ಕಾಡಿನಲ್ಲಿ ಪ್ರಾಚೀನ ಕಾಲದ ವಿಗ್ರಹ ಪತ್ತೆ
ಬಾಳೆಹೊನ್ನೂರು: ಮೇಗುಂದಾ ಹೋಬಳಿಯ ಕೊಗ್ರೆ ಸಮೀಪದ ಚಾರನಕೊಡಿಗೆಯ ಕಾಡಿನಲ್ಲಿ ಪ್ರಾಚೀನ ಕಾಲದ ವಿಗ್ರಹವೊಂದು ಪತ್ತೆಯಾಗಿದೆ.
ಕೊಗ್ರೆ ಸಮೀಪದ ಚಾರಬಕೊಡಿಗೆ ಕಾಡಿನಲ್ಲಿ ಲೋಹದ ವಿಗ್ರಹವನ್ನು ಸ್ಥಳೀಯ ಯುವಕರು ಪತ್ತೆ ಹಚ್ಚಿದ್ದಾರೆ. ಈ ಕುರಿತು ಮಾಹಿತಿ ಪಡೆದ ಜಯಪುರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಿಗ್ರಹವನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಇರಿಸಿದ್ದಾರೆ.
ವಿಗ್ರಹ ಯಾವ ದೇವರದ್ದು ಎಂಬುದು ಇನ್ನೂ ತಿಳಿದಿಲ್ಲ. ಅದು ದೇವಸ್ಥಾನಕ್ಕೆ ಸೇರಿರುವುದು ಅಥವಾ ಯಾವುದಾದರೂ ದೇವಸ್ಥಾನದಲ್ಲಿ ಕಳವು ಮಾಡಿ ಇಲ್ಲಿ ತಂದು ಹಾಕಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚಲಾಗುವುದು ಎಂದು ಠಾಣಾಧಿಕಾರಿ ಕುಮಾರ ಹಾಡಕರ ತಿಳಿಸಿದ್ದಾರೆ.
ಚಾಲನೆ
ತರೀಕೆರೆ: ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ರಂಜಾನ್ ತಿಂಗಳ ಉಪವಾಸ ಆಚರಿಸಲು ಧವಸ-ಧಾನ್ಯಗಳ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಚಾಲನೆ ನೀಡಿದರು.
ಜಮಾ ಅತೆ ಇಸ್ಲಾಮಿ ಹಿಂದ್ ತರೀಕೆರೆ ಅಧ್ಯಕ್ಷ ನಿಯಾಜ್ ಹುಸೇನ್, ದಾರುಲ್ ಇಸ್ಲಾಹ್ ಟ್ರಸ್ಟ್ ಕಾರ್ಯದರ್ಶಿ ಅಹಮದ್ ಖಾನ್, ಶೇಕ್ ಜಾವೀದ್, ಎಪಿಎಲ್ಆರ್ ಜಿಲ್ಲಾ ಸಂಚಾಲಕ ಆದಿಲ್ ಪಾಷ, ಬುರ್ಹಾನ್ ಅಹಮದ್ ಬೇಗ್ ಮತ್ತಿತರರು ಭಾಗವಹಿಸಿದ್ದರು.
ಸ್ನಾತಕೋತ್ತರ ಪದವಿ ಆರಂಭ
ಚಿಕ್ಕಮಗಳೂರು: ನಗರದ ಐಡಿಎಸ್ಜಿ ಸರ್ಕಾರಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿ (ಎಂ.ಎಸ್ಸಿ.) ಹೊಸ ಕೋರ್ಸ್ನ್ನು ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗಿದೆ.
ಬಿ.ಎಸ್ಸಿ.ಯಲ್ಲಿ ಸಸ್ಯಶಾಸ್ತ್ರವನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಪ್ರವೇಶಾವಕಾಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಎಂ.ಎಸ್ಸಿ. ಸಸ್ಯಶಾಸ್ತ್ರ ಅಧ್ಯಯನಕ್ಕೆ ಏಕೈಕ ಅವಕಾಶ ಐಡಿಎಸ್ಜಿ ಕಾಲೇಜಿನಲ್ಲಿ ಕಲ್ಪಿಸಿದೆ. ಯುಜಿಸಿ ಮತ್ತು ನ್ಯಾಕ್ ಮಾನ್ಯತೆ ಲಭ್ಯವಾಗಿದೆ ಎಂದು ಪ್ರಾಂಶುಪಾಲೆ ಡಾ. ಜರೀನಾ ಕೌಸರ್ ತಿಳಿಸಿದ್ದು, ಮಾಹಿತಿಗಾಗಿ 08262- 220464 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

