ಪಹಣಿಯಲ್ಲಿನ ಕ್ರೂಢೀಕರಣ ಪರಿಷ್ಕರಿಸಲು ಮನವಿ
ಕಡೂರು: ಕಂದಾಯ ವಿಭಾಗದಿಂದ ರೈತರಿಗೆ ನೀಡುವ ಪಹಣಿಯಲ್ಲಿ ಮಾಡಲಾಗುವ ಕ್ರೂಢೀಕರಣವನ್ನು ಕಂದಾಯ ಇಲಾಖೆಯು ಪರಿಷ್ಕರಿಸಿ ಸರಿಪಡಿಸಿದಲ್ಲಿ ಕಡೂರು ತಾಲೂಕಿನ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ಎಂದು ಜೆಡಿಎಸ್ ಮುಖಂಡ ಕುಪ್ಪಾಳು ರೇಣುಕಾರಾಧ್ಯ ಕಂದಾಯ ಇಲಾಖೆಯ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಪಹಣಿಗಳ ಕ್ರೂಡೀಕರಣಗಳಲ್ಲಿ ನಮೂದಾಗುವ ಪಿ1 ಪಿ2 ಎಂಬ ಕ್ರೂಡೀಕರಣವನ್ನು ಪಹಣಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ಸರಿಪಡಿಸಿದಲ್ಲಿ ತಾಲೂಕಿನ ಸಾವಿರಾರು ರೈತರಿಗೆ ಅನಕೂಲವಾಗುತ್ತದೆ.
ಈಗಾಗಾಲೇ ಪಹಣಿ ಕ್ರೂಡೀಕರಣಕ್ಕೆ ರೈತರು ವಾರಗಟ್ಟಲೆ ಸರ್ವೇ ಇಲಾಖೆಗೆ ಅಲೆಯುವುದು ತಪ್ಪುತ್ತದೆ. ಹಾಸನ ಜಿಲ್ಲೆಯಲ್ಲಿ ಈ ಕ್ರೂಡೀಕರಣ ಹಾಗೂ ಆಕಾರ ಬಂಧುವನ್ನು ಕಂದಾಯ ಇಲಾಖೆಯ ನೌಕರ ಅಧಿಕಾರಿ ವರ್ಗದವರೇ ಸಂಪೂರ್ಣವಾಗಿ ಮುಗಿಸಿ ರೈತರು ಅನಗತ್ಯವಾಗಿ ಸರ್ವೇ ಇಲಾಖೆಗೆ ಅಲೆಯುವುದನ್ನು ತಪ್ಪಿಸಿದ್ದಾರೆ ಎಂದರು.
ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿದಂತೆ ಎಲ್ಲ ತಾಲೂಕಿನಲ್ಲಿಯೂ ಇದೇ ರೀತಿ ಮಾಡಿದಲ್ಲಿ ಮೊದಲೇ ಬರಗಾಲದಿಂದ ಬೇಸತ್ತಿರುವ ಕಡೂರು ತಾಲೂಕಿನ ರೈತರಿಗೆ ಅಧಿಕಾರಿಗಳು ಸಣ್ಣ ಉಪಕಾರ ಮಾಡಿದಂತಾಗಿ ತಿಂಗಳುಗಟ್ಟಲೆ ಕಚೇರಿ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ. ಉಪವಿಭಾಗಾಧಿಕಾರಿಗಳು ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ರೇಣುಕಾರಾಧ್ಯ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

