ಚಿಕ್ಕಮಗಳೂರು

ಗೌರಿ ಕಾಲುವೆಗೆ ವಾರದಿಂದ ವಿದ್ಯುತ್ ಇಲ್ಲ: ಆರೋಪ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜು.14
ನಗರದ ಗೌರಿಕಾಲುವೆ ಬಡಾವಣೆ ಮೆಸ್ಕಾಂರವರ ಬೇಜವಬ್ದಾರಿಯಿಂದ ಕಳೆದ ಒಂದು ವಾರದಿಂದ ಕತ್ತಲೆಯ ಕೂಪವಾಗಿದೆ ಎಂದು ನಗರಸಭಾ ಸದಸ್ಯ ರೂಬೆನ್ ಮೋಸಸ್ ಆರೋಪಿಸಿದ್ದಾರೆ.
ಗೌರಿಕಾಲುವೆ 31ನೇ ವಾರ್ಡ್‌ನ ಬಲ್ಫ್ ಫ್ಯಾಕ್ಟರಿ ರಸ್ತೆಯಲ್ಲಿದ್ದ ಟ್ರಾನ್ಸ್ ಫಾರಂ ತೆಗೆದು ಸ್ಥಳಾಂತರಿಸಿದ ನಂತರ ಇಡೀ ಗೌರಿಕಾಲುವೆಯ ಬೀದಿ ದೀಪಗಳು ಹಾಳಾಗಿವೆ. ಬೆಳಿಗ್ಗೆ ರಿಪೇರಿ ಮಾಡಿಸಿದರೆ, ಸಂಜೆ ಬೀದಿ ದೀಪಗಳು ಹಾಳಾಗುತ್ತಿವೆ. ಇದಕ್ಕೆ ಮೆಸ್ಕಾಂ ಅಧಿಕಾರಿಗಳೇ ಕಾರಣ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಇಲ್ಲಿ ಅಳವಡಿಸಿರುವ ಟ್ರಾನ್ಸ್ ಫಾರಂನಿಂದ ವಿದ್ಯುತ್ ಕಂಬಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಹರಿದು ಬರುತ್ತಿದ್ದು, ಈ ಭಾಗದ ಕೆಲವು ಬೀದಿಗಳ ಮನೆಗಳಲ್ಲಿ ಮಿಕ್ಸಿ, ಟಿವಿ, ಫ್ರಿಜ್‌ಗಳು ಹಾಳಾಗಿದ್ದು, ಅರ್ಧ ಇಂಚು ಮೋಟಾರ್ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಹೇಳಿದ್ದಾರೆ.
ಮೊದಲೇ ಯುಜಿಡಿ ಕಾರ್ಯದಿಂದ ಬೀದಿಗಳು ಹಾಳಾಗಿದ್ದು, ಮಳೆ ಇರುವ ಕಾರಣ ಮಕ್ಕಳು, ವಯಸ್ಸಾದವರು ಸೇರಿದಂತೆ ಯಾರು ಓಡಾಡಲು ಸಾಧ್ಯವಾಗುತ್ತಿಲ್ಲ, ಮೆಸ್ಕಾಂಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಮೆಸ್ಕಾಂನ ಅಭಿಯಂತರರಿಗೆ ದೂರು ನೀಡಿದ್ದು, ಟ್ರಾನ್ಸ್ ಫಾರಂ ಸಮಸ್ಯೆಯಿಂದ ಹಾಳಾಗುತ್ತಿದ್ದು, ಹೊಸ ಟ್ರಾನ್ಸ್ ಫಾರಂ ಅಳವಡಿಸಲು ಸ್ಥಳದ ಕೊರತೆ ಇದೆ ಎಂದಾಗ ಸ್ಥಳವನ್ನು ತೋರಿಸಿದ್ದು, ತಿಂಗಳಾದರೂ ಟ್ರಾನ್ಸ್‌ಫಾರಂ ಅಳವಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದ್ದಾರೆ. ಕೂಡಲೇ ಟ್ರಾನ್ಸ್‌ಫಾರಂ ಅಳವಡಿಸದಿದ್ದರೇ ಮೆಸ್ಕಾಂ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.