ವಿವಿಧ ಕಾಮಗಾರಿಗೆ ಲಕ್ಷಾಂತರ ರು. ಅನುದಾನ
ಕಡೂರು: ಕಳೆದ ಎರಡು ವರ್ಷಗಳ ತಾಲೂಕು ಪಂಚಾಯ್ತಿ ಸದಸ್ಯರ ಅಧಿಕಾರವಧಿಯಲ್ಲಿ ಹಿರೇನಲ್ಲೂರು ಕ್ಷೇತ್ರಕ್ಕೆ ಲಕ್ಷಾಂತರ ಅನುದಾನದಿಂದ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದಾಗಿ ಹಿರೇನಲ್ಲೂರು ತಾ.ಪಂ ಸದಸ್ಯ ಜಿ.ಪಿ. ಪ್ರಭುಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ತಾಲೂಕು ಪಂಚಾಯ್ತಿ ಸದಸ್ಯರ ಎರಡು ವರ್ಷದ ಅವಧಿಯಲ್ಲಿ ಹಿರೇನಲ್ಲೂರು, ಚಿಕ್ಕನಲ್ಲೂರು, ಚೋಮನಹಳ್ಳಿ ಮತ್ತು ಕಾವಲುಹಟ್ಟಿಯ ಅಂಗನವಾಡಿ ಕೇಂದ್ರಗಳ ದುರಸ್ತಿ ಮತ್ತು ಕಾಂಪೊಂಡ್ ನಿರ್ಮಾಣಕ್ಕೆ 5 ಲಕ್ಷ ನೀಡಲಾಗಿದೆ.
1.50 ಲಕ್ಷ ವೆಚ್ಚದಲ್ಲಿ ಗಿರಿಯಾಪುರ ರಸ್ತೆ ಅಭಿವೃದ್ಧಿ, 50 ಸಾವಿರ ದಲ್ಲಿ ಕಾಮನಕೆರೆ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ. ವಿಶೇಷ ಘಟಕ ಯೋಜನೆಯಲ್ಲಿ 1 ಲಕ್ಷ ವೆಚ್ಚದಲ್ಲಿ ಕಾಮನಕೆರೆ ಹರಿಜನ ಕಾಲೋನಿಯಲ್ಲಿ ಬಾಕ್ಸ್ ಚರಂಡಿ ಅಭಿವೃದ್ಧಿ ಮತ್ತು ಕೆದಿಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೊ ನೀಯ ಲ್ಲಿ 2 ಲಕ್ಷದ ಕಾಂಕ್ರೀ ಟ್ ರಸ್ತೆ ನಿರ್ಮಿಸಲಾಗಿ ದೆ ಎಂದರು.
1.20 ಲಕ್ಷ ದ ಸೋಡಿಯಂ ಲೈಟು: 1.20 ಲಕ್ಷದ ಗಿರಿಯಾಪುರ ಮೇಲನಹಳ್ಳಿ ಮತ್ತು ಹಿರೇನಲ್ಲೂರು ಗ್ರಾಮಗಳಿಗೆ 4 ಸೋಡಿಯಂ ಲೈಟುಗಳನ್ನು ಅವಳಡಿಸಲಾಗಿದ್ದು, 1.20 ಲಕ್ಷ ವೆಚ್ಚದಲ್ಲಿ ಹಿರೇನಲ್ಲೂರು ಗ್ರಾಮದ ಕಲ್ಲುಬಾವಿ ರಸ್ತೆ ಮತ್ತು ಕಲ್ಲುಬಾವಿ ರಸ್ತೆ ದುರಸ್ತಿ ಮಾಡಲಾಗಿದೆ. ಚನ್ನಾಪುರ ರಸ್ತೆ ಬಳಿ 45 ಸಾವಿರ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿದ್ದು, ಕೆದಿಗೆರೆ ಗ್ರಾಮದಲ್ಲಿ 80 ಸಾವಿರ ವೆಚ್ಚದಲ್ಲಿ ಕೇಶವನಾಯಕರವರ ತೋಟದ ಹಿಂಭಾಗದ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ.
ನನ್ನ ಹಿರೇನಲ್ಲೂರು ತಾಲೂಕು ಪಂಚಾಯ್ತಿ ವ್ಯಾಪ್ತಿಯ ಗಿರಿಯಾಪುರ, ಕೆದಿಗೆರೆ, ಕಾಮನಕೆರೆ, ಹಿರೇನಲ್ಲೂರು ಮತ್ತು ಸೀಗೇಹಡ್ಲು ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಖರೀದಿಗಾಗಿ ತಲಾ 10 ಸಾವಿರ ಅನುದಾನ ನೀಡಲಾಗಿದೆ. ಅಲ್ಲದೆ 40 ಸಾವಿರ ವೆಚ್ಚದಲ್ಲಿ ಸೀಗೇಹಡ್ಲು ಗ್ರಾಮದ ಅಂಗನವಾಡಿ ಕೇಂದ್ರ ಮತ್ತು 1 ಲಕ್ಷ ವೆಚ್ಚದಲ್ಲಿ ಕಾಮನಕೆರೆ ಅಂಗನವಾಡಿ ಕೇಂದ್ರದ ಕಾಂಪೌಂಡ್ ನಿರ್ಮಾಣ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದ ಪ್ರಭು ಕುಮಾರ್, ತಮಗಿರುವ ಇನ್ನೂ ಮೂರು ವರ್ಷದ ಅವಧಿಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಜನರ ಸೇವೆ ಮಾಡುತ್ತೇನೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

