ಕಂಬಾರ, ಕಾರ್ನಾಡರ ಕಥೆಗಳಿಗೆ ಸಂಗಣ್ಣ ಜೀವದ್ರವ್ಯ
ಹರಪನಹಳ್ಳಿ: ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹಾಗೂ ಗಿರೀಶ ಕಾರ್ನಾಡರ ಕಥಾ ವಸ್ತುಗಳಿಗೆ ಜಾನಪದ ವಿದ್ವಾಂಸ ದಿ. ಮುದೇನೂರು ಸಂಗಣ್ಣ ಜೀವ ದ್ರವ್ಯವಾಗಿದ್ದರು ಎಂದು ಜಾನಪದ ಸಾಹಿತಿ ಡಾ. ರಂಗಾರೆಡ್ಡಿ ಕೋಡಿರಾಂಪುರ ಅಭಿಪ್ರಾಯ ಪಟ್ಟಿದ್ದಾರೆ.
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ಜಾನಪದ ವಿದ್ವಾಂಸ ಮುದೇನೂರು ಸಂಗಣ್ಣ ನವರ ನೆನಪು ವಿಚಾರ ಸಂಕಿರಣದಲ್ಲಿ ಸಂಗಣ್ಣ ಅವರ ವ್ಯಕ್ತಿತ್ವ ಕುರಿತು ಗುರುವಾರ ಮಾತನಾಡಿದರು. ಪರ್ಯಾಯ ಆಲೋಚನಾ ವಿಧಾನ ಕೃತಿಗಳನ್ನು ಸಂಗಣ್ಣ ರೂಡಿಸಿಕೊಂಡಿದ್ದರು. ಸಂಗಣ್ಣನವರ ಕೃತಿಗಳು ಕುರಿತು ಉಪನ್ಯಾಸ ನೀಡಿದ ಡಾ. ಬಸವರಾಜ ನೆಲ್ಲಿಸರ ದಕ್ಷಿಣ ಕನ್ನಡ ಭಾಗದಲ್ಲಿ ಯಕ್ಷಗಾನ ಉಳಿದಿದೆ, ಆದರೆ ನಮ್ಮ ಭಾಗದಲ್ಲಿ ದೊಡ್ಡಾಟ ಉಳಿದಿಲ್ಲ, ಇದಕ್ಕೆ ಕಾರಣ ವಿದ್ವಾಂಸರಾದ ನಾವು ಕೇವಲ ಭಾಷಣ ಮಾಡುತ್ತೇವೆ ಎಂದು ಹೇಳಿದರು.
ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಸಂಗಣ್ಣ ನವರ ಸಾಂಸ್ಕೃತಿಕತೆ ಕುರಿತು ಹಾಗೂ ಎಂ.ಎಂ. ಶಿವಪ್ರಕಾಶ ಸಂಗಣ್ಣನವರ ಸೃಜನಶೀಲತೆ ಕುರಿತು ವಿಷಯ ಮಂಡಿಸಿದರು. ದಾವಣಗೆರೆಯ ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ವಾಲ್ಮೀಕಿ, ಡಾ. ಅಂಬಣ್ಣ, ವಾಮದೇವಯ್ಯ, ವಸುಪಾಲ, ರಂಗಕಲಾವಿದರಾದ ಮರಿಯಮ್ಮನಹಳ್ಳಿ ನಾಗರತ್ನಮ್ಮ, ಸೋಗಿ ನಾಗರತ್ನಮ್ಮ, ಡಾ. ಮಂಜುನಾಥ ಉತ್ತಂಗಿ, ಐಗೋಳ ಚಿದಾನಂದ, ಪ್ರಾಚಾರ್ಯ ಎಂ. ಕುರುವತ್ತೆಪ್ಪ, ಡಾ.ಕೆ.ಎಚ್. ಪಂಚಾಕ್ಷರಪ್ಪ, ಡಾ.ಕೆ. ರುದ್ರಪ್ಪ, ಎಸ್. ನಾಗೇಂದ್ರಪ್ಪ ಪಾಲ್ಗೊಂಡಿದ್ದರು.
ಜಾನಪದ ಗಾಯನ, ಪೂಜಾ ಕುಣಿತ, ಕಂಸಾಳೆ, ಸೋಭಾನೆ ಹಾಡು, ಗೊರವರ ಹಾಡು, ಕಿನ್ನರ ಜೋಗಿ ಪದ, ಕೀಲು ಕುದುರೆ, ಡೊಳ್ಳು ಕುಣಿತ, ಕೋಲಾಟ, ರಿವಯತ್ ಪದ, ಭಜನೆ, ಲಂಬಾಣಿ ನೃತ್ಯ ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

