ಚಿಕ್ಕಮಗಳೂರು

ಸಿಎಂ ಆಗಬೇಕೆಂದು ಆಸೆ ಪಡುವದರಲ್ಲಿ ತಪ್ಪೇನಿದೆ?

Published On :

ಶಿರಾಳಕೊಪ್ಪ: 86 ವರ್ಷದ ಆಡ್ವಾನಿ ಅವರು ಪ್ರಧಾನಮಂತ್ರಿ ಆಗಬೇಕೆಂದು ಆಸೆ ಪಡುತ್ತಿರುವಾಗ 71ವರ್ಷದ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಡುವದರಲ್ಲಿ ತಪ್ಪೇನಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜಿಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನಿಸಿದರು.  ಪಟ್ಟಣದಲ್ಲಿ ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಕೇವಲ 110 ಶಾಸಕರು ಆರಿಸಿ ಬಂದಾಗ ಇತರ ನಾಲ್ಕು ಸದಸ್ಯರನ್ನು ಕರೆತಂದು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಪದ್ಮನಾಭಭಟ್ಟನಂತಹ ಕಾರ್ಯಕರ್ತರಿಗೆ ಗೂಟದ ಕಾರಿನಲ್ಲಿ ಓಡಾಡಲು ಅವಕಾಶಮಾಡಿಕೊಟ್ಟ ತಪ್ಪಿಗೆ ಇಂದು ಅವರು ನಮ್ಮ ಪಕ್ಷದ ಹಾಗೂ ನನ್ನ ವಿರುದ್ಧ ಅಭ್ಯರ್ಥಿಗಳನ್ನು ಹಾಕುತ್ತಾ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಅಂತಹವರನ್ನು ನಾನು ಎಂದೂ ನಂಬುವದಿಲ್ಲ ಎಂದು ಕಿಡಿಕಾರಿದರು. ನಾನು ಸಮಯ ಸಾಧಕರನ್ನು ನಂಬುವದಿಲ್ಲ ದೇವರನ್ನು ನಂಬುತ್ತೇನೆ. ಜನ ತೋರಿಸುತ್ತಿರುವ ಪ್ರೀತಿಗೆ ಈ ಜನ್ಮದಲ್ಲಿ ಋಣ ತೀರಿಸಲು ಆಗುವದಿಲ್ಲ, ಈಗ ಹೊಸ ಪಕ್ಷ ಕಟ್ಟಿದ್ದೇನೆ ಇಂದು ರಾಜ್ಯದಲ್ಲಿ ಇತರ ಪಕ್ಷಗಳು ಮೂರೇ ತಿಂಗಳಲ್ಲಿ ಪಕ್ಷದ ಬೆಳವಣಿಗೆ ನೋಡಿ ತಲ್ಲಣಗೊಂಡಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.