ಕಳಪೆ ರಸ್ತೆ ಕಾಮಗಾರಿ: ಗ್ರಾಮಸ್ಥರ ಪ್ರತಿಭಟನೆ
ಮೂಡಿಗೆರೆ: ತಾಲೂಕಿನ ಹೆಸ್ಗಲ್ ಗ್ರಾಪಂ ವ್ಯಾಪ್ತಿಯ ತತ್ಕೊಳದಿಂದ ಬಾಪುನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಶುಕ್ರವಾರ ಗ್ರಾಮಸ್ಥರು ಧರಣಿ ನಡೆಸಿದರು.
ತತ್ಕೊಳದಿಂದ ಪಟ್ಟಣಕ್ಕೆ ತೆರಳುವ ಪ್ರಯಾಣಿಕರಿಗೆ, ಬಾಪುನಗರ ಮತ್ತು ವಿದ್ಯಾನಗರದಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ವಾರದ ಸಂತೆಗೆ ಬರುವ ತತ್ಕೊಳ, ಕುಂದೂರು, ಹುಲ್ಲೆಮನೆ ಗ್ರಾಮಸ್ಥರಿಗೆ ಇದು ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ ಪರಿಣಾಮ ಶಾಸಕರ ಅನುದಾನದ ಎಸ್‌ಇಟಿ ಯೋಜನೆಯಡಿ ರು. 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 150 ಮೀ. ಉದ್ದದ ರಸ್ತೆಯನ್ನು 9 ಅಡಿ ಅಗಲಗೊಳಿಸಿ ಕಾಂಕ್ರಿಟ್ ರಸ್ತೆಯನ್ನಾಗಿ ನಿರ್ಮಿಸಲು ಟೆಂಡರ್ ನೀಡಲಾಗಿದೆ.ಟ
ಆದರೆ ರಸ್ತೆಗೆ ಕಬ್ಬಿಣದ ಸಲಾಕೆ ಬಳಸಿ ಕಾಂಕ್ರಿಟ್ ಹಾಕಬೇಕೆಂಬ ನಿಯಮವಿದ್ದರೂ ಹಳೆ ರಸ್ತೆಯನ್ನು ಸ್ವಚ್ಛಗೊಳಿಸದೇ ಹೊಸ ಜಲ್ಲಿ ಹಾಕಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಧರಣಿನಿರತರು ಆರೋಪಿಸಿದರು.
ಕಿತ್ತು ಬಂದ ಜಲ್ಲಿ: ಕಾಂಕ್ರಿಟ್ ರಸ್ತೆ ಮಂಜೂರಾಗಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ಮುಕ್ತಾಯವಾಗಿದ್ದರೂ ರಸ್ತೆಯ ಚಿತ್ರಣ, ಹಿಂದಿದ್ದ ಪರಿಸ್ಥಿತಿಯೇ ಇದೆ. ಕಾಂಕ್ರಿಟೀಕರಣಕ್ಕೆ ಮರಳನ್ನು ಬಳಸದೆ ಜಲ್ಲಿಯೊಂದಿಗೆ ಜಲ್ಲಿ ಪುಡಿ ಮಿಶ್ರಣ ಮಾಡಿ, ರಸ್ತೆಗೆ ಹರಡಲಾಗಿದೆ. ಗಟ್ಟಿಗೊಳಿಸುವ ಪ್ರಕ್ರಿಯೆ ನಡೆದಿಲ್ಲದ್ದ ಕಾರಣ ಎರಡೇ ದಿನದಲ್ಲಿ ಜಲ್ಲಿಯೆಲ್ಲಾ ಕಿತ್ತು ರಸ್ತೆ ಬದಿಗೆ ಬಂದಿದೆ ಎಂದು ಧರಣಿನಿರತರು ತಿಳಿಸಿದ್ದಾರೆ.
ಧರಣಿಯಲ್ಲಿ ಗ್ರಾಪಂ ಸದಸ್ಯ ಸುಂದರೇಶ್, ಮೂರ್ತಿ, ಅಣ್ಣಪ್ಪ, ವೆಂಕಟೇಶ್, ರಾಜೇಶ್, ನಾಗೇಶ್, ಚಂದ್ರು, ರಾಜೇಂದ್ರ, ಕುಮಾರ್‌ಆಚಾರ್, ಮಂಜು, ಶ್ರೀಧರ್, ಮಂಜಪ್ಪಶೆಟ್ಟಿ, ಆನಂದ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

