ತಾಲೂಕು ಛಾಯಾಗ್ರಾಹಕರ ಸಂಘದ ವಾರ್ಷಿಕೋತ್ಸವ
ಮೂಡಿಗೆರೆ: ತಾಲೂಕು ಛಾಯಾಗ್ರಾಹಕರ ಸಂಘದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಸಂಜೆ ಪಟ್ಟಣದ ಜೇಸಿ ಭವನದಲ್ಲಿ ನಡೆಯಿತು.
ಪಪಂ ಅಧ್ಯಕ್ಷೆ ಲತಾ ಲಕ್ಷ್ಮಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛಾಯಾಗ್ರಹಣ ಎನ್ನುವುದೊಂದು ಕಲೆ. ಈ ಕಲೆ ಎಲ್ಲರಿಗೂ ಬರುವಂತದ್ದಲ್ಲ. ಬಹಳಷ್ಟು ಛಾಯಾಗ್ರಾಹಕರು ಪ್ರಾಣಿಗಳು, ಪಕ್ಷಿಗಳು ಪರಿಸರದ ಸೌಂದರ್ಯವನ್ನು ತುಂಬಾ ಅಚ್ಚುಕಟ್ಟಾಗಿ ಕ್ಯಾಮರಾಗಳಲ್ಲಿ ಸೆರೆ ಹಿಡಿದಿರುತ್ತಾರೆ. ಅಂತಹ ಉತ್ತಮ ರೀತಿಯ ಚಿತ್ರಗಳನ್ನು ಹೊರಗಡೆ ಪ್ರದರ್ಶನ ಮಾಡಲು ಬಹಳಷ್ಟು ದಾರಿಗಳಿವೆ. ಆದ್ದರಿಂದ ಛಾಯಾಗ್ರಾಹಕರು ಸೆರೆ ಹಿಡಿದ ಚಿತ್ರಗಳನ್ನು ಕೇವಲ ತಮ್ಮ ಸ್ಟುಡಿಯೋ ಮತ್ತು ಮನೆಗಳಿಗೆ ಸೀಮಿತಗೊಳಿಸದೆ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹೇಳಿದರು.
ಬಳಿಕ ಜೆಸಿಐ ಅಧ್ಯಕ್ಷ ಪ್ರಸನ್ನ ಗೌಡಹಳ್ಳಿ ಮಾತನಾಡಿ, ಪತ್ರಕರ್ತರಿಗೂ ಮತು ಛಾಯಾಗ್ರಾಹಕರಿಗೂ ನಿಕಟ ಸಂಬಂಧವಿದ್ದಂತೆ. ಸುದ್ದಿಗಾರರ ವರದಿಗೆ ಪುಷ್ಟಿ ಸಿಗಬೇಕಾದರೆ ಛಾಯಾಗ್ರಾಹಕ ಕೆಲಸ ಮಾಡಲೇಬೇಕಾಗುತ್ತದೆ. ಹಾಗೆಯೆ ಛಾಯಾಗ್ರಾಹಕರು ಕೂಡ ಸರೆ ಹಿಡಿದಿರುವ ಚಿತ್ರಗಳನ್ನು ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನಡೆಸಿ ಪ್ರದರ್ಶನ ಮಾಡನೇಕು. ಅಲ್ಲದೆ ಛಾಯಾಚಿತ್ರ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
ಬದುಕು ಹಸನು: ಹಳೆಕೋಟೆ ರಮೇಶ್ ಮಾತನಾಡಿ, ಛಾಯಾಗ್ರಾಹಕರಾಗಲು ಎಲ್ಲರಿಂದಲೂ ಸಾಧ್ಯವಿಲ್ಲ. ತಾಳ್ಮೆ, ಪ್ರಜ್ಞೆ, ಶಿಸ್ತು ಮತ್ತು ಸಂಯಮ ಈ ನಾಲ್ಕು ಅಂಶಗಳಿದ್ದರೆ ಮಾತ್ರ ಛಾಯಾಗ್ರಾಹಕನೆನೆಸಿಕೊಳ್ಳುತ್ತಾರೆ. ನಿಮ್ಮ ಕೆಲಸದಿಂದ ಸಾರ್ಳಜನಿಕರಿಗೆ ಅನುಕೂಲವಾಗುವಂತೆ ಮಾಡಿದರೆ ನಿಮ್ಮ ಬದುಕು ಹಸನಾಗುತ್ತದೆ ಎಂದರು.
ಬಳಿಕ ಸತ್ಯನಾರಾಯಣ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರ ಸಹಕಾರವಿದ್ದರೆ ಮಾತ್ರ ಎಂತಹ ಬೆಟ್ಟದಂತಹ ಕೆಲಸವನ್ನು ಸುಲಭವಾಗಿ ಮಾಡಬಹುದು. ಆದ್ದರಿಂದ ತನ್ನ ಅವಧಿಯಲ್ಲಿ ಸಂಘದ ಏಳಿಗೆಗಾಗಿ ಶ್ರಮ ವಹಿಸಿ ದುಡಿಯಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಛಾಯಾಗ್ರಾಹಕರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸತ್ಯನಾರಾಯಣ ಶೆಟ್ಟಿ ಅವರಿಗೆ ಸಂಘದ ನೂತನ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರವನ್ನು ಹಾಸನದ ಜಿಲ್ಲಾಧ್ಯಕ್ಷ ಮನೋಜ್ಕುಮಾರ್ ನೆರವೇರಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಛಾಯಾಗ್ರಾಹಕ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಸನ್ನಶೆಟ್ಟಿ ವಹಿಸಿದ್ದರು. ಪ್ರಸಿದ್ಧ ಛಾಯಾಗ್ರಾಹಕ ಜೆ.ಎಸ್. ಸಾಧನ್, ಜಿಲ್ಲಾಧ್ಯಕ್ಷ ಎ.ಎನ್. ಮೂರ್ತಿ, ತಾಲೂಕು ಘಟಕದ ಗೌರವಾಧ್ಯಕ್ಷ ವಸಂತ ಪೈ, ಕಾರ್ಯಾಧ್ಯಕ್ಷ ಲೋಹಿತ್ ಶೆಟ್ಟಿ, ಉಪಾಧ್ಯಕ್ಷ ಜಯಂತ್ ಕಳಸ, ಕಾರ್ಯದರ್ಶಿ ಪರಮೇಶ್, ಗೋಪಿನಾಥ್, ವಸಂತ ಪೂಜಾರಿ, ದುರ್ಗೇಶ್, ಪ್ರಕಾಶ್, ರಘು, ಮಂಜು, ರವಿಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

