ಚಿಕ್ಕಮಗಳೂರು

ಮಳೆ, ಗಾಳಿಗೆ ನೇಂದ್ರ ಬಾಳೆ ನಾಶ

Published On :

ನರಸಿಂಹರಾಜಪುರ: ತಾಲೂಕಿನಾದ್ಯಂತ ಸುರಿದ ಬಾರೀ ಮಳೆ ಹಾಗೂ ಗಾಳಿಯಿಂದಾಗಿ ನೂರಾರು ಎಕರೆಯಲ್ಲಿ ರೈತರು ಬೆಳೆದಿದ್ದ ನೇಂದ್ರ ಬಾಳೆ ನೆಲಕಚ್ಚಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
 ತಾಲೂಕಿನ ಕಡಹಿನಬೈಲು ಗ್ರಾಮದ ಸೂಸಲವಾನಿ ಗ್ರಾಮದ ಜೋಶಿ ಎಂಬವರಿಗೆ ಸೇರಿದ ರು. ಸಾವಿರಕ್ಕೂ ಹೆಚ್ಚು ಕೊನೆ ಬಂದಿದ್ದ ನೇಂದ್ರ ಬಾಳೆ ನೆಲ ಕಚ್ಚಿದೆ. ಮುಂದಿನ 15 ದಿನದಲ್ಲಿ ಅವರು ಬಾಳೆ ಗೊನೆ ಕಟಾವು ಮಾಡುತ್ತಿದ್ದರು. ಜೋಶಿ ಅವರಿಗೆ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಬೆನ್ನಿ ಎಂಬ ರೈತರು ಬೆಳೆದಿದ್ದ 500 ಕ್ಕೂ ಹೆಚ್ಚು ನೇಂದ್ರ ಬಾಳೆ ನೆಲ ಕಚ್ಚಿದೆ. ಗೇರುಬೈಲು ಗ್ರಾಮದ ವ್ಯಾಪ್ತಿಯ ಸಂಜೀವ ಹಾಗೂ ವಾಸುದೇವ ಎಂಬವರಿಗೆ ಸೇರಿದ ನೇಂದ್ರ ಬಾಳೆ ಉರುಳಿ ಬಿದ್ದಿದೆ.
 ಮಾಕೋಡು ಗ್ರಾಮದ ವ್ಯಾಪ್ತಿಯಲ್ಲೂ ಕೆಲವು ರೈತರ ನೇಂದ್ರ ಬಾಳೆ ಗಾಳಿಗೆ ಉರುಳಿ ಬಿದ್ದಿದೆ. ಮೆಣಸೂರು ಗ್ರಾಪಂ ವ್ಯಾಪ್ತಿಯ ಲಿಂಗಾಪುರದ ಮಂಜುನಾಥ್, ರಾವೂರು ಗ್ರಾಮದ ಮೂಲೆಗದ್ದೆ ಕುಂಜು, ತೋಟಗೆರೆ ಗ್ರಾಮದ ಸುನೀಲ್, ರಾವೂರು ಗ್ರಾಮದ ಸಿಜು ಎಂಬ ರೈತರು ಬೆಳಿದಿದ್ದ ಸಾವಿರಾರು ನೇಂದ್ರ ಬಾಳೆ ಉರುಳಿ ಬಿದ್ದಿದೆ. ಫೆಬ್ರವರಿ ತಿಂಗಳ ಅಕಾಲಿಕ ಮಳೆ ಹಾಗೂ ಗಾಳಿಯಿಂದಾಗಿ ನೇಂದ್ರ ಬಾಳೆ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನೇಂದ್ರ ಬಾಳೆ ಬೆಳೆಯಲು ರೈತರು ಸಾವಿರಾರು ರುಪಾಯಿ ಸಾಲ ಮಾಡಿದ್ದರು. ಈಗ ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನೇಂದ್ರ ಬಾಳೆ ಬೆಳೆಗಾರರ ನೆರವಿಗೆ ಬರಬೇಕು ಎಂದು ಬಾಳೆ ಕಳೆದುಕೊಂಡ ರೈತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.