ಇಂದು ರಸಪ್ರಶ್ನೆ
ನರಸಿಂಹರಾಜಪುರ: ಕೆನರಾ ಬ್ಯಾಂಕ್, ಸಿಂಹನಗದ್ದೆ ಜೈನ್ ಮಿಲನ್ ಹಾಗೂ ಮಹಾ ವೀರ ದಿಂಗಬರ ಜೈನ ಸಮಾಜದ ಸಂಯುಕ್ತಾಶ್ರಯದಲ್ಲಿ ಬಸ್ತಿಮಠದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯಲ್ಲಿ ಫೆ.2ರ ಶನಿವಾರ ತಾಲೂಕು ಮಟ್ಟದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂಚಾಲಕರರಾಗಿ ಸಚ್ಚಿನ್ ಆಯ್ಕೆ
ಮೂಡಿಗೆರೆ: ಜೆಡಿಎಸ್ ತಾಲೂಕ್ ವಿದ್ಯಾರ್ಥಿ ಸಂಘಟನೆಯ ಸಂಚಾಲಕರರಾಗಿ ಸುಂಕಸಾಲೆಯ ಸಚ್ಚಿನ್ ಅವರನ್ನು ಆಯ್ಕೆಮಾಡಲಾಗಿದೆ ಎಂದು ಜೆಡಿಎಸ್ ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ ತಿಳಿಸಿದ್ದಾರೆ.
ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಪೂರ್ವ ಬಾವಿ ಸಭೆಯಲ್ಲಿ ವಿದ್ಯಾರ್ಥಿ ಸಂಘಟನೆಯನ್ನು ರಚಿಸಲಾಗಿದ್ದು. ಈ ಸಂಘಟನೆಗೆ ವಿದ್ಯಾರ್ಥಿಗಳ ಮುಖಂಡ ಭರತ್ ಸೇರಿದಂತೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ. ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ವಾಗ್ದಾನ ಮಾಡಿದರು.
ದತ್ತ ಸಾಂತ್ವನ
ಕಡೂರು: ಪಟ್ಟಣದ ಕೋಟೆಯ ಶಂಕರಮಠದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಕೆ.ಎಂ. ವಿದ್ಯಾಶಂಕರ್ ಬಾಬು ಹೃದಯಾಘಾತದಿಂದ ನಿಧನಗೊಂಡ ಹಿನ್ನೆಲೆಯಲ್ಲಿ ಮೃತರ ನಿವಾಸಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ. ದತ್ತ ಭೇಟಿ ನೀಡಿ ಕುಟಂಬಕ್ಕೆ ಸಾಂತ್ವನ ಹೇಳಿದರು. ವಿದ್ಯಾಶಂಕರ್ ಪತ್ನಿ ಶಶಿಕಲಾ, ಪುತ್ರ ಹಾಗೂ ಸಹೋದರಿಯರಿಗೆ ಸಾಂತ್ವನ ಹೇಳಿದ ದತ್ತ, ಭಗವಂತನು ಅವರ ಆತ್ಮಕ್ಕೆ ಶಾಂತಿ ಕೋರಿದರು. ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್ ಇದ್ದರು.
ಸೀರೆ, ಹಂಚಿಕೆ: ಟೀಕೆ
ಮೂಡಿಗೆರೆ: ಜಟ್ಟಿ ಮಣ್ಣಿಗೆ ಬಿದ್ದರೂ, ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಸಚಿವ ಸಿ.ಟಿ. ರವಿಯ ಮೇಲೆ ಹಲವು ಗಂಭೀರ ಆರೋಪಗಳು ಇದ್ದರೂ, ಸೀರೆ, ಬಳೆ, ಕನ್ನಡಕ ಹಂಚಿಕೆ ಮೂಲಕ ಮತದಾರರ ಮೇಲೆ ಆಮಿಷದ ಮೂಲಕ ಪ್ರಭಾವ ಬೀರಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಎಸ್ಆರ್ ಕಾಂಗ್ರೆಸ್ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಭರತಟೀಕಿಸಿದರು. ಬುಧವಾರ ಮೂಡಿಗೆರೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿಯೊಬ್ಬರು ಕೇವಲ ಶಂಕುಸ್ಥಾಪನೆಗಳಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಕ್ಕಿ ಸಹಿತ ಆಹಾರ ಪದಾರ್ಥಗಳು ದರ ಏರಿಕೆಯಾಗಿದ್ದರೆ ಅದರ ನಿಯಂತ್ರಣಕ್ಕೆ ಸಾಮಾನ್ಯ ತಿಳುವಳಿಕೆಯನ್ನೂ ಕೂಡ ಉಪಯೋಗಿಸುತ್ತಿಲ್ಲ ಎಂದ ರು. ಕ್ಷೇತ್ರಾಧ್ಯಕ್ಷ ರಾಜು,. ಸಲೀಂ, ಮೇಘನಾಥ್, ಮುದ್ದಣ್ಣ, ಜಯಪಾಲ್, ನಾಚಪ್ಪ, ವಾಜೀದ್, ಶಿವಣ್ಣ, ಮಹಿಳಾ ಘಟಕದ ಲತಾ ಪೂವಯ್ಯ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

