ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಮನವಿ
ಕಪ್ರ ವಾರ್ತೆ ಚಿಕ್ಕಮಗಳೂರು ಜು.16
ನಗರದ ಸಂತ ಜೋಸೆಫ್ ಶಾಲಾ ಮುಖ್ಯ ರಸ್ತೆಯಾದ ಪ್ರಭು ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಶಾಲಾ ಪೋಷಕರ ವೇದಿಕೆ ಆಗ್ರಹಿಸಿದೆ.
ಈ ಸಂಬಂಧ ವೇದಿಕೆಯ ಅಧ್ಯಕ್ಷ ಜೆ. ಸತ್ಯನಾರಾಯಣರವರ ನೇತೃತ್ವದಲ್ಲಿ ಸಂಘದ ಮುಖಂಡರು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಸತ್ಯನಾರಾಯಣ, ಈ ರಸ್ತೆಯು ಕೇವಲ 20 ಅಡಿಗಳಿದ್ದು ಇದೇ ರಸ್ತೆಯಲ್ಲಿ ಶಾಲೆಯು ಇದ್ದು ಸುಮಾರು 2 ಸಾವಿರ ವಿದ್ಯಾರ್ಥಿಗಳು ನರ್ಸರಿಯಿಂದ ಪದವಿ ಪೂರ್ವ ಕಾಲೇಜಿನವರೆಗೂ ವ್ಯಾಸಂಗ ಮಾಡುತ್ತಿದ್ದು, ಶಾಲೆ ಆರಂಭ ಮತ್ತು ಬಿಡುವ ಸಮಯದಲ್ಲಿ ಆ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಇದೆ. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಶಾಲಾ ಮಕ್ಕಳು ಮನೆಗೆ ತೆರಳಲು ಹರ ಸಾಹಸ ಪಡಬೇಕಾಗಿದೆ ಎಂದರು.
ಕಿರಿಗಾದ ರಸ್ತೆ: ಇದೇ ರಸ್ತೆಯಲ್ಲಿ ಹೋಟೆಲ್, ವರ್ಕ್ ಶಾಪ್, ಸುಮಾರು 8 ರಿಂದ 10 ಸಂಚಾರಿ ಖಾಸಗಿ ಬಸ್ಸು ನಿಲ್ಲುತ್ತವೆ. ಅಲ್ಲದೇ ದೊಡ್ಡದಾದ 3 ಖಾಸಗಿ ಆಸ್ಪತ್ರೆಗಳಿದ್ದು, ಇಲ್ಲಿನ ಪಾದಚಾರಿ ರಸ್ತೆಯ ಎರಡು ಕಡೆ ಆಕ್ರಮಿಸಿಕೊಂಡು ಪಾದಚಾರಿಗಳು ತಿರುಗಾಡಲು ಸಾಧ್ಯವಾಗದಂತೆ ಎತ್ತರವಾದ ಇಳಿಜಾರು ನಿರ್ಮಿಸಿಕೊಂಡಿರುವುದರಿಂದಲು ರಸ್ತೆ ಕಿರಿದಾಗಿ ಶಾಲಾ ಆರಂಭ ಮತ್ತು ಬಿಡುವ ಸಮಯದಲ್ಲಿ ರಸ್ತೆ ಕಿಕ್ಕಿರಿದು ಹಲವು ಅಪಘಾತಗಳು ಆಗಿರುವ ಉದಾಹರಣೆಯಿದೆ.
ಇದರ ಬಗ್ಗೆ ಸಂಬಂಧ ಪಟ್ಟವರಿಗೆ ಹಲವು ಬಾರಿ ಮನವಿ ಪತ್ರ ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೆಚ್ಚಿನ ಅಪಘಾತ ಸಂಭವಿಸುವ ಮೊದಲು ಸಂಭಂದಪಟ್ಟ ಅಧಿಕಾರಿಗಳು ಇನ್ನು ಮುಂದಾದರ ಎಚ್ಚೆತ್ತು ಇತ್ತ ಗಮನ ಹರಿಸಿ ಸಂತ ಜೋಸೆಫ್ ಶಾಲಾ ಮುಖ್ಯ ರಸ್ತೆಯಾದ ಪ್ರಭು ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಆಗ್ರಹಿಸಿದರು.
ಪಾದಚಾರಿಗಳಿಗೆ ತೊಂದರೆ: ಈ ಸಂದರ್ಭದಲ್ಲಿ ಮಾತನಾಡಿದ ಜನ ಜಾಗೃತಿ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ವಿಶ್ವನಾಥ್, ಈ ಕಾರ್ಯಕ್ಕೆ ಬೆಂಬಲ ನೀಡುತ್ತಾ ಚಿಕ್ಕಮಗಳೂರಿನ ಹಲವು ರಸ್ತೆಗಳು ಮುಂಜಾಗ್ರತೆಯಿಲ್ಲದ ಡಾಂಬರಿಕರಣದಿಂದ ನಗರದಲ್ಲಿ ಹಲವು ರಸ್ತೆಗಳು ಯಮದೂತರಂತೆ ವಾಹನ ಸವಾರರಿಗೂ ಹಾಗೂ ಪಾದಚಾರಿಗಳಿಗೂ ದುಃಸ್ವಪ್ನವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಲಯದ ಮೊರೆ ಹೋಗುವುದಾಗಿ ತಿಳಿಸಿದರು.
ಸಂಸ್ಥೆಯ ಸದಸ್ಯರಾದ ನವೀನ್ ಜೈನ್, ಅಬ್ದುಲ್ ಹಮೀದ್, ಕೆ.ಇ. ಇಕ್ಬಾಲ್, ನಾಗಲತಾ, ಸಂಚಾಲಕರಾದ ಎಸ್. ಚಂದ್ರಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

