿ ಎಲ್.ಸಿ. ಹಾಲಪ್ಪ, ನಾಗರಾಜ್ ಕಲೈವಾಣಿ ಮತ್ತಿತರರು ಮಾತನಾಡಿದರು.
ಪ್ರಸನ್ನಕುಮಾರಿ ಅವರು ಗೀತೆಗಳನ್ನು ಹಾಡಿದರು. ಲಿಂಗದಹಳ್ಳಿ ಈಶ್ವರೀಯ ವಿ.ವಿ. ಬ್ರಹ್ಮಕುಮಾರಿಯರು ಮತ್ತು ಕುಮಾರರು, ಗ್ರಾಮಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಶಾಂತಿಯಾತ್ರೆ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

