ಚಿಕ್ಕಮಗಳೂರು

ಬಂದ್ ಆಚರಿಸಿದರೆ ನೀರು ಬರುವುದೇ: ದತ್ತ

Published On :

ಕ.ಪ್ರ.ವಾರ್ತೆ, ಕಡೂರುಸ ಡಿ.31
ಬಂದ್ ಮಾಡುವುದರಿಂದ ಯಾವುದೇ ಕುಡಿಯುವ ನೀರು ಬರುವುದಿಲ್ಲ ಈ ನಿಟ್ಟಿನಲ್ಲಿ ವಾಸ್ತವ ಸ್ಥಿತಿಯನ್ನು ಬಿಜೆಪಿ ಮುಖಂಡರು ಅರಿಯಬೇಕು ಎಂದು ಶಾಸಕ ವೈಎಸ್‌ವಿ ದತ್ತ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಕಡೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಚಿಣ್ಣರ ರಂಗಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರು ಹರಿಯಬೇಕಿತ್ತು: ಭದ್ರಾ ನದಿಯಿಂದ ಕಡೂರು ಹಾಗೂ ಬೀರೂರು ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಗೆ 2007ರಲ್ಲಿ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿಯವರು ಚಾಲನೆ ನೀಡಿದ್ದು, ಯೋಜನೆ 2012ರ ಜೂನ್ ವೇಳೆಗೆ ಮುಗಿದು ನೀರು ಹರಿಯಬೇಕಿತ್ತು.
ಆದರೆ ಕೆ.ಎಂ.ಕೆ. ನಿಧನಾನಂತರ ಕಾಮಗಾರಿ ಮಂದಗತಿಯಲ್ಲಿ ಸಾಗಿತು. ಇದಕ್ಕೆ ಬಿಜೆಪಿ ಸರ್ಕಾರೇ ನೇರ ಹೊಣೆಯೇ ಹೊರತು ದತ್ತ ಅಲ್ಲ ಎಂದವರು ಹೇಳಿದರು.
ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಕಡೂರು ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರವನ್ನು ದತ್ತು ಪಡೆದು ಬಿಜೆಪಿ ಶಾಸಕರು ಸರ್ವಾಂಗೀಣ ಅಭಿವೃದ್ಧಿ ಮಾಡಿ, ಕಡೂರನ್ನು ನಂದನ ವನವನ್ನಾಗಿ ಮಾಡಿರುವುದರಿಂದ ನನಗೆ ಯಾವ ಕೆಲಸ ಉಳಿಸಿಲ್ಲ. ಹಾಗಾಗಿ ಕಡೂರು ಕ್ಷೇತ್ರಕ್ಕೆ ಈ ದತ್ತ 15 ದಿನಕ್ಕೊಮ್ಮೆ ಭೇಟಿ ನೀಡುತ್ತಾ ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಭಾಗವಹಿಸುವುದು ಬಿಟ್ಟರೆ ಬೇರೆ ಕೆಲಸವಿಲ್ಲ ಎಂದು ದತ್ತ ಬಿಜೆಪಿ ನಾಯಕರ ಆರೋಪಕ್ಕೆ ವ್ಯಂಗ್ಯವಾಡಿದರು.  
ಭದ್ರಾ ನೀರನ್ನು ದಸರಾ, ದೀಪಾವಳಿಗೆ ಕೊಡುತ್ತೇವೆ ಎಂದು ಶಾಸಕರು ಸುಳ್ಳು ಹೇಳುತ್ತಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ದತ್ತ, ಜನವರಿಯಲ್ಲಿ ಪ್ರಾಯೋಗಿಕವಾಗಿ ನೀರು ನೀಡಲಾಗುವುದು. ಫೆಬ್ರವರಿಯಲ್ಲಿ ಸಂರ್ಪೂರ್ಣ ಕಡೂರು ಹಾಗೂ ಬೀರೂರು ಅವಳಿ ಪಟ್ಟಣ ಸೇರಿದಂತೆ ಮಾರ್ಗ ಮಧ್ಯದ 34 ಹಳ್ಳಿಗಳಿಗೂ ನೀರು ನೀಡುತ್ತೇವೆ. ಜನರು ಯಾವುದೇ ಆತಂಕಕ್ಕೆ  ಒಳಗಾಗುವುದು ಬೇಡ ಎಂದರು.  
ಮಕ್ಕಳನ್ನು ಆಸ್ತಿಯನ್ನಾಗಿಸಿ: ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಬೇಡಿ ವಿದ್ಯೆ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದರಿಂದ ಅವರ ಉಜ್ವಲ ಭವಿಷ್ಯ ರೂಪಿಸಿದಂತಾಗುತ್ತದೆ ಎಂದರು.
ಕಡೂರು ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಮಾತನಾಡಿದರು.
ಸಂಸ್ಥೆ ನಿರ್ದೇಶಕ ಕಮಲ್ ಚಂದ್ ಡಾಗಾ, ಡಿ.ಕೆ. ಜೈನ್, ಕೆ.ಎನ್. ಪುಂಡಲೀಕರಾವ್, ಪ್ರಾಚಾರ್ಯರಾದ ನಂದಿನಿ ಶಿರಹಟ್ಟಿ, ಶಿರಹಟ್ಟಿ, ಪೋಷಕರು ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.