ವಿಶ್ವಕ್ಕೆ ಶ್ರೇಷ್ಠ ಧರ್ಮ ಕೊಟ್ಟಿದ್ದು ಭಾರತ
ಚನ್ನಗಿರಿ: ವಿಶ್ವಕ್ಕೆ ಶ್ರೇಷ್ಟ ಧರ್ಮವನ್ನು ಕೊಟ್ಟಿರುವುದು ಭಾರತ ದೇಶ ಎಂದು ಎಬಿವಿಪಿ ರಾಜ್ಯಾಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಹೇಳಿದರು.
ಅವರು ಬುಧವಾರ ಪಟ್ಟಣದ ಸಪಪೂ ಕಾಲೇಜು ಆವರಣದಲ್ಲಿ ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ವಿವೇಕೋತ್ಸವ ಮತ್ತು ಶೋಭಾಯಾತ್ರೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಭಯೋತ್ಪಾದನೆಯಿಂದ ದೇಶವನ್ನು ನಾಶ ಮಾಡಲು ಹೊರಟ ದುಷ್ಟ ಶಕ್ತಿ ಒಂದೆಡೆಯಾದರೆ ಭಾರತೀಯ ಉದಾತ್ತ ಸಂಸ್ಕೃತಿಯನ್ನು ವಿಶ್ವದೆತ್ತರಕ್ಕೆ ಬೆಳಗಿದ ಮಹಾನ್ ಶಕ್ತಿ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ಆದರ್ಶ ಜೀವನ ರಾಷ್ಟ್ರಪ್ರೇಮ, ದೇಶಭಕ್ತಿಯ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಚಿಂತಿಸುವುದು ಅಗತ್ಯ: ತಹಸೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಮಾತನಾಡಿ, ಇಂದಿನ ಯುವ ಜನಾಂಗಕ್ಕೆ ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ, ಜೀವನ ಎತ್ತ ಸಾಗುತ್ತಿದೆ ಎಂದು ಚಿಂತಿಸುವ ಅಗತ್ಯ ಇಂದಿನ ಯುವ ಜನಾಂಗಕ್ಕಿದೆ ಎಂದು ತಿಳಿಸುತ್ತಾ ದುಶ್ಚಟಗಳಿಂದ ದೂರವಿದ್ದು ಶಿಸ್ತಿನಿಂದ ಜೀವನ ನಡೆಸಬೇಕು ಎಂದರು.
ಯುವ ಜನಾಂಗ ವಿದ್ಯಾವಂತರಾಗಿ ರಾಷ್ಟ್ರದ ಐಕ್ಯತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಅಶಿಸ್ತಿನಿಂದ ವರ್ತಿಸದೆ ಹಿರಿಯರಿಗೆ ಗೌರವ ನೀಡುತ್ತಾ ದೇಶದ ಸಮಗ್ರತೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗದ ಎಬಿವಿಪಿ ವಿಭಾಗ ಪ್ರಮುಖರಾದ ಪ್ರೊ. ಮೇಘರಾಜ್ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಧುಕುಮಾರ್, ಸಂದೀಪ್ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಸಾರುತ್ತಾ, ಶೋಭಾಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

