ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ
ಕ.ಪ್ರ.ವಾರ್ತೆ, ಕಡೂರು, ಜು.9
ಚುನಾವಣೆಯಲ್ಲಿ ಗೆದ್ದ ನಂತರ ಅಧಿಕಾರದ ಮದ ಏರಿಸಿಕೊಳ್ಳುವ ಹಲವು ರಾಜಕಾರಣಿಗಳು ಪ್ರತಿಷ್ಠೆಗಾಗಿಯಾದರೂ ಕಾರಿನಲ್ಲೇ ಸುತ್ತಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂತಹ ರಾಜಕಾರಣಿಗಳ ಮಧ್ಯೆ ಸರಳ ವ್ಯಕ್ತಿತ್ವ ಹೊಂದಿರುವ ಶಾಸಕ ವೈ.ಎಸ್.ವಿ. ದತ್ತ ಕಡೂರು ಪಟ್ಟಣದಲ್ಲಿ ಅಧಿಕಾರಿ, ಮುಖಂಡರೊಂದಿಗೆ ಜನರ ಸಮಸ್ಯೆ ಕೇಳಿಸಿಕೊಂಡು ಆಟೋದಲ್ಲಿಯೇ ಸೋಮವಾರ ನಗರ ಪ್ರದಕ್ಷಿಣೆ ನಡೆಸಿ ಗಮನ ಸೆಳೆಯಿತು.
ಶಾಸಕರಾದ ಮೇಲೆ ಮೊದಲ ಬಾರಿಗೆ ತಮ್ಮ ಆಟೋದಲ್ಲಿ ಸಂಚರಿಸುವ ಪರಿಪಾಠವನ್ನು ಕಡೂರು ಪಟ್ಟಣದಲ್ಲಿ ಅಧಿಕಾರಿಗಳೊಂದಿಗೆ ಮುಂದುವರಿಸಿದರು.
ಆ ಮೂಲಕ ಪಟ್ಟಣದ ಹಲವು ವಾರ್ಡ್ಗಳಿಗೆ ಭೇಟಿ ನೀಡಿ ಮೂಲ ಸಮಸ್ಯೆ, ಕುಡಿವ ನೀರಿನ ಸಮಸ್ಯೆ ಬಗ್ಗೆ ಜನರ ಬಳಿಗೆ ಪುರಸಭೆ ಅಧಿಕಾರಿಗಳೊಂದಿಗೆ ತೆರಳಿದ ಶಾಸಕರು ಆಟೋದಲ್ಲಿ ಹಲವು ವಾರ್ಡ್ಗಳಿಗೆ ಹೋಗಿ ಜನರನ್ನು ಭೇಟಿಮಾಡಿ, ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ಪರಿಶೀಲನೆ: ಬೆಳಗ್ಗೆ 9 ಗಂಟೆಗೆ 1ನೇ ವಾರ್ಡಿಗೆ ಭೇಟಿ ನೀಡಿದಾಗ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಆಗುತ್ತಿರುವ ತೊಂದರೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ, ಎಂಜಿನಿಯರ್ ಮಂಜುನಾಥ್, ಆರೋಗ್ಯ ನಿರೀಕ್ಷಕ ಹರೀಶ್, ಈಶ್ವರ್, ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮೊದಲಾದವರೊಂದಿಗೆ ಪರಿಶೀಲಿಸಿದರು.
ನಂತರ ಅನುದಾನವಿಲ್ಲದೇ ಕಾಮಗಾರಿ ಸ್ಥಗಿತವಾಗಿರುವ ಬೆಂಕಿ ಕಾಲೋನಿಯ ಸಮುದಾಯ ಭವನ ನಿರ್ಮಾಣಕ್ಕೆ ರು. 2 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕೆ.ಎಸ್.ಆರ್.ಟಿ.ಸಿ. ರಸ್ತೆ ಮುಂಭಾಗದ ದೇವರಾಜ ಅರಸು ರಸ್ತೆಯಲ್ಲಿ ಅಂಡರ್ ಬ್ರಿಡ್ಜ್ ಬಳಿ ಕೆಳಭಾಗದಲ್ಲಿ ಕೊಳಚೆ ನೀರು ಹೋಗದೆ ಇರುವ ಬಗ್ಗೆ ಚರಂಡಿ ನಿರ್ಮಾಣದ ಅವಶ್ಯಕತೆ ಮನಗಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆಯ ಎರಡೂ ಕಡೆ ಚರಂಡಿ ನಿರ್ಮಾಣಕ್ಕೆ ಕ್ರಿಯಾಶೀಲ ವರದಿ ಸಿದ್ದಪಡಿಸುವಂತೆ ಸೂಚಿಸಿದರು.
ರಸ್ತೆ ತೆರವಿಗೆ ಮನವಿ: ಕೋಟೆಯ ಅರಸು ಮಕ್ಕಳ ಬೀದಿ, ಅಗಳು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಂದ ಆಟೋದಲ್ಲೇ ಸಾಗಿದ ದತ್ತ 13 ನೇ ವಾರ್ಡಿನಲ್ಲಿರುವ ಶುದ್ಧಗಂಗಾ ಘಟಕದ ಬಳಿಯ ನಿವಾಸಿಗಳು ಇಲ್ಲಿಂದ ಕೋರ್ಟ್ ಮುಂಭಾಗದ ರಸ್ತೆಗೆ ತೆರಳಲು ನಮಗೆ ರಸ್ತೆ ಇಲ್ಲ. ಆದ್ದರಿಂದ ಕೂಡಲೇ ರಸ್ತೆ ತೆರವು ಮಾಡಿಸಿಕೊಡಬೇಕೆಂಬ ಬೇಡಿಕೆಗೆ ಪುರಸಭೆ ಅಧಿಕಾರಿಗಳು ಈ ಬಗ್ಗೆ ದಾಖಲೆ ಪರಿಶೀಲಿಸಿ ತಮಗೆ ವರದಿ ಮಾಡಿದ ನಂತರ ಕ್ರಮ ಕೈಗೊಲ್ಳುವುದಾಗಿ ಭರವಸೆ ನೀಡಿದರು.
ಆನಂತರ ಕುಡಿಯುವ ನೀರಿಗೆ ದಕ್ಕೆ ಬಾರದಂತೆ ಪುರಸಭೆ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆಯೋ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸೂವಂತೆ ಸೂಚಿಸಿ ಮತ್ತೆ ವಾರ್ಡ್ ಪ್ರದಕ್ಷಿಣೆ ಮುಂದುವರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಶಿವಶಂಕರ್, ಎಂಜಿನಿಯರ್ ಶಿವಮೂರ್ತಿ,ಪುರಸಭಾ ಸದಸ್ಯೆ ಜಯಮ್ಮ, ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಪ್ರಸನ್ನ, ಮುಖಂಡ ಪ್ರಶಾಂತ್, ಮುಖಂಡ ಮಹಮದ್ ಇಸ್ಮಾಯಿಲ್, ಕೆ.ಎಚ್. ಲಕ್ಕಣ್ಣ, ತಮ್ಮಯ್ಯಪ್ಪ, ಗಂಗಾಧರನಾಯ್ಕ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

