ಚಿಕ್ಕಮಗಳೂರು

ರೋಟರಿ ಕ್ಲಬ್‌ನಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ

Published On :

ಬೀರೂರು: ಆದ್ಯ ವಚನಕಾರ ದೇವರ ದಾಸಿಮಯ್ಯರನ್ನು ಜೇಡರ ದಾಸಿಮಯ್ಯ ಎಂತಲೂ ಕರೆಯಲಾಗುತ್ತಿದೆ. ಇವರ ಮಡದಿ ದುಗ್ಗಳೆ ತನ್ನ ಪತಿಯ ವಚನ ಪಾಲಿಸುವಲ್ಲಿ ಯಶಸ್ವಿಯಾಗುವ ಮೂಲಕ ಸತಿ ಪತೋದಾದ ಭಕ್ತಿ ಹಿತವಪ್ಪುವುದು ಶಿವಂಗೆ ಎನ್ನುವಂತೆ ನಡೆದುಕೊಂಡವರು ಎಂದು ನಿವೃತ್ತ ಶಿಕ್ಷಕ ರುದ್ರೇಗೌಡ ತಿಳಿಸಿದರು.
 ಕಡೂರು ತಾಲೂಕು ಕಸಾಪ ಮತ್ತು ಬೀರೂರು ಹೋಬಳಿ ಕಸಾಪದಿಂದ ಬೀರೂರಿನ ರೋಟರಿಕ್ಲಬ್‌ನಲ್ಲಿ ಆಯೋಜಿಸಿದ್ದ ಅರೇಕಲ್ ಹೇಮಾವತಿ ಮತ್ತು ಚಂದ್ರಶೇಖರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ವಚನಕಾರರಲ್ಲಿ ಹಿರಿಯ ವಚನ ಚಳವಳಿ ಸ್ವರೂಪ ಧೋರಣೆಗಳಿಗೆ ಗಮರ್ನಾಹ ಕೊಡುಗೆ ನೀಡಿದ ಇವರು ಮುಂದಿನ ವಚನಕಾರರಾಗಿ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.                                  
    ಕಸಾಪ ಗೌರಾಧ್ಯಕ್ಷ ಅರೇಕಲ್ ಶ್ರೀನಿವಾಸ್ ಮಾತನಾಡಿ, ಕನ್ನಡ ಭವನ ನಿರ್ಮಾಣ ಆದಷ್ಟು ಬೇಗ ಕಟ್ಟಡ ಕಾರ್ಯ ಪ್ರಾರಂಭವಾಗಲಿ. ಅಧಕ್ಕಾಗಿ ತಾ.ಕಸಾಪ ಅಧ್ಯಕ್ಷರು ಸಕ್ರಿಯವಾಗಿ ಭಾಗವಹಿಸಿ ಕಟ್ಟಡ ಪೂರ್ಣಗೊಳಿಸಬೇಕು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ ಮಾತನಾಡಿ, ಕನ್ನಡ ಭಾಷೆಯ ಉಳಿವು ಗ್ರಾಮೀಣರಿಂದ ಮಾತ್ರ ಸಾದ್ಯ. ಕನ್ನಡ ಭಾಷೆ ಮತ್ತು ಕನ್ನಡನಾಡಿನ ಗಡಿನಾಡ ಕನ್ನಡಿಗರಿಗೆ ಅನ್ಯಾಯವಾಗದಂತೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ರಕ್ಷಣೆ ನೀಡಬೇಕು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಭಾಷೆ ಎಂದೆಂದಿಗೂ ಅಳಿಯದ ಭಾಷೆಯಾಗಬೇಕು ಎಂದು ತಿಳಿಸಿದರು. ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
   ಬೀರೂರು ಹೋಬಳಿ ಅಧ್ಯಕ್ಷ ಬಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅರೇಕಲ್ ಕುಟುಂಬದ ಅರೇಕಲ್ ಪ್ರಕಾಶ್, ಡಾ.ಜಗದೀಶ್, ಸತೀಶ್, ಬ್ರಹ್ಮಕುಮಾರಿ ಸಂಸ್ಥೆಯ ಪದ್ಮಕ್ಕ, ಸುಮಿತ್ರಮ್ಮ, ಹನುಮಂತಪ್ಪ, ಶಿಲ್ಪಾ ದೇವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.