ಮಾನವ ಸಜ್ಜನರಾಗಿ ಬದುಕಬೇಕು: ಡಾ. ಜೋಷಿ
ಚಿಕ್ಕಮಗಳೂರು: ಮಾನವರಾಗಿ ಹುಟ್ಟಿದ ಮೇಲೆ ಸಜ್ಜನರಾಗಿ, ಸಭ್ಯರಾಗಿ ಬದುಕಬೇಕು ಎಂದು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಹೇಳಿದ್ದಾರೆ.
ನಗರದ ಮನೋರಂಜೀನಿ ಸಂಗೀತ ಮಹಾವಿದ್ಯಾಲಯ, ಸೀತಾ ದಯಾನಂದ ಪೈ ಟ್ರಸ್ಟ್, ಜಿಲ್ಲಾ ಗಮಕ ಕಲಾ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಒಂದಿಲ್ಲೊಂದು ಸಾಧನೆಯಲ್ಲಿ ನಿರತರಾಗಬೇಕು ಸಮಾಜಕ್ಕೆ ಒಳಿತನ್ನು ಮಾಡಬೇಕು ಎಂದರು.
ಪರಿಸರ ಸಂರಕ್ಷಣೆ: ಮಕ್ಕಳ ವೈದ್ಯರಾದ ಡಾ. ಜೆ.ಪಿ. ಕೃಷ್ಣೇಗೌಡ ಅವರು ಅಭಿನಂದನಾ ಭಾಷಣ ಮಾಡಿ, ಜೋಷಿಯವರು ಅನ್ನದಾನದಿಂದ ಗೋಸಂರಕ್ಷಣೆಯಿಂದ ಪರಿಸರ ಸಂರಕ್ಷಣೆಯಿಂದ ಹೊರನಾಡನ್ನು ಒಳನಾಡನ್ನಾಗಿ ಮಾಡಿದ್ದಾರೆ. ಹೊಸನಾಡನ್ನಾಗಿ ಮಾಡಿದ್ದಾರೆ.
ನಿತ್ಯ ಸಹಸ್ರಾರು ಜನರಿಗೆ ಅನ್ನ ದಾಸೋಹ ವಸತಿ ಕಲ್ಪಸಿಕೊಡುತ್ತ ಜನರಲ್ಲಿ ಭಕ್ತಿ ಜ್ಞಾನವನ್ನು ಜಾಗೃತಗೊಳಿಸುತ್ತಿದ್ದಾರೆ ಎಂದರು.
ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಮಸುಬ್ರಾಯ ಶೇಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವನ ಮಾಲಭೂತ ಅವಶ್ಯಕತೆಗಳಾದ ಅನ್ನ, ಅಕ್ಷರ, ಅರಿವು, ಆರೋಗ್ಯ, ಆಶ್ರಯ ಇವುಗಳನ್ನು ಶ್ರೀ ಕ್ಷೇತ್ರದ ಮೂಲಕ ಭೀಮೇಶ್ವರ ಜೋಷಿಯವರು ಒದಗಿಸಿಕೊಡುತ್ತಿದ್ದಾರೆ ಎಂದು ಹೇಳಿದರು.
ಮನೋರಂಜಿಸಿ ಸಂಗೀತ ಮಹಾವಿದ್ಯಾಲಯ ಅಧ್ಯಕ್ಷರಾದ ಜಯರಾಮ್ ಅವರು ಮಾತನಾಡಿ, ಸಂಗೀತ ಮತ್ತು ಗಮಕಕ್ಕಾಗಿ ಮೀಸಲಾಗಿಟ್ಟ ಈ ಭವನದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನರೇಂದ್ರ ಪೈ ಅವರು ಮಾತನಾಡಿದರು. ಶಶಿಕಲಾ ಶಿವಶಂಕರ ಗಮಕ ಗಾಯನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

