ಚಿಕ್ಕಮಗಳೂರು

9,607 ಹೆಕ್ಟೇರ್ ಅರಣ್ಯ ಒತ್ತುವರಿ: ಡಾ.ಪಿ. ಶಂಕರ್

Published On :

ಕೊಪ್ಪ: ಕೊಪ್ಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 9,607 ಹೆಕ್ಟೇರ್ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 342 ಮಂದಿ 10 ಎಕರೆಗಿಂತ ಮೇಲ್ಪಟ್ಟು ಒತ್ತುವರಿ ಮಾಡಿದ್ದು, ಒಟ್ಟು 2.552 ಹೆಕ್ಟೇರ್ ಒತ್ತುವರಿಯಾಗಿದೆ. ಅದೇ ರೀತಿ 6,820 ಪ್ರಕರಣಗಳಲ್ಲಿ 10 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿದ್ದು, ಒಟ್ಟು 7,055 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒತ್ತುವರಿ ತೆರವು ಅನಿವಾರ್ಯವಾಗಿದ್ದು, ಮೊದಲ ಹಂತದಲ್ಲಿ 10  ಎಕರೆಗಿಂತ ಮೇಲ್ಪಟ್ಟ ಒತ್ತುವರಿ ತೆರವುಗೊಳಿಸಲಾಗುವುದು. ಸಂಬಂಧಿಸಿದ ಒತ್ತುವರಿದಾರರಿಗೆ ಸೂಕ್ತ ದಾಖಲೆ ಒದಗಿಸುವಂತೆ ಸಮಯಾವಕಾಶ ನೀಡಿ, ಮೂರು ಹಂತಗಳಲ್ಲಿ ನೋಟಿಸ್ ನೀಡಲಾಗುವುದು. ಸರಿಯಾದ ದಾಖಲೆ ಒದಗಿಸದಿದ್ದಲ್ಲಿ ಅಂತಹ ಒತ್ತುವರಿಯನ್ನು ಅಕ್ರಮವೆಂದು ಪರಿಗಣಿಸಿ ತೆರವು ಮಾಡಲಾಗುವುದು ಎಂದರು.
126 ಹೆಕ್ಟೇರ್ ತೆರವು: ಈಗಾಗಲೇ 10 ಎಕರೆಗಿಂತಲೂ ಮೇಲ್ಪಟ್ಟ ಒತ್ತುವರಿ ಮಾಡಿರುವ 182 ಮಂದಿಗೆ ನೋಟಿಸ್ ನೀಡಿದೆ.19 ಪ್ರಕರಣಗಳಲ್ಲಿ 126 ಹೆಕ್ಟೇರ್ ಅರಣ್ಯ ಭೂಮಿ ತೆರವುಗೊಳಿಸಲಾಗಿದೆ. ತೆರವು ಮಾಡಿದ ಜಾಗದಲ್ಲಿ ಸ್ವಾಭಾವಿಕ ಅರಣ್ಯ ಅಭಿವೃದ್ಧಿಪಡಿಸಿ, ಜೀವಸಂಕುಲದ ಸಂರಕ್ಷಣೆ ಸರ್ಕಾರದ ಉದ್ದೇಶ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.