ಚಿಕ್ಕಮಗಳೂರು

ಸುದ್ದಿಯಲ್ಲಿ ನಿಖರತೆ: ಪತ್ರಿಕೆ ಇನ್ನಷ್ಟು ಹತ್ತಿರ

Published On :

ನರಸಿಂಹರಾಜಪುರ: ಸುದ್ದಿಯಲ್ಲಿ ನಿಖರತೆ ಹಾಗೂ ಪ್ರಚಲಿತ ವಿದ್ಯಾಮಾನವನ್ನು ಅತಿ ವೇಗವಾಗಿ ಜನರಿಗೆ ಮುಟ್ಟಿಸುವ ಮೂಲಕ ರಾಜ್ಯ ಮಟ್ಟದ ದಿನಪತ್ರಿಕೆಗಳು ಓದುಗರನ್ನು ತಲುಪಲು ಯಶಸ್ವಿಯಾಗಿದೆ ಎಂದು ಪತ್ರಕರ್ತ ಯಡಗೆರೆ ಮಂಜುನಾಥ್ ತಿಳಿಸಿದರು.
ಅವರು ಭಾನುವಾರ ಕಮಾಲಾಪುರ ಶಾಲೆಯ ಆವರಣದಲ್ಲಿ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಚಾರವಾಗಿ ನಡೆದ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜಿಲ್ಲಾ ಪುಟಗಳಿಂದಾಗಿ ಸ್ಥಳೀಯ ಸುದ್ದಿಗಳು ಹೆಚ್ಚು ಬರುತ್ತಿರುವುದರಿಂದ ರಾಜ್ಯ ಮಟ್ಟದ ದಿನಪತ್ರಿಕೆಗಳು ಜನರಿಗೆ ಹತ್ತಿರವಾಗುತ್ತಿದ್ದು, ಈಗ ಗ್ರಾಮೀಣ ಪ್ರದೇಶದಲ್ಲಿ ದಿನಪತ್ರಿಕೆ ಓದುಗರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚು ಪ್ರಾಶಸ್ತ್ಯ: ಸಣ್ಣ ಪತ್ರಿಕೆಗಳ ಮಹತ್ವ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದ ಪತ್ರಕರ್ತ ಅಭಿನವ ಗಿರಿರಾಜ್, ಸಣ್ಣ ಪತ್ರಿಕೆಗಳು ಸುದ್ದಿಯ ಇನ್ನೊಂದು ಮುಖಗಳ ವರದಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ. ಜೊತೆಗೆ ಸ್ಥಳೀಯ ವಿಷಯಗಳನ್ನು ಮನಮುಟ್ಟುವಂತೆ ವರದಿ ನೀಡುವುದರಿಂದ ಸಮಾಜಕ್ಕೆ ಹತ್ತಿರವಾಗುತ್ತಿದೆ. ಮುದ್ರಣದ ವೆಚ್ಚ ಹಾಗೂ ಕಾಗದಗಳ ದುಬಾರಿ ಬೆಲೆಯಿಂದಾಗಿ ಸಣ್ಣ ಪತ್ರಿಕೆಗಳು ಆತಂಕ ಎದುರಿಸುತ್ತಿದೆ ಎಂದರು.
ಜಾಹೀರಾತುಗಳೇ ಪತ್ರಿಕೆಯ ಜೀವಾಳವಾಗಿರುವುದರಿಂದ ಓದುಗರು ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು ಎಂದರು. ದಿನ ಪತ್ರಿಕೆಗಳು ನಡೆದು ಬಂದ ಹಾದಿಯ ಬಗ್ಗೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕಮಲಾಪುರ ಬಾಲ ವಿಕಾಸ ಸಮಿತಿ ಅಧ್ಯಕ್ಷ ಎ.ಎಸ್. ವೆಂಕಟರಮಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೀತೂರು ಗ್ರಾಪಂ ಸದಸ್ಯೆ ರಜನಿ ರಮೇಶ್, ಸೀತೂರು ಹರಿದ್ವರ್ಣ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎಸ್. ಉಪೇಂದ್ರ, ಸೀತೂರು ಮಾಜಿ ಮಂಡಲ ಪ್ರಧಾನ ಎಸ್.ಡಿ.ವಿ. ಗೋಪಾಲರಾವ್, ಕಮಲಾಪುರ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯ ವೈ.ಎಸ್. ಶ್ರೀನಿವಾಸ್, ಕೃಷಿಕ ಯಡಗೆರೆ ಕೆ.ವಿ. ಪ್ರಭಾಕರ ಮೊದಲಾದವರು ಉಪಸ್ಥಿತರಿದ್ದರು.
ಎಂ.ಸಿ. ಕೀರ್ತಿ ಸ್ವಾಗತಿಸಿದರು. ಅನುಶ್ರೀ ಹಾಗೂ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.