ಲಾಭದ ಹಾದಿಯಲ್ಲಿ ಬಣಕಲ್ ಸಹಕಾರ ಸಂಘ
ಮೂಡಿಗೆರೆ: ತಾಲೂಕಿನ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಐದು ವರ್ಷಗಳಿಂದ ಲಾಭದ ಹಾದಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಕೃಷ್ಣೆಗೌಡ ತಿಳಿಸಿದರು.
ಬ್ಯಾಂಕಿನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಸಂಘ 10,786 ಸದಸ್ಯರನ್ನು ಹೊಂದಿದ್ದು. ಕಿಸಾನ್ ಕ್ರೆಡಿಟ್ ಸಾಲವಾಗಿ 5 ಕೋಟಿ 13 ಲಕ್ಷರು.ಗಳನ್ನು 417 ಸದಸ್ಯರಿಗೆ ನೀಡಿದ್ದು, ಶೇ100 ರಷ್ಟು ವಸೂಲಾತಿಯಾಗಿದೆ. ಕೃಷಿಯೇತರ ಸಾಲಗಳಾದ, ವಾಹನ, ಅಂಗಡಿ, ಇತರೆ ಸಾಲಗಳನ್ನು 216 ಸದಸ್ಯ ರಿಗೆ 1 ಕೋಟಿ 44 ಲಕ್ಷ ರು.ನೀಡಿದ್ದು ಶೇ 99 ರಷ್ಟು ವಸೂಲಾತಿಯಾಗಿದೆ. ಯಶಸ್ವಿನಿ ಯೋಜನೆಯಡಿ 25 ಸದಸ್ಯರು ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. 114 ಸ್ವಸಹಾಯ ಸಂಘಗಳಿದ್ದು. ಈವರೆಗೂ 94 ಸಂಘಗಳಿಗೆ 196.13ಲಕ್ಷ ಸಾಲವನ್ನು ಮತ್ತು ಇಂದು 7 ಸ್ವಸಹಾಯಸಂಘಗಳಿಗೆ 14.76 ಲಕ್ಷ ರು.ಸಾಲವನ್ನು ವಿತರಿಸಲಾಗಿದೆ.
ಬಣಕಲ್ ಹೋಬಳಿಯ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಕಳೆದ 5 ವರ್ಷಗಳಿಂದಲೂ ಮುನ್ನಡೆಯನ್ನು ಸಾದಿಸುತ್ತಾ ಲಾಭದ ಹಾದಿಯಲ್ಲಿರುವುದು ತಾಲೂಕ್ ಮಟ್ಟದಲ್ಲಿ ಪ್ರಥಮ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ಜಿ.ಪಿ. ನಿಶಾಂತ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

