ಸಮರ್ಪಕ ಶುದ್ಧ ನೀರು ನೀಡಿ: ವಾರ್ಡ್ ಜನತೆ ಮನವಿ
ಕ.ಪ್ರ.ವಾರ್ತೆ, ಕಡೂರು, ಜು.9
ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದ್ದು, ಸಮರ್ಪಕ ಮತ್ತು ಉತ್ತಮ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಪಟ್ಟಣದ ಹಲವು ವಾರ್ಡ್ಗಳ ಸಾರ್ವಜನಿಕರು ಪುರಸಭೆಗೆ ಭೇಟಿ ನೀಡಿ ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸಿ ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದರು.
ಕಡೂರು ಪುರಸಭೆ ಮಾಜಿ ನಾಮಕರಣ ಸದಸ್ಯ ಟಿ.ಆರ್. ಸುರೇಶ್, ನಾಗರಾಜ್, ಮುಖಂಡ ಟಿ.ಎಲ್. ರಾಘುರವರ ನೇತೃತ್ವದಲ್ಲಿ ಪುರಸಭೆಗೆ ಭೇಟಿ ನೀಡಿದ ಸಾರ್ವಜನಿಕರು, ಪುರಸಭೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆಗಮಿಸಿದ್ದ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಕುಮಾರನಾಯ್ಕರವರಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು.
ಕಲುಷಿತ ನೀರು: ಈಗಾಗಲೇ ಎಲ್ಲೆಡೆ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾದಂತಹ ಕಾಯಿಲೆಗಳು ಕಲುಷಿತ ನೀರಿನಿಂದಲೇ ಹರಡುತ್ತಿವೆ. ನಲ್ಲಿಗಳಲ್ಲಿ ಬರುತ್ತಿರುವ ಕಲುಷಿತ ನೀರನ್ನು ಬಾಟಲಿಯಲ್ಲಿ ತಂದು ಅಧಿಕಾರಿಗಳಿಗೆ ತೋರಿಸಿ, ಕಳೆದ 15 ದಿನಗಳಿಂದ ಕೋಟೆ, 14ನೇ ವಾರ್ಡಿನ ಕೆಲವಡೆ ಮತ್ತು ಸ್ಟೇಟ್ ಬ್ಯಾಂಕ್ನ ಸುತ್ತಮುತ್ತ ನಲ್ಲಿಗಳಲ್ಲಿ ಕುಲುಷಿತ ನೀರು ಬರುತ್ತಿದೆ ಎಂದು ಹೇಳಿದರೂ ಕೂಡ ಗಮನಹರಿಸುತ್ತಿಲ್ಲ.
ಅಲ್ಲದೆ ಕೋಟೆಯ16ನೇ ವಾರ್ಡಿನಲ್ಲಿ ಕಿರು ನೀರು ಸರಬರಾಜು ಘಟಕದಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ನೀರು ಪೂರೈಸುವಾಗ ಮೆಸ್ಕಾಂ ನಿಂದ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಈ ಭಾಗಕ್ಕೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ.
ಕ್ರಮ ಕೈಗೊಳ್ಳುತ್ತಿಲ್ಲ: ಸಮರ್ಪಕ ನೀರು ಪೂರೈಕೆಯಾಗದಿರುವ ಬಗ್ಗೆಯೂ ಕೂಡ ಕಳೆದ 3 ವರ್ಷದಿಂದ ದೂರು ನೀಡುತ್ತಾ ಬಂದಿದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ತೊಂದರೆ ಇರುವ ಕಡೆ ಕುಡಿವ ನೀರು ಸಮರ್ಪಕವಾಗಿ ವಿತರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಉತ್ತರಿಸಿದ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಬಾಲಚಂದ್ರ ಪುರಸಭೆಯ ಅಧಿಕಾರಿ ಸಿಬ್ಬಂದಿಯೊಂದಿಗೆ ಚರ್ಚಿಸಿ, ಎಲ್ಲೆಲ್ಲಿ ಕುಡಿವ ನೀರಿನ ಗಂಭೀರ ಸಮಸ್ಯೆ ಇರುವ ಬಗ್ಗೆ ಪಟ್ಟಿ ಮಾಡಿ ಜನರಿಗೆ ಕುಡಿವ ನೀರಿಗೆ ತೊಂದರೆಯಾಗದಂತೆ ಕ್ರಮ ಕೊಗಂಡು ಜನರಿಗೆ ಮೂಲ ಸವಲತ್ತು ಪೂರೈಸುವಂತೆ ಸೂಚಿಸಿದರು.
ನಂತರ ಪುರಸಭಾ ಸದಸ್ಯ ಸೋಮಯ್ಯ, ಲೋಕೇಶ್, ತೋಟದ ಮನೆ ಮೋಹನ್ ಮೊದಲಾದ ಸದಸ್ಯರು, ಅಧಿಕಾರಿಗಳು ಕೂಡಲೇ ಗಮನಹರಿಸಿ ತೊಂದರೆಯಾಗದಂತೆ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದರು. ಮುಖಂಡ ದಿವಾಕರ್, ರಾಘು, ಪ್ರಸಾದ್, ಪುರಸಭೆ ಅಧಿಕಾರಿ ಎಂಜಿನಿಯರ್ ಮಂಜುನಾಥ್, ಆರೋಗ್ಯ ನಿರೀಕ್ಷಕ ಹರೀಶ್, ಈಶ್ವರ್, ಮಂಜೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

