ಸಾಧನೆ ತೃಪ್ತಿ ತಂದಿದೆ: ಪ್ರೇಂ ಕುಮಾರ್
ಚಿಕ್ಕಮಗಳೂರು: ಸಾಧಿಸಬೇಕೆಂದು ಕೊಂಡಿದ್ದು ಬಹಳಷ್ಟಿತ್ತು. ನಿರೀಕ್ಷಿತ ಗುರಿ ತಲುಪದಿದ್ದರೂ ಸಾಧಿಸಿದ್ದು ಕಡಿಮೆಯಲ್ಲ.
- ನಗರಸಭೆಯ ಹಾಲಿ ಚುನಾಯಿತ ಆಡಳಿತ ಮಂಡಳಿಯ ಐದು ವರ್ಷದ ಹಿನ್ನೋಟದ ಬಗ್ಗೆ ಅಧ್ಯಕ್ಷ ಪ್ರೇಮ್ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತಿದು.
ನಗರಸಭೆಯ ಚುನಾಯಿತ ಪ್ರತಿನಿಧಿಗಳ ಆಡಳಿತ ಅವಧಿ ಬುಧವಾರ (ಫೆ.13) ಮುಕ್ತಾಯಗೊಂಡಿತು. ಈ ಹಿನ್ನಲೆಯಲ್ಲಿ ಅಧ್ಯಕ್ಷರು ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರ ನೀಡಿದರು.
ರಾಜ್ಯ ಸರ್ಕಾರದಿಂದ ಪ್ರಸಕ್ತ ಸಾಲಿನಲ್ಲಿ 20 ಕೋಟಿ ವಿಶೇಷ ಅನುದಾನ, ಸಿಎಂಎಸ್ಎಂಟಿಡಿಪಿ ಯೋಜನೆಯಲ್ಲಿ 30 ಕೋಟಿ, ನಗರೋತ್ಥಾನದಡಿ 30 ಕೋಟಿ, ಒಳ ಚರಂಡಿ ನಿರ್ಮಾಣಕ್ಕೆ 58 ಕೋಟಿ, ಇನ್ನುಳಿದ ಎಸ್ಎಫ್ಸಿ, 12ನೇ ಹಣಕಾಸು ಯೋಜನೆ, 13ನೇ ಹಣಕಾಸು ಯೋಜನೆ, ಕೆಎಂಆರ್ಪಿ ಯೋಜನೆಯಡಿ ಒಟ್ಟು ಸುಮಾರು 600 ಕೋಟಿ ಬಿಡುಗಡೆಯಾಗಿದೆ ಎಂದರು.
50 ಲಕ್ಷ ವೆಚ್ಚದಲ್ಲಿ ಮಳಿಗೆ ನಿರ್ಮಾಣ: 1.20 ಕೋಟಿ ವೆಚ್ಚದಲ್ಲಿ ನಗರದಲ್ಲಿ ಕೋಳಿ, ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳ ನಿರ್ಮಾಣ ಹಿರೇಮಗಳೂರಲ್ಲಿ 50 ಲಕ್ಷ ವೆಚ್ಚದಲ್ಲಿ ಮಳಿಗೆ ನಿರ್ಮಾಣ, ಮಲ್ಲಂದೂರು ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣ, ನೂತನ ಆಡಳಿತ ಕಚೇರಿ, ಜಲಸಂಗ್ರಹಾರ ನಿರ್ಮಾಣ. ಯಗಚಿ ನೀರು ಸರಬರಾಜು ಕೇಂದ್ರ ಮತ್ತು ಮುಗುಳವಳ್ಳಿ ನೀರು ಸರಬರಾಜು ಕೇಂದ್ರಗಳ ಉನ್ನತೀಕರಣಕ್ಕೆ ಟೆಂಡರ್ ಕರೆಯಲಾಗಿದೆ. ಉಂಡೇದಾಸರಹಳ್ಳಿ ರಸ್ತೆಗೆ ಸೇತುವೆ ನಿರ್ಮಾಣ, 65 ಲಕ್ಷದಲ್ಲಿ ನಗರದ ವಿವಿಧ ಪಾರ್ಕ್ಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ.
ಹೊಸ ಮತ್ತು ಹಳೆಯ ಅಂಗಡಿ ಮಳಿಗೆಗಳ ಹರಾಜು, ಕಟ್ಟಡ ತೆರಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಗಿ ಫೀ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 5.70 ಲಕ್ಷ, ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ, ಮೂರು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಆಸ್ತಿ ವಿವರ ಗಣಕೀರಣ, ಇದರಿಂದಾಗಿ ತೆರಿಗೆ ಸೋರಿಕೆ ತಡೆಗಟ್ಟಲಾಗಿದೆ. ನಗರದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಸುಮಾರು 16800 ಮನೆಗಳಿಂದ ಕಸವನ್ನು ಸಂಗ್ರಹ ಮಾಡಲಾಗುತ್ತಿದೆ. ಸಂಗ್ರಹಿಸಿದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.
747 ಆಶ್ರಯ ನಿವೇಶನ ವಿತರಣೆ: ನಗರದ ಸಾಮಿಲ್ಗಳು ಕಳೆದ 10 ವರ್ಷಗಳಿಂದ ಕಂದಾಯ ಕಟ್ಟಿರಲಿಲ್ಲ. ಪರವಾನಗಿ ಶುಲ್ಕವನ್ನು ಸಂದಾಯ ಮಾಡಿರಲಿಲ್ಲ. ಇವುಗಳನ್ನು ವಸೂಲಿ ಮಾಡಲಾಗಿದ್ದು, ಸುಮಾರು ಒಂದು ಕೋಟಿ ರುಪಾಯಿ ಸಂಗ್ರಹವಾಗಿದೆ. 747 ಆಶ್ರಯ ನಿವೇಶನ ವಿತರಣೆ ಮಾಡಲಾಗಿದೆ. ಪೌರ ಕಾರ್ಮಿಕರಿಗೆ 90 ನಿವೇಶನಗಳನ್ನು ವಿತರಿಸಲಾಗಿದೆ. ಶೇ. 22.75 ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಲಾಗಿದ್ದು, ಶೇ. 90 ರಷ್ಟು ಹಣ ಈವರೆಗೆ ಬಳಕೆಯಾಗಿದೆ ಎಂದು ಪ್ರೇಮ್ಕುಮಾರ್ ಹೇಳಿದರು.
ನಗರಸಭೆಯ ಮಾಜಿ ಅಧ್ಯಕ್ಷರಾದ ಎಚ್.ಡಿ. ತಮ್ಮಯ್ಯ, ನಿಂಗೇಗೌಡ, ಆಶ್ರಯ ಸಮಿತಿ ಅಧ್ಯಕ್ಷ ಮುತ್ತಯ್ಯ ಹಾಗೂ ಪೌರಾಯುಕ್ತ ಪ್ರಭಾಕರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

