17 ರಂದು ಮಲೆನಾಡ ಜಾನಪದ ಮೇಳ
ಕೊಪ್ಪ: ತಾಲೂಕು ಮಲೆನಾಡು ಜಾನಪದ ಕಲಾವಿದ ಒಕ್ಕೂಟ ಮತ್ತು ಕಂಚೂರು ದುರ್ಗಾಪರಮೇಶ್ವರಿ ಯುವಕ ಸಂಘದ ಸಹಯೋಗದಲ್ಲಿ 17 ರಂದು ಕುಂಚೂರಿನ ದುರ್ಗಾಪರಮೇಶ್ವರಿ ರಂಗಮಂದಿದಲ್ಲಿ ರಾಜ್ಯ ಮಟ್ಟದ ಮಲೆನಾಡ ಜಾನಪದ ಮೇಳವನ್ನು ನಡೆಸಲಾಗುವುದೆಂದು ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕುಂಚೂರು ರತ್ನಾಕರ್ ತಿಳಿಸಿದ್ದಾರೆ.
ಜಾನಪದ ಮೇಳದ ಅಂಗವಾಗಿ ರಾಜ್ಯಮಟ್ಟದ ಜಾನಪದ ಸ್ಪರ್ಧೆ ಏರ್ಪಡಿಸಿದ್ದು, ಇದರಲ್ಲಿ 15ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ ಜಾನಪದ ಗೀತೆ, (ಪ್ರತ್ಯೇಕ ಗುಂಪು ಸ್ಪರ್ಧೆ), ಭಾವಗೀತೆ (ಪ್ರತ್ಯೇಕ ವೈಯಕ್ತಿಕ) ಸಮೂಹ ಗೀತೆ (ಒಟ್ಟಿಗೆ ಗುಂಪು ಸ್ಪರ್ಧೆ) ಹಾಗೂ ಆಶು ಗೀತೆ ಸ್ಪರ್ಧೆಗಳನ್ನು ನಡೆಸಲಾಗುವುದು. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಆಸಕ್ತರು 16ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಮಾಹಿತಿಗಾಗಿ ದಿವಾಕರ್-9449657515, ರತ್ನಾಕರ್-9480198847, ಹರೀಶ್-9880898933 ಇವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

