ಚಿಕ್ಕಮಗಳೂರು

ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರ ಆಯ್ಕೆ

Published On :

ಕಡೂರು: ತಾಲೂಕಿನ ಫ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಿಳುವಾಲ ಸರ್ಕಾರಿ ಫ್ರೌಢಶಾಲೆ ದೈಹಿಕ ಶಿಕ್ಷಕ ತಾಲೂಕಿನ ಯಗಟಿಯ ವೈ.ಎಚ್. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಕಡೂರು ಪಟ್ಟಣದ ಸ.ಪ.ಪೂ. ಕಾಲೇಜು ಸಭಾಂಗಣದಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಫ್ರೌಢಶಾಲೆ ದೈಹಿಕ ಶಿಕ್ಷಕರ ತ್ರೈಮಾಸಿಕ ಸಭೆ ನಡೆದ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ವೈ.ಎಚ್. ಚಂದ್ರಶೇಖರ್, ಗೌರವಾಧ್ಯಕ್ಷರಾಗಿ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಕುಮಾರ್, ಉಪಾಧ್ಯಕ್ಷರಾಗಿ ವಡೇರಹಳ್ಳಿಯ ಚಿಕ್ಕೇಗೌಡ ಮತ್ತು ಕುಪ್ಪಾಳಿನ ಜಯಶೀಲ, ಕಾರ್ಯದರ್ಶಿಯಾಗಿ ಮತಿಘಟ್ಟದ ಮಹೇಶ್ವರಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಎಸ್. ಮಾದಾಪುರದ ಎಸ್.ಶ್ರೀಸಸ್ಶ್ರೀನಿವಾಸ್, ಖಜಾಂಚಿಯಾಗಿ ಹೋಚೀಹಳ್ಳಿಯ ಆನಂದ್ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಿ. ಯರದಕೆರೆಯ ವಿ.ಎನ್. ಮಂಜುನಾಥ್, ಸಿಂಗಟಗೆರೆಯ ಶಿವಕುಮಾರ್, ಯಗಟಿಯ ನವೀನ್, ಬಿಳುವಾಲದ ಬೇಲೂರಪ್ಪ ಮತ್ತು ಕಡೂರಿನ ಸುನಿತಾ ಆಯ್ಕೆಯಾಗಿದಾರೆ. ತಾಲೂಕಿನ ಪ್ರಾಥಮಿಕ ಹಾಗು ಫ್ರೌಢಶಾಲಾ ದೈಹಿಕ ಶಿಕ್ಷಕರ ತ್ರೈಮಾಸಿಕ ಸಭೆಯ ಅಧ್ಯಕ್ಷತೆಯನ್ನು ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ ವಹಿಸಿ ಮಾತನಾಡಿದರು. ಸಭೆಯಲ್ಲಿ ಕೆ.ಎಂ. ಶಾಂತಪ್ಪ, ರಾಜಕುಮಾರ್, ಜಿ.ಎಸ್. ಜಯಪ್ಪ, ಜಿ.ಜಿ.ಸಿ. ಪಾಂಡು ಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.