ಚಿಕ್ಕಮಗಳೂರು

ಲಿಂಗದಹಳ್ಳಿಗೆ ಪ್ರಥಮ ದರ್ಜೆ ಕಾಲೇಜು

Published On :

ತರೀಕೆರೆ: ಲಿಂಗದಹಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
 ಶನಿವಾರ ಸಮೀಪದ ಲಿಂಗದಹಳ್ಳಿ ಸ.ಪ.ಪೂ.ಕಾಲೇಜು, ಪ್ರೌಢ ಶಾಲೆ ವಿಭಾಗದಿಂದ ಆರ್‌ಎಂಎಎಸ್ ಯೋಜನೆಯಡಿ ಶಾಲೆಗೆ  ಹೆಚ್ಚುವರಿಯಾಗಿ ಮಂಜೂರಾದ 6  ಕಟ್ಟಡಗಳ ಭೂಮಿಪೂಜೆ ನೆರವೇರಿಸಿ ಆರ್.ಕೆ. ಫೌಂಡೇಶನ್ ಪ್ರಾಯೋಜಿತ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಪದವಿ ವಿದ್ಯಾಭ್ಯಾಸ ಮಾಡಲು ಲಿಂಗದಹಳ್ಳಿ ಮತ್ತು ಸುತ್ತಮುತ್ತ ಪ್ರದೇಶದ ವಿದ್ಯಾರ್ಥಿಗಳು ದೂರ ಹೋಗಬೇಕಾಗುತ್ತದೆ, ಇದರಿಂದ ಎಷ್ಟೋ ವಿದ್ಯಾರ್ಥಿಗಳು, ಹೆಣ್ಣುಮಕ್ಕಳು ವಿದ್ಯಾಭ್ಯಾಸವನ್ನು ಅರ್ಥಕ್ಕೆ ನಿಲ್ಲಿಸಿಬಿಡುವ ಸಂದರ್ಭ ಇದೆ, ಹಾಗಾಗಿ ಲಿಂಗದಹಳ್ಳಿಗೆ ಪ್ರಥಮ ದರ್ಜೆ ಕಾಲೇಜು ಅಗತ್ಯವಿದೆ ಎಂದು ತಿಳಿಸಿದರು.
ಪ್ರಥಮ ಸ್ಥಾನ ಗಳಿಸಲಿ: ಲಿಂಗದಹಳ್ಳಿ ಪ.ಪೂ.ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ತಾಲೂಕಿನಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಈ ಶಾಲೆ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಗಳಿಸಲಿ ಎಂದು ಅವರು ಆಶಿಸಿದರು.
7,000 ನೋಟ್‌ಬುಕ್: ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಯರಾಂ ಮಾತನಾಡಿ, ಪ್ರೌಢಶಾಲೆ ಕಟ್ಟಡ ಶಿಥಿಲವಾಗಿರುವುದರಿಂದ ಕಾಲೇಜು ಮತ್ತು ಹೈಸ್ಕೂಲನ್ನು ಬೇರೆ ಬೇರೆ ವೇಳೆ ನೆಡೆಸಲಾಗುತ್ತಿದ್ದು, ಇದೀಗ ಹೆಚ್ಚುವರಿಯಾಗಿ 6 ಕೊಠಡಿಗಳು ನಿರ್ಮಾಣವಾಗುವುದರಿಂದ ಏಕಕಾಲದಲ್ಲಿ ಎಲ್ಲ ತರಗತಿಗಳನ್ನು ನೆಡೆಸಲು ಅನುಕೂಲವಾಗುತ್ತದೆ, ಗ್ರಾಮದ ವಿದ್ಯಾವಂತರು ಗ್ರಾಮದಲ್ಲೇ ನೆಲಸಬೇಕು ಎಂಬ ಆಶಯವನ್ನು ಹೊಂದಲಾಗಿದೆ,  ಇಂದು 1,250 ಮಕ್ಕಳಿಗೆ 7,000 ನೋಟ್ ಬುಕ್ಕುಗಳನ್ನು ವಿತರಿಸಲಾಗುತ್ತಿದೆ ಎಂದರು.
 ಗ್ರಾಪಂ ಅಧ್ಯಕ್ಷೆ ಚಂದ್ರೀಬಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಪಂ ಸದಸ್ಯೆ ಹೇಮಾವತಿ ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಕೃಷ್ಣಪ್ಪ, ಯೋಗೀಶ್,  ಉಪಪ್ರಾಚಾರ್ಯ ದಯಾವತಿ, ಜೈಸೋಮನಾಥ್ ಮಾತನಾಡಿದರು.
 ಶಿವಣ್ಣ, ಮಹಮದ್ ಕುಟ್ಟಿ, ರಮೇಶ್ ಇದ್ದರು. ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.