ದೇಶದ ಅಭಿವೃದ್ಧಿಗೂ ಸೇವಾದಳ ಸಹಕಾರಿ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಡಿ. 31
ಶಿಸ್ತು, ಶ್ರದ್ಧೆ ಉತ್ತಮ ನಡವಳಿಕೆ ಪ್ರೇರೇಪಿಸುವ ಸೇವಾದಳ ರಾಷ್ಟ್ರದ ಅಭಿವೃದ್ಧಿಗೂ ಪೂರಕ ಎಂದು ಭಾರತ ಸೇವಾದಳದ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಐ.ಬಿ. ಶಂಕರ್ ಹೇಳಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಜ್ಞಾನಜ್ಯೋತಿ ಸೇವಾದಳ ಘಟಕ ಆಯೋಜಿಸಿದ್ದ ಭಾರತ ಸೇವಾದಳ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ವಿನಯ, ವಿವೇಕ, ಬುದ್ಧಿವಂತಿಕೆ, ಸೌಜನ್ಯ, ಜವಾಬ್ದಾರಿಯ ಜೊತೆಗೆ ದೇಶಪ್ರೇಮವನ್ನು ಮಕ್ಕಳಲ್ಲಿ ಸೇವಾದಳ ಪ್ರೇರೇಪಿಸುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಅಚ್ಚುಕಟ್ಟುತನ ಅಗತ್ಯ. ಗುರು-ಹಿರಿಯರನ್ನು ಗೌರವಿಸಬೇಕು. ಉಪಕಾರ ಸ್ಮರಣೆ ಅತ್ಯುತ್ತಮ ಗುಣ ಎಂದು ಹೇಳಿದರು.
ಶಿಸ್ತು ಅಗತ್ಯ: ಬುದ್ಧಿಶಕ್ತಿ ಬಳಸಿ ಜೀವಿಸಿದರೆ ದೇಶವೂ ಅಭಿವೃದ್ಧಿಗೊಳ್ಳುತ್ತದೆ. ನೈತಿಕತೆ ದೃಢತೆ ವಿದ್ಯಾವಂತರಿಗೆ ಅಗತ್ಯ. ಜೀವನದಲ್ಲಿ ಬದ್ಧತೆ ಮುಖ್ಯ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ಮಾತನ್ನು ಅರ್ಥ ಮಾಡಿಕೊಂಡು ನಡೆದರೆ ಬಾಳು ಹಸನಾಗುತ್ತದೆ ಎಂದ ಐ.ಬಿ. ಶಂಕರ್, ಅನ್ಯಾಯ ಪ್ರತಿಭಟಿಸುವ ಗುಣ ಒಳ್ಳೆಯದು. ಆದರೆ, ಪ್ರತಿಭಟನೆಯಲ್ಲೂ ಶಿಸ್ತು ಇರಬೇಕು. ಮುಷ್ಕರದ ಮೂಲ ಉದ್ದೇಶ ನೋವು, ತೊಂದರೆ ಮನವರಿಕೆ ಮಾಡಿಕೊಡುವುದಾಗಿರಬೇಕೆ ಹೊರತು ಧ್ವಂಸ, ಲೂಟಿ, ಕಲ್ಲು ತೂರಾಟ ಅಲ್ಲ. ಯಾರೋ ಕಿಡಿಕಿಡಿಗೇಡಿ ಮಾಡಿದ ತಪ್ಪಿಗಾಗಿ ಇಡೀ ಊರಿನ ಜನ ತೊಂದರೆ ಸಿಲುಕುವಂತಾಗಬಾರದು ಎಂದು ಕಿವಿಮಾತು ಹೇಳಿದರು.
ಸೇವಾದಳ ಜಿಲ್ಲಾ ಸಂಘಟಕ ರವಿಶಂಕರ್ ಮಾತನಾಡಿ, 1924 ರಲ್ಲಿ ಹಿಂದೂಸ್ತಾನ್ ಸೇವಾದಳ ಪ್ರಾರಂಭಗೊಂಡಿತು. ನಂತರ ಅದು ಭಾರತಸೇವಾದಳವಾಗಿ ಬದಲಾವಣೆಗೊಂಡಿತು ಸಂಸ್ಥಾಪನಾ ದಿನವನ್ನು ಸೇವಾದಳ ದಿನವಾಗಿ ನಾಡಿನಾದ್ಯಂತ ಸಪ್ತಾಹವಾಗಿ ಆಚರಿಸಲಾಗುತ್ತಿದೆ. ಏಳು ದಿನ ವಿವಿಧ ಸ್ಪರ್ಧೆ, ಕಾರ್ಯಕ್ರಮಗಳ ಮೂಲಕ ಸೇವಾದಳದ ಅರಿವು ಮೂಡಿಸುವ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.
ತಾಲೂಕು ಸಂಘಟಕರಾದ ಎಸ್.ಈ. ಲೋಕೇಶ್ವರಾಚಾರ್ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

