ಸರ್ವ ಶಿಕ್ಷಣ ಅಭಿಯಾನ: ರು. 1.46 ಕೋಟಿ ಬಿಡುಗಡೆ
ಕ.ಪ್ರ.ವಾರ್ತೆ, ಕಡೂರು, ಜು.5: ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ 52 ಶಾಲೆಗೆ ಶೌಚಾಲಯ, 43 ಶಾಲೆಗೆ ಕಾಂಪೌಂಡ್ ಮತ್ತು 14 ಶಾಲೆಗೆ ಮುಖ್ಯ ಶಿಕ್ಷಕರ ಕೊಠಡಿ ಸೇರಿದಂತೆ ಒಟ್ಟು ರು. 1.46 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಸಿ.ಟಿ. ರವಿ ಹೇಳಿದರು.
ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತ್ಯಿಯ ಕಡೂರು ತಾಲೂಕಿನ ದೇವನೂರು, ಟಿ.ಬಿ. ಕಾವಲು, ಬ್ಯಾಲದಾಳು, ಕಬ್ಬಳ್ಳಿ ತಾಂಡ್ಯ ಸೇರಿದಂತೆ ಒಟ್ಟು ರು. 1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ್ ಮತ್ತು ಸೇವಾಲಾಲ್ ಭನವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿಗೆ ಗಮನ: ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದರೂ, ಅಭಿವೃದ್ಧಿ ಕಡೆ ತಾವು ಗಮನಹರಿಸುತ್ತಿದ್ದೇನೆ. ಸ್ವಾರ್ಥಕ್ಕಾಗಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ, ಸಬೂಬು ಹೇಳಿ ತಾತ್ಕಾಲಿಕ ಲಾಭ ಗಳಿಸಬಹುದೇ ವಿನಃ ಇದರಿಂದ ಯಾವ ಸಾರ್ಥಕತೆಯನ್ನೂ ಹೊಂದಲು ಸಾಧ್ಯವಿಲ್ಲ ಎಂದರು.
ಜನಪ್ರತಿನಿಧಿಯಾದವನ ಉದ್ದೇಶ ಕೇವಲ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ಅದೇ ಬಯಕೆ ಕೂಡ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ದೇವನೂರಿನ ಕವಿ ಲಕ್ಷ್ಮೀಶನ ದೇವಾಲಯದ ಪಕ್ಕದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ರು. 40ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ್ ಕಟ್ಟಡದ ಕಾಮಗಾರಿ ಮತ್ತು ನಾಲ್ಕು ತಾಂಡ್ಯಾಗಳಲ್ಲಿ ತಲಾ ರು. 10 ಲಕ್ಷ ರೂ ವೆಚ್ಚದಲ್ಲಿ ಸೇವಾಲಾಲ್ ಭವನಗಳ ನಿಮಾರ್ಣಕ್ಕೆ ಚಾಲನೆ ನೀಡಲಾಗುತ್ತಿದೆ. ಜನಪ್ರತಿನಿಧಿಯಾದವರು ಅಭಿವೃದ್ಧಿಯ ಚಿಂತನೆ ನಡೆಸಿದಲ್ಲಿ ಮಾತ್ರ ಪ್ರಜಾಪ್ರಭುತ್ವದ ಸಾರ್ಥಕತೆ ಈಡೇರುತ್ತದೆ ಎಂದರು.
14 ಶಾಲಾ ಕಂಪೌಂಡ್ ನಿರ್ಮಾಣ: ಕ್ಷೇತ್ರದ 52 ಶಾಲೆಗಳಿಗೆ ರು. 28,000 ದಂತೆ ಒಟ್ಟು ರು. 1.45 ಕೋಟಿ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ಮತ್ತು 14 ಶಾಲಾ ಕಾಂಪೌಂಡ್ಗಳ ನಿರ್ಮಾಣಕ್ಕಾಗಿ ರು. 5.27ಲಕ್ಷ ಮತ್ತು ಮುಖ್ಯ ಶಿಕ್ಷಕರ ಕೊಠಡಿಗಳ ನಿರ್ಮಾಣಕ್ಕಾಗಿ 4.47 ಶಿಕ್ಷಕರ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವರ್ಗಾವಣೆ ಪ್ರಕ್ರಿಯೆ ವ್ಯಾಪಕವಾಗಿ ನಡೆಯುವ ಮೂಲಕ ವ್ಯಾಪರೀಕರಣವಾಗುತ್ತಿದೆ. ಇಂತಹ ವರ್ಗಾವಣೆ ವ್ಯಾಪಾರಕ್ಕೆ ಇಳಿದಿರುವುದು ದುರದೃಷ್ಟಕರ. ಕೇವಲ ಬರೀ ಆಡಳಿತದಲ್ಲಿ ಮಾತ್ರ ಹಸ್ತಕ್ಷೇಪ ಮಾಡಿದರೆ ಆಡಳಿತದ ಹಿಡಿತ ತಪ್ಪುತ್ತದೆ ಎಂಬುದನ್ನು ಅರಿಯಬೇಕು.
ಈ ಕುರಿತು ತಮ್ಮ ಬಳಿ ಕೆಲ ಕಾಂಗ್ರೆಸ್ ಮುಖಂಡರೇ ನೋಂದು ನುಡಿದಿದ್ದಾರೆ ಎಂದು ಆರೋಪಿಸಿದ ರವಿ, ಆದರೆ ಉತ್ತಮ ಅಧಿಕಾರಿಗಳು ಯಾರು ಏನು ಎಂಬುದರ ವಿಮರ್ಶೆ ಅಗತ್ಯವಾಗಿದೆ ಎಂದವರು ಹೇಳಿದರು.
ಚಿಂತನೆ ಅಗತ್ಯ: ವರ್ಗಾವಣೆಯಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬುದಾದರೆ ಈ ಜನಪ್ರತಿನಿಧಿಗಳು ಏತಕ್ಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಸರಿಯಾದ ರೀತಿಯಲ್ಲಿ ಆಲೋಚನೆ ಮಾಡಿ, ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆ ನಡೆಸಬೇಕು ಎಂದವರು ಹೇಳಿದರು.
ಎಪಿಎಂಸಿ ಅಧ್ಯಕ್ಷ ಲಕ್ಷ್ಮಣನಾಯ್ಕ, ಸಖರಾಯಪಟ್ಟಣ ಜಿಪಂ ಸದಸ್ಯ ಕಲ್ಮರುಡಪ್ಪ, ಮುಖಂಡ ಚಿಕ್ಕದೇವನೂರು ರವಿ, ಗ್ರಾಪಂ ಅಧ್ಯಕ್ಷ ನಟೇಶ್, ನಿಡಘಟ್ಟ ತಾಪಂ ಅಧ್ಯಕ್ಷೆ ಮಲಿಗಮ್ಮ ಲೋಕೇಶ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್, ಮಿಲ್ಟ್ರಿ ರವಿ, ಟಿ.ಬಿ. ಕಾವಲು ಹಟ್ಟಿಯ ಗೌಡರಾದ ಗೋಪಾಲನಾಯ್ಕ, ಲೋಕೇಶ್ ಅಗ್ರಹಾರ ಚಂದ್ರು, ರಾಮಚಂದ್ರನಾಯ್ಕ, ಚಂದ್ರಾನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

