ಚಿಕ್ಕಮಗಳೂರು

ಯುವಕ ಸಂಘದಿಂದ ಸ್ವಯಂ ಪ್ರೇರಿತ ಶ್ರಮದಾನ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.15
ವಾಮನಾ ಗ್ರೂಪ್ಸ್ ಯುವಕ ಸಂಘದಿಂದ ಹಿರೇಮಗಳೂರಿನ ಅಂಗನವಾಡಿ ಕೇಂದ್ರದ ಬಳಿ ಶ್ರಮದಾನ ನಡೆಯಿತು.
ವಾಮನಾ ಗ್ರೂಪ್ಸ್‌ನ ಯುವಕರು ಶ್ರಮದಾನದಲ್ಲಿ ಪಾಲ್ಗೊಂಡು ಅಂಗನವಾಡಿ ಸುತ್ತ ಮುತ್ತಲಿದ್ದ ಗಿಡ, ಗಂಟೆಗಳನ್ನು ಕಿತ್ತು ಹಾಕಿ, ಚರಂಡಿ ಸ್ವಚ್ಛಗೊಳಿಸಿದರು.
ಶ್ರಮದಾನದಲ್ಲಿ ಭಾಗವಹಿಸಿದ್ದ ನಗರಸಭಾ ಸದಸ್ಯ ಹೆಚ್.ಎಸ್. ಪುಟ್ಟಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದ ಸ್ವಚ್ಛತೆ ಕೊರತೆಯಿಂದ ಡೆಂಘೀ, ಕಾಲರ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳಿಗೆ ನಾಗರಿಕರು ತುತ್ತಾಗುತ್ತಿದ್ದಾರೆ. ಡೆಂಘೀನಿಂದ ಹಲವರು ಸಾವು ನೋವನ್ನು ಅನುಭವಿಸಿವೆ. ಈ ಸಂಬಂಧ ಹಿರೇಮಗಳೂರಿನಲ್ಲಿ ಯುವಕ ಸಂಘಗಳು ಸ್ವಯಂಪ್ರೇರಿತರಾಗಿ ಶ್ರಮದಾನಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸ್ವಚ್ಛತೆಗೆ ಒತ್ತು: ಇಲ್ಲಿನ ಅಂಗನವಾಡಿ ಕೇಂದ್ರದ ಸುತ್ತ ಗಿಡ ಗಂಟೆಗಳು ಬೆಳೆದಿದ್ದು, ಕಸ ಕಡ್ಡಿಗಳಿಂದ ಕೂಡಿರುವ ಕಾರಣ ನೊಣ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ಅಹ್ವಾನ ನೀಡುವ ಲಕ್ಷಣಗಳು ಹೆಚ್ಚಿದ್ದವು, ಇದನ್ನರಿತು ಸ್ಥಳೀಯ ಯುವಕರನ್ನು ಒಗ್ಗೂಡಿಸಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಜಾಗದಲ್ಲಿ ವ್ಯಾಯಾಮ ಶಾಲೆ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಲ್ಲಿ ಚರ್ಚಿಸಿ ಕ್ರಮಕೈಕೊಳ್ಳಲಾಗುವುದು ಎಂದು ಹೇಳಿದರು.
ಕೇಶವಮೂರ್ತಿ ಮಾತನಾಡಿ, ಹಿರೇಮಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದಿನಿಂದಲೂ ಗಿಡ ನೆಡುವ ಕಾರ್ಯಕ್ರಮ, ಶ್ರಮದಾನ ಸೇರಿದಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರ ಸಹಕಾರದಿಂದ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮಾದರಿ ಗ್ರಾಮವನ್ನಾಗಿ ಮಾಡುವ ಆಲೋಚನೆ ಹೊಂದಲಾಗಿದೆ ಎಂದರು.
ಸಿ.ಡಿ.ಎ. ಮಾಜಿ ಸದಸ್ಯ ಮಂಜುನಾಥ್, ಕೃಷ್ಣಮೂರ್ತಿ, ಜಗದೀಶ್ ಸೇರಿದಂತೆ ಯುವಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.