ಕ್ರೀಡೆಯಲ್ಲಿ ಮಿಂದೆದ್ದ ಅಂಗವಿಕಲ ಮಕ್ಕಳು
ಶಿವಮೊಗ್ಗ: ಅಲ್ಲಿ ಮಾತುಗಳು ಗೌಣವಾಗಿದ್ದವು. ಬಹಳ ಸಲ ಕೈಬಾಯಿ ಚಲನೆಯಿಂದಲೇ ಸಂವಹನ. ಮನಸ್ಸಿನ ಕಣ್ಣುಗಳಿಂದಲೇ ಕ್ರೀಡೆಗಳಲ್ಲಿ ಭಾಗಿ, ಎಲ್ಲರಲ್ಲೂ ಆತ್ಮಸ್ಥೈರ್ಯ ತುಂಬುವ ಕೆಲಸ ಅಲ್ಲಿ ನಡೆದಿತ್ತು. ಜೊತೆಗೆ ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವುದನ್ನು ತೋರಿಸುವ ತವಕ ಎಲ್ಲರಲ್ಲೂ ಇತ್ತು.
ಸ್ಪೆಷಲ್ ಒಲಂಪಿಕ್ಸ್: ಇದೆಲ್ಲ ಕಂಡುಬಂದಿದ್ದು ನಗರದ ನೆಹರು ಕ್ರೀಡಾಂಗಣದಲ್ಲಿ. ಜಿಲ್ಲಾ ಆಡಳಿತ, ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ಸ್ಪೆಷಲ್ ಒಲಂಪಿಕ್ಸ್ ಭಾರತ್ ಜಿಲ್ಲಾ ಕೇಂದ್ರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಲಚೇನರಿಗಾಗಿ ಜಿಲ್ಲಾ ಮಟ್ಟದ ಸ್ಪೆಷಲ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟ ಏರ್ಪಡಿಸಿದ್ದರಿಂದ ವಿಕಲಚೇತನ ಮಕ್ಕಳು ಬಹಳ ಉತ್ಸಾಹದಿಂದಲೇ ಕ್ರೀಡೆಯಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಭದ್ರಾವತಿ ಹಾಗೂ ಶಿವಮೊಗ್ಗದ ತರಂಗ ಕಿವುಡು ಶಾಲೆ, ಶಾರದಾ ದೇವಿ ಅಂಧರ ವಿಕಾಸ ಕೇಂದ್ರ, ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ಜಿಲ್ಲೆಯ 7 ತಾಲೂಕುಗಳಲ್ಲಿನ ವಿಶೇಷ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ 300ಕ್ಕೂ ಹೆಚ್ಚು ವಿಕಲಚೇತನರು(10-30 ವರ್ಷ) ವಯೋಬೇಧವಿಲ್ಲದೆ ಕ್ರೀಡೆಯಲ್ಲಿ ಭಾಗವಹಿಸಿದ್ದರು.
ವಿವಿಧ ಸ್ಪರ್ಧೆ: ಕಿವುಡು ಮತ್ತು ಅಂಧ ಮಕ್ಕಳಿಗೆ 50,100, 200 ಹಾಗೂ 400 ಮೀ. ಓಟದ ಸ್ಪರ್ಧೆ, ಶಾಟ್ ಪುಟ್, ಬುದ್ದಿಮಾಂದ್ಯ ಮಕ್ಕಳಿಗೆ ಥ್ರೋಬಾಲ್, ಕೋಕೋ, ದೈಹಿಕ ವಿಕಲಚೇತನ, ಒಂದು ಕಾಲಿಲ್ಲದ ಕ್ರೀಡಾಪಟುಗಳಿಗೆ, 50,100 ಮೀ. ಓಟದ ಸ್ಪರ್ಧೆ, ಅಥ್ಲೆಟಿಕ್, ಟೆಬಲ್ ಟೆನ್ನಿಸ್, ಸ್ಟಾಡಿಂಗ್, ಲಾಂಗ್ ಜಂಪ್, ರನ್ನಿಂಗ್ ಲಾಂಗ್ ಜಂಪ್, ಸೆಟಲ್ಬ್ಯಾಟ್ಮಿಟನ್, ಫುಟ್ಬಾಲ್, ವೀಲ್ ಚೇರ್ ಹಾಗೂ ಈ ಬಾರಿ ವಿಶೇಷವಾಗಿ ಬೋಚಿ ಎಂಬ ಅಂತಾರಾಷ್ಟ್ರೀಯ ಕ್ರೀಡೆ ಪ್ರಸ್ತುತ ಪಡಿಸುತ್ತಿದ್ದು, ಇತರೆ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

