ಚಿಕ್ಕಮಗಳೂರು

ಕರ್ತವ್ಯ ಕಲಿಸುವ ಶಿಬಿರಗಳು

Published On :

ಚಿಕ್ಕಮಗಳೂರು: ಸಮಾಜದೊಂದಿಗೆ ನಮ್ಮ ವರ್ತನೆ, ಕರ್ತವ್ಯ ಪಾಲನೆ, ಸಕಾರಾತ್ಮಕ ಚಿಂತನೆಯನ್ನು ಶಿಬಿರ ಕಲಿಸಿಕೊಡಲಿದೆ ಎಂದು ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.
ತಾಲೂಕಿನ ನರಗನಹಳ್ಳಿಯಲ್ಲಿ ಮೌಂಟ್ ವ್ಯೂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಮಂಗಳವಾರ ಸ್ಥಳೀಯ ಸಮುದಾಯ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕಾಗಿ ಏನಾದರೂ ಮಾಡಿ: ಓದು, ಬರಹ, ಅಂಕಪಟ್ಟಿಯ ಜೊತೆಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಕಾಳಜಿ ಕಳಕಳಿಯನ್ನು ವಿದ್ಯಾರ್ಥಿಗಳು ಹೊಂದಬೇಕು. ಒಳ್ಳೆಯ ವ್ಯಕ್ತಿಗಳಾಗಿ ಆ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಕಾಣಿಕೆ ನೀಡುವಂತಾಗಬೇಕೆಂದರು.
ಗೊತ್ತಿಲ್ಲದನ್ನು ಒಪ್ಪಿಕೊಳ್ಳಿ: ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ ಮಾತನಾಡಿ, ಯಾವುದೇ ಸಾಧಕರ ಹಿನ್ನಲೆಯನ್ನು ನೋಡಿದಾಗ ಅವರ ಶ್ರಮ ಮತ್ತು ತ್ಯಾಗ ಗೊತ್ತಾಗುತ್ತದೆ. ಕಾಯಕವೆ ಕೈಲಾಸ ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಗೊತ್ತಿಲ್ಲದನ್ನು ವಿನಮ್ರವಾಗಿ ಒಪ್ಪಿಕೊಂಡರೆ ಅವರ ಪಾಲಿನ ಜ್ಞಾನದ ಕಿಟಕಿ ತೆರೆಯುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ  ಟಿ.ಎಂ. ದೇವಿಕಾ ಮಾತನಾಡಿ, ಯುವಕರೇ ದೇಶದ ಆಸ್ತಿ. ತಮ್ಮ ಶಕ್ತಿಯನ್ನು ಬಳಸಿ ಸಕಾರಾತ್ಮವಾಗಿ ಚಿಂತಿಸಿ, ಒಳ್ಳೆಯ ಕಾರ್ಯಗಳಲ್ಲಿ ತೊಡಗಬೇಕು.  ಸದ್ಗುಣಗಳನ್ನು ಬೆಳೆಸಿಕೊಂಡರೆ ಉಪಕಾರಿಗಳಾಗಿ ಬದುಕಬಹುದು ಎಂದರು.
ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು. ಹಿರೇಕೊಳಲೆ ಗ್ರಾ.ಪಂ.ಅಧ್ಯಕ್ಷ ಎನ್.ಬಿ. ವೆಂಕಟೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.